ಫೇಸ್ಬುಕ್ (Facebook) ಅಂತರ್ಜಾಲದಲ್ಲಿ ದೊಡ್ಡ ಪರಿವರ್ತನೆಯನ್ನೇ ಮಾಡಿತು. ಅದು ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ, ದಿನಾ ಹಲ್ಲು ಉಜ್ಜುವಂತೆ, ಈಗ ನಾವು ಎದ್ದ ಕೂಡಲೇ ಫೇಸ್ಬುಕ್ ಒಮ್ಮೆ ತೆರೆದು ನೋಡಿಯೇ ತೀರುತ್ತೇವೆ. ಇಲ್ಲದ್ದಿದ್ದರೆ ಆ ದಿನವೇ ನಮಗೆ ಪೂರ್ತಿ ಆಗಿಲ್ಲ ಎನ್ನುವಂತೆ ಭಾಸವಾಗುತ್ತದೆ. ಆದರೆ ಬರಬರುತ್ತ ಅದರ ನಡೆ ನಮಗೆ ಆಶ್ಚರ್ಯವನ್ನು ಉಂಟು ಮಾಡುತ್ತಿದೆ. ಮೊದಮೊದಲು ಬಳಕೆದಾರರೆ ದೇವರು ಎನ್ನುವಂತೆ ಬಿಂಬಿಸಿಕೊಂಡ ಅದು, ಕಡೆಗೆ ತಾನೇ ದೇವರು ಎನ್ನುವಂತೆ ವರ್ತಿಸುತ್ತಿದೆ. ಅದು ಯಾಕೆ ಹೀಗೆ ಮಾಡುತ್ತಿದೆ? ಏಕೆ ಏಕಸ್ವಾಮ್ಯದ ಧೋರಣೆಯನ್ನು ಹೊತ್ತಿದೆ? ಸಮಾಜದ ( Society) ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? ಎಂಬುದನ್ನು ತಿಳಿಯೋಣ ಬನ್ನಿ.
![]() |
ಫೇಸ್ಬುಕ್ ಹಾಗು ಅದರ ಒಡೆತನದ ಅಪ್ಪ್ಲಿಕೇಷನ್ಸ್ಗಳು |
ಕಥೆ:
ಈ ವಿಷಯದ ಬಗ್ಗೆ ಓದುವ ಮೊದಲು ಒಂದು ಸಣ್ಣ ಕಥೆ ಓದಿ.ಒಂದೂರಿನಲ್ಲಿ ಇಬ್ಬರೇ ವ್ಯಾಪಾರಿಗಳು ಮಸಾಲೆಯನ್ನು ಮಾರುತ್ತಾ ಇದ್ದರು.ಒಬ್ಬ ₹45 ಗೆ ಮಾರಿದರೆ ಇನ್ನೊಬ್ಬ, ಅದೇ ಗುಣಮಟ್ಟದ ಪದಾರ್ಥಗಳನ್ನು ₹25ಕ್ಕೆ ಮಾರುತ್ತಿದ್ದ. ಇದರಿಂದಾಗಿ 45 ರೂಪಾಯಿಯ ವ್ಯಾಪರಿಗೆ ನಷ್ಟ ಆಗತೊಡಗಿತು. ಇನ್ನು ಹೀಗೆ ಮುಂದುವರೆದರೆ ಉಳಿಗಾಲವಿಲ್ಲ ಎಂದು ತಿಳಿದ ಆತ, ಮರುದಿನ ಒಂದು ಉಪಾಯ ಮಾಡಿದ.ಸೋಗಿನಲ್ಲಿ ಹೋಗಿ, 25 ರೂಪಾಯಿಯವನ ಬಳಿ ಇದ್ದ ಎಲ್ಲಾ ಪದಾರ್ಥಗಳನ್ನು ಕೊಂಡು ತಂದ. ಬಂದವನೇ 45 ರೂಪಾಯಿ ಬದಲು 60 ರೂಪಾಯಿಗೆ ಮಾರಲು ಶುರು ಮಾಡಿದ. ಊರಲ್ಲಿ ಇದ್ದ ಇಬ್ಬರ ವ್ಯಾಪಾರಿಗಳ ಪೈಪೋಟಿ ಈಗ ಕೇವಲ ಅವನದು ಆಗಿತ್ತು. ಬೇರೆ ದಾರಿ ಇಲ್ಲದೆ ಜನ ಇವನ ಬಳಿ ಬಂದು ಖರೀದಿ ಮಾಡಬೇಕಾಯ್ತು.
ಈಗ ನಮ್ಮ ವಿಷಯಕ್ಕೆ ಬರೋಣ.
