ಜಾಹಿರಾತು

"ಲವ್ ಜಿಹಾದ್"- ಭಾರತದಲ್ಲಿ ಸೃಷ್ಟಿಗೊಂಡ ಪರ್ಯಾಯ ವಾಸ್ತವ (Alternate Reality)

 ನವೆಂಬರ್  24, 2020. ಭಾರತ ದೇಶದ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯ ಸರ್ಕಾರವೊಂದು ಹೊಸ ಸುಗ್ರೀವಾಜ್ಞೆ ಹೊರಡಿಸಿತು. ವಿವಾಹಕ್ಕಾಗಿ ಬಲವಂತ ಮಾಡಿ ಮತಾಂತರ ಮಾಡುವುದನ್ನು ನಿಲ್ಲಿಸಲು ಈ ಆಜ್ಞೆಯನ್ನು ಹೊರಡಿಸಲಾಯ್ತು. ಇದಕ್ಕೆ "ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ಸುಗ್ರೀವಾಜ್ಞೆ" ಎಂದು ಕರೆಯಲಾಯಿತು. ಇದು ಬಂದಿದ್ದೆ ತಡ. ದೇಶಾದ್ಯಂತ ಮಾಧ್ಯಮಗಳು ಇದರ ಬಗ್ಗೆ ಪ್ರಚಾರ ಮಾಡಲು ಶುರು ಮಾಡಿದವು. ವೀಕ್ಷಕರು ಇದನ್ನು ನೋಡಲೇ ಬೇಕು, ಕವರೇಜ್ ಸಿಗಬೇಕು ಎಂದು, ಮಾಧ್ಯಮಗಳು ಇದಕ್ಕೆ "ಲವ್ ಜಿಹಾದ್" ಎಂಬ ಹೊಸ ಹೆಸರನ್ನು ಕೂಡ ಕೊಟ್ಟವು. ಆ ಆಜ್ಞೆಗೆ ಹೊಸ ತಳಕನ್ನು ಸಹ ಹಾಕಿಕೊಟ್ಟವು. 

Disclaimer : This article is intended to highlight the social issue in India and is not meant to spread hate or crime or violence. Article is written unbiased on the selected topic. If you find this aggressive/uncomfortable, please skip this article. 

ಕೆಲವೇ ತಿಂಗಳುಗಳ ಬಳಿಕ , ಈ ಆಜ್ಞೆಯನ್ನು ಉತ್ತರ ಪ್ರದೇಶ ಶಾಸಕಾಂಗ ಸಭೆಯಲ್ಲಿ ಕಾಯ್ದೆಯಾಗಿ ಮಾಡಲಾಯ್ತು.

"ಮದುವೆಗೆ ಧಾರ್ಮಿಕ ಪರಿವರ್ತನೆ ಅಗತ್ಯವಿಲ್ಲ ಮತ್ತು ಆದ್ದರಿಂದ ಇದನ್ನು ಅನುಮತಿಸಬಾರದು. ಆದ್ದರಿಂದ, ಲವ್ ಜಿಹಾದ್ ಅನ್ನು ತಡೆಯಲು ಸರ್ಕಾರ ನಿರ್ಧರಿಸಿದೆ" ಎಂದು ಯೋಗಿಜೀ ಭಾಷಣ ಸಹ ಮಾಡಿದರು.