ಮಾರುಕಟ್ಟೆಯಲ್ಲಿ ತನಗೆ ಪ್ರಬಲ ಪೈಪೋಟಿ ಕೊಡುತ್ತಿದ್ದ ಕಂಪನಿಗಳನ್ನು ಕೊಂಡು, ಮಾರುಕಟ್ಟೆಯಲ್ಲಿ ಬೇರೇ ಯಾವುದೇ ರೀತಿಯ ಸೇವೆ ಸಿಗದಂತೆ ಮಾಡಿ, ಕೇವಲ ತನ್ನ ಸೇವೆಗಳ ಪ್ರಾಬಲ್ಯ ತೋರುವಂತೆ ಮಾಡಿರುವ ಜಗತ್ತಿನ ಅತೀ ದೊಡ್ಡ ಕಂಪೆನಿ ಎಂದರೆ- ಅದು ಫೇಸ್ಬುಕ್ (facebook).
![]() |
ಫೇಸ್‌ಬುಕ್‌ನ ಸಾಮಾಜಿಕ ನೆಟ್‌ವರ್ಕ್ ಡಾಮಿನೇಶನ್ ಚಾರ್ಟ್ |
ಇದು ಕೇವಲ ಬಾಯಮಾತಿನ ಹೇಳಿಕೆಯಲ್ಲ. ಸಾಕ್ಯ ಆಧರಿಸಿದ ಹೇಳಿಕೆಯಾಗಿದೆ. ಫೇಸ್ಬುಕ್ ನ ಈ ಆಟವನ್ನು ಕಂಡು ಹಿಡಿದು, ಯು.ಎಸ್ (US) ಹಾಗೂ ಯೂರೋಪಿಯನ್ ಎಜೆನ್ಸಿಗಳು (EU Agencies), ಫೇಸ್ಬುಕ್ ವಿರುದ್ಧ ಕ್ರಮ ತಗೆದುಕೊಂಡಿದ್ದು ನಿಮಗೆ ಗೊತ್ತೇ ಇದೆ.
ಸಂಭಾವ್ಯ ಪ್ರತಿಸ್ಪರ್ಧೆಯನ್ನು ಮುಗಿಸಿ ಹಾಕಿ, ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ಕಾಯ್ದಿರಿಸಲು, ಅನೈತಿಕ ಮಾರ್ಗಗಳ ಕಂಡು ಹಿಡಿದು, ಫೇಸ್‌ಬುಕ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಇಂತಹ ನಿಂದನೀಯ ಮಾರುಕಟ್ಟೆ ಅಭ್ಯಾಸಕ್ಕಾಗಿ ( Market Practices) ಯುಎಸ್ ಕಾಂಗ್ರೆಸ್‌ನ ಉಪಸಮಿತಿ, ವಾಣಿಜ್ಯ ಮತ್ತು ಆಡಳಿತಾತ್ಮಕ ಕಾನೂನುಗಳು ಅಥವಾ ಹೌಸ್ ಆಂಟಿಟ್ರಸ್ಟ್ ಸಮಿತಿಯಿಂದ ತೀರ್ಪನ್ನು ನೀಡಲಾಯಿತು. ಟೆಕ್ ದಿಗ್ಗಜರಾದ ಅಮೆಜಾನ್, ಆಪಲ್, ಗೂಗಲ್ ಮತ್ತು ಫೇಸ್‌ಬುಕ್ ಅಂತಹ ಕಂಪನಿಗಳ ವಿರುದ್ಧ ಈ ಬಗ್ಗೆ ಯುಎಸ್‌ಎ ತನಿಖೆಗಳನ್ನು ಹಲವು ಬಾರಿ ನಡೆಸಿದೆ. ಆ ಕಂಪನಿಗಳ ವಕ್ತಾರರು ಈ ವಿಚಾರಣೆಗೆ ಭೆಟ್ಟಿ ಕೊಟ್ಟಿರುವ ವಿಡಿಯೋಗಳನ್ನು ನೀವು ನೋಡಿರಬಹುದು.
ಏಕಸ್ವಾಮ್ಯ ಮಾರುಕಟ್ಟೆ ಕಟ್ಟುವ ಪ್ರಯತ್ನದ ಅಪರಾಧ
ಮುಖ್ಯವಾಗಿ ಜಾಹೀರಾತುಗಳಲ್ಲಿ
ಉಪಸಮಿತಿ ವರದಿಯ ಪ್ರಕಾರ, ಫೇಸ್‌ಬುಕ್ ಸಾಮಾಜಿಕ ಜಾಲತಾಣದ ಮಾರುಕಟ್ಟೆಯಲ್ಲಿ ಏಕಸ್ವಾಮ್ಯದ ( Monopoly ) ಅಧಿಕಾರವನ್ನು ಸ್ಥಾಪಿಸಿದೆ ಎಂದು ದೂಷಿಸಿತು. ಫೇಸ್‌ಬುಕ್ ನ ಹಲವಾರು ಉನ್ನತ ಶ್ರೇಣಿಯ ಕಾರ್ಯನಿರ್ವಾಹಕರು, ಮಾರ್ಕ ಝುಕರಬರ್ಗ ನನ್ನು ಸೇರಿಸಿ, ತಾವು ಏಕಸ್ವಾಮ್ಯದ ಅಧಿಕಾರವನ್ನು ಬಳಸಿಲ್ಲ ಎಂದು ನಿಷ್ಠುರವಾಗಿ ಹೇಳಿಕೆ ಕೊಟ್ಟರು. ಮನವೊಲಿಸಲು ಅನೇಕ ಬಾರಿ ಪ್ರಯತ್ನಿಸಿದರು. ಕಂಪನಿ ಒಳಗಿನ ಆಂತರಿಕ ಸಂವಹನಗಳನ್ನು ಮತ್ತು ಕಾರ್ಯಗಳನ್ನು ವಿಚಾರಣೆಗೆ ಒಳಪಡಿಸಿದ ಉಪಸಮಿತಿ ವರದಿಯು, ನಂತರ ಅದರ ಮೌಲ್ಯಮಾಪನವನ್ನೂ ಸಹ ಮಾಡಿತು. ತಮ್ಮ ಮಾರುಕಟ್ಟೆಗೆ ಮುಂದೆ ಮುಳ್ಳಾಗಿ ಚುಚ್ಚುವಂತಿದ್ದ ಅನೇಕ ಪ್ರತಿಸ್ಪರ್ಧಿಗಳನ್ನು (competitor) ಮುಗಿಸಿ ಹಾಕುವ ಹುನ್ನಾರವನ್ನು ಮಾಡಿತು ಈ ಫೇಸ್ಬುಕ್. ತನ್ನ ಮುಂದೆ ಅಥವಾ ತನ್ನ ವಿರುದ್ಧ ಯಾವುದೇ ರೀತಿಯಲ್ಲಿ ಸ್ಪರ್ಧೆ ಉಂಟಾಗಬಾರದು ಎಂದು, ಮತ್ತು ತನ್ನ ಸಾಮ್ರಾಜ್ಯವನ್ನು ಅಗಾಧವಾಗಿ ವಿಸ್ತರಿಸಲು ಸರಿ ಸುಮಾರು 100 ಕಂಪನಿಗಳನ್ನು ಫೇಸ್ಬುಕ್ ಸ್ವಾಧೀನ (acquire) ಪಡಿಸಿಕೊಂಡಿತು. ಉಪ ಸಮಿತಿಯು ಇದನ್ನು ಮೌಲ್ಯಮಾಪನದ ಸಮಯದಲ್ಲಿ ಕಂಡುಹಿಡಿಯಿತು.
![]() |
ಫೇಸ್ಬುಕ್ ಕಂಪನಿಯ ಆಕ್ಟಿವ್ ಬಳಕೆದಾರರು |
ವಿವಾದಾತ್ಮಕವಾಗಿ, ಇನ್‌ಸ್ಟಾಗ್ರಾಮ್ (Instagram) ಅನ್ನು ಫೇಸ್‌ಬುಕ್ ಸ್ವಾಧೀನ ಪಡಿಸಿಕೊಂಡ ಬೆನ್ನಲ್ಲೇ ಉಪಸಮಿತಿಯು ( subcommittee) ಫೇಸ್ಬುಕ್ ನ ಬೆನ್ನು ಬಿತ್ತು. ಸ್ವಾಧೀನ ಪ್ರಕ್ರಿಯೆ ಮುಗಿದ ಬಳಿಕ ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್‌ನೊಂದಿಗೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ, ಇನ್‌ಸ್ಟಾಗ್ರಾಮ್ ಸ್ಥಾಪಕ ಕೆವಿನ್ ಸಿಸ್ಟ್ರೋಮ್, ಫೇಸ್‌ಬುಕ್ ಗುಂಪಿನಿಂದ ಹೊರಬಂದರು. ಮಾಜಿ ಫೇಸ್‌ಬುಕ್ ಡೇಟಾ ವಿಜ್ಞಾನಿ ಥಾಮಸ್ ಕನ್ನಿಂಗ್‌ಹ್ಯಾಮ್ , ಅಕ್ಟೋಬರ್ 2018 ರಲ್ಲಿ ಫೇಸ್‌ಬುಕ್ನ ಚಟುವಟಿಕೆಗಳ ಪಟ್ಟಿಯ ಕರಡನ್ನು ತಯಾರಿಸಿದಾಗ, ಅದರಲ್ಲಿ ಇನ್ಸ್ಟಾಗ್ರಾಮ್ ಅನ್ನು ಅವರ ತೆಕ್ಕೆಗೆ ತಗೆದುಕೊಳ್ಳಲು ಪ್ರಯತ್ನಿಸಿದರು. ಸ್ವಾರಸ್ಯ ಏನೆಂದರೆ, ಸ್ವಾಧೀನ ಪಡಿಸಿಕೊಂಡ ನಂತರವೂ ಸಹ ಇನ್ಸ್ಟಾಗ್ರಾಮ್ ಹಾಗು ಫೇಸ್ಬುಕ್ ನ ನಡುವೆ ಸ್ಪರ್ಧೆಯನ್ನು ವಿಲೀನ ಮಾಡಲಾಗಲಿಲ್ಲ. ಒಂದಕ್ಕೆ ಒಂದು ವಿರುದ್ಧವಾಗಿ ಸ್ಪರ್ಧಿಸಲಿಲ್ಲ. ಇದರಿಂದಾಗಿ ಇನ್ಸ್ಟಾಗ್ರಾಮ್ ನ ಆರ್ಗಾನಿಕ್ ರೇಟ್ ಮೇಲೆ ಪರಿಣಾಮವಾಯಿತು.
ವರದಿಯ ಉಲ್ಲೇಖಗಳು:
"ಫೇಸ್‌ಬುಕ್ ಅಸ್ಪರ್ಧಾತ್ಮಕ ವ್ಯಾಪಾರಿ ನಿಯಮಗಳನ್ನು ಹೊರಡುಸುವುದರ ಮೂಲಕ ತನ್ನ ಏಕಸ್ವಾಮ್ಯತೆಯನ್ನು ( Monopoly) ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿತು. ಹೊಸ ಸ್ಪರ್ಧಾತ್ಮಕ ಬೆದರಿಕೆಗಳನ್ನು ಗುರುತಿಸಲು ಮತ್ತು ನಂತರ ಅಂತಹ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು, ನಕಲಿಸಲು ಅಥವಾ ಅದರ ಅಸ್ತಿತ್ವವನ್ನೇ ಮುಗಿಸಿ ಹಾಕಲು, ಕಂಪನಿಯು ಉನ್ನತ ದರ್ಜೆಯ ಬುದ್ಧಿಮತ್ತೆಯನ್ನು (AI) ಸೃಷ್ಟಿಸಲು, ತನ್ನ ಬಳಿಯಿದ್ದ ಡೇಟಾವನ್ನು ಬಳಸಿತು. ಒಂದು ಕಾಲದಲ್ಲಿ ಪ್ರಬಲವಾಗಿದ್ದ ಫೇಸ್‌ಬುಕ್ ತನ್ನ ಪ್ಲಾಟ್‌ಫಾರ್ಮ್ ಪಾಲಿಸಿಗಳನ್ನು, ಪೈಪೋಟಿ ನೀಡುವ ಇತರ ಕಂಪನಿಗಳನ್ನು ಸ್ಪರ್ಧಾತ್ಮಕ ಬೆದರಿಕೆಗಳನ್ನು ಆಧರಿಸಿ, ಆಯ್ದ ರೀತಿಯಲ್ಲಿ ಜಾರಿಗೊಳಿಸಿತು. ಹಾಗೆ ಮಾಡುವಾಗ, ಅದು ತನ್ನ ಸೇವೆಗಳಿಗೆ ಅನುಕೂಲ ಮಾಡಿಕೊಂಡು, ಇತರ ಸಂಸ್ಥೆಗಳನ್ನು ದುರ್ಬಲಗೊಳಿಸಿತು, "ಎಂದು ಉಪಸಮಿತಿಯ ವರದಿಯು ಹೇಳಿತು.
"ಯಾವುದೇ ಗಮನಾರ್ಹ ಪ್ರತಿಸ್ಪರ್ಧಿಯು (Competitor) ಇರದ ಕಾರಣ ಮತ್ತು ಇಲ್ಲದೇ ಇರುವ ಹಾಗೆ ನೋಡಿಕೊಂಡ ಕಾರಣ, ಫೇಸ್‌ಬುಕ್ ಪ್ಲಾಟ್‌ಫಾರ್ಮ್‌ನ ಗುಣಮಟ್ಟವು, ಯಾವುದೇ ರೀತಿಯ ಮಾನದಂಡವಿಲ್ಲದೆ ಹದಗೆಟ್ಟಿದೆ " ಎಂದು ಉಪಸಮಿತಿಯು ವ್ಯಾಖ್ಯಾನಿಸುವುದರ ಮೂಲಕ ಫೇಸ್ಬುಕ್ ವಿರುದ್ಧದ ವರದಿಯನ್ನು ಕೊನೆಗೊಳ್ಳಿಸಿತು.
ಏಕಸ್ವಾಮ್ಯದ ಪರಿಣಾಮಗಳು:
ಇದರಿಂದಾಗಿ ಗೌಪ್ಯತೆ ಪ್ರೋಟೋಕಾಲ್‌ಗಳು ದುರ್ಬಲಗೊಂಡವು, ಮತ್ತು ತಪ್ಪು ಮಾಹಿತಿಗಳು ಎಗ್ಗಿಲ್ಲದೆ ಫೇಸ್‌ಬುಕ್‌ನಲ್ಲಿ ಹರಿದಾಡಲು ಶುರು ಮಾಡಿದವು. ಇದು ಈಗಿನ ಸಮುದಾಯಕ್ಕೆ ಒಳ್ಳೆಯ ಬೆಳೆವಣಿಗೆ ಅಲ್ಲ. ನಮಗೆ ಗೊತ್ತಿಲ್ಲದಂತೆ ನಮ್ಮ ಮಾಹಿತಿ ಸೋರಿಕೆ ಆಗುವುದು ಮತ್ತು ಆಧಾರ ರಹಿತ ಸುಳ್ಳು ಮಾಹಿತಿಗಳನ್ನು ನಂಬಿ ಮೋಸ ಹೋಗುವುದು ನಮ್ಮಜೀವನಕ್ಕೆ ಹಾನಿಕಾರಕ. ಎಲ್ಲೋ ಒಂದೆಡೆ ನಿಮಗೆ ಅನಿಸಬಹುದು, ಇದಕ್ಕೆಲ್ಲಾ ಫೇಸ್ಬುಕ್ ನ ಏಕಸ್ವಾಮ್ಯದ ನಡಿಗೆಯೇ ಕಾರಣ ಇರಬಹುದು ಎಂದು. ನಿಮ್ಮ ಊಹೆ ಸರಿಯಾಗಿದೆ.
ಕಡೆಯದಾಗಿ,
ಉದಾಹರೆಣೆಗೆ, ಟಾಟಾ ಮೋಟರ್ಸ್ ತಗೆದುಕೊಳ್ಳೋಣ. ಬರೀ ಶ್ರೀಮಂತರ ವಸ್ತುವಾಗಿದ್ದ ಕಾರ್ ಅನ್ನು, ಸಾಮಾನ್ಯ ಜನರು ಬಳುಸುವಂತಹ ಕಾರ್ ಅನ್ನು ಮಾಡದೇ ಇರುತ್ತಿದ್ದರೆ, ಆಟೋಮೊಬೈಲ್ ಇಂಡಸ್ಟ್ರಿ ಅಲ್ಲಿ ಕ್ರಾಂತಿಯೇ ಆಗುತ್ತಿರಲಿಲ್ಲ. ಬಲವಾದ ಪ್ರತಿಸ್ಪರ್ಧಿಯೊಬ್ಬ (Competitor) ಎದುರಾದಾಗ, ಅಲ್ಲಿ ಆರೋಗ್ಯಕರ ಸೇವಾ ಪ್ರವೃತ್ತಿ ಬೆಳೆಯುತ್ತದೆ. ಅಂತೆಯೇ ಫೇಸ್ಬುಕ್ ಸಹ ತನ್ನ ಪ್ರತಿಸ್ಪರ್ಧಿಗಳಿಗೆ ಸವಾಲು ಎಸೆದು, ಉತ್ತಮ ಸೇವೆ ನೀಡುವಲ್ಲಿ ಗಮನ ಹರಿಸಿದ್ದರೇ, ಇಷ್ಟೊತ್ತಿಗಾಗಲೇ ಸಾಕಷ್ಟು ಪ್ರಗತಿಯನ್ನು ಸಾಧಿಸುತಿತ್ತು.
ಮೂಲಗಳು,
1ಕಾಮೆಂಟ್‌ಗಳು
ಧನ್ಯವಾದಗಳು
ಪ್ರತ್ಯುತ್ತರಅಳಿಸಿ