ಇದು ಕೇವಲ ಭಾರತದ ಒಂದೇ ಒಂದು ರಾಜ್ಯದಲ್ಲಿ ನಡೆಯುತ್ತಿರುವ ಘಟನೆ ಇರಬೇಕು ಎಂದು ನಿಮಗೆ ಭಾಸವಾಗಬಹುದು.ಆದರೆ ಭಾರತದ ಬೇರೆ ಬೇರೆ ರಾಜ್ಯಗಳಾದ ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಇಂತಹ ಕಾನೂನುಗಳನ್ನು ಪರಿಚಯಿಸಿವೆ. ಈ ರಾಜ್ಯಗಳ ಹೆಸರು ಕೇಳಿದ ಕೂಡಲೇ, ಇದು ಬಿಜೆಪಿ ಸರ್ಕಾರದ ಕೆಲಸ ಎಂಬ ನಿರ್ಧಾರಕ್ಕೆ ಬಂದೆ ಬಿಡುತ್ತೀರಿ. ಬಿಜೆಪಿ ತನ್ನ ಹಿಂದುತ್ವವಾದವನ್ನು ಪಸರಿಸಲು ಈ ರೀತಿ ತನ್ನ ಸರ್ಕಾರಗಳಲ್ಲಿ ಕಾನೂನು ತರುತ್ತಿದೆ ಎಂದು ದೂಷಿಸುತ್ತೀರಿ. ಆದರೆ ಈ ಕಾಯ್ದೆಯನ್ನು ಎಷ್ಟೋ ಭಾರತೀಯ ನಾಗರಿಕರು ಸ್ವಾಗತಿಸಿದ್ದಾರೆ. ಸರ್ಕಾರಗಳ ಈ ಕಾನೂನಿಗೆ ಬೆಂಬಲ ಸಹ ನೀಡುತ್ತಿದ್ದಾರೆ.

Love-Jihad-India
Love Jihad Portrayal

ಪ್ಯೂ ಸಂಶೋಧನಾ ವರದಿ

2021 ರಲ್ಲಿ 'ಪ್ಯೂ ಇನ್ಸ್ಟಿಟ್ಯೂಟ್' ಸಂಶೋಧನಾ ಅಧ್ಯಯನದ ವರದಿಯೊಂದನ್ನು ಪ್ರಕಟಿಸಿತು. ಭಾರತದ 76%ರಷ್ಟು ಹಿಂದೂಗಳು, ತಮ್ಮ ಜಾತಿಯ ಹೆಣ್ಣು ಮಕ್ಕಳು ಈ ರೀತಿಯ ಅಂತರ್ಜಾತಿ ವಿವಾಹಕ್ಕೆ ಬಲಿಯಾಗುವುದನ್ನು ತಡೆಯಲು, ಇಂತಹ ಕಾನೂನು ಬರಲೇ ಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಂತಹ ಹಲವು ಪ್ರಕರಣಗಳನ್ನು ಕಂಡ ನಂತರ ಈ ರೀತಿಯ ಬೇಡಿಕೆಯನ್ನು ಇಟ್ಟಿದ್ದಾರೆ.

2019ರಲ್ಲಿ ನಡೆದ ಒಂದು ಪ್ರಕರಣ ಉದಾಹರಣೆ ಆಗಬಹುದು. ಇಬ್ರಾಹಿಂ ಮತ್ತು ಅಂಜಲಿ ಎಂಬ ಎರಡು ವಯಸ್ಕರು, ತಮ್ಮ ಇಚ್ಛೆಯಂತೆ ಮಾಡುವಯಾದರು. ಮದುವೆಯ ಬಳಿಕ ಅಂಜಲಿ ತನ್ನ ಪಾಲಕರನ್ನು ಒಪ್ಪಿಸಲು ಹೋದಾಗ, ಅವಳ ತಂದೆ ಅವಳನ್ನು ಒಂದು ಕೋಣೆಯಲ್ಲಿ  ಕೂಡಿಹಾಕಿದರು. ಅವಳು ಮಾನಸಿಕ ಅಸ್ವಸ್ಥೆ ಎಂದು ಹಣೆಪಟ್ಟಿ ಕಟ್ಟಿ, ಹುಚ್ಚಾಸ್ಪತ್ರೆಗೆ ದಾಖಲು ಸಹ ಮಾಡಿದರು.

ಕಾನೂನು ಮಾಡಿದರು ಸಹ, ಅಂಕಿ ಅಂಶಗಳನ್ನು ಗಮನಿಸಿದಾಗ, ಅಂತರ್ಜಾತಿ ವಿವಾಹಗಳು ಭಾರತದಲ್ಲಿ ಹೇರಳವಾಗಿ ಇಲ್ಲ. ಪ್ಯೂ ಸಂಶೋಧನಾ ಅಧ್ಯಯನದ ಪ್ರಕಾರ ಅಧ್ಯನದಲ್ಲಿ ಭಾಗವಹಿಸಿದ 0.7% ಜನರು, ಹಿಂದೂ ಆಗಿ ಬೆಳೆದರು, ಈಗ ಬೇರೆ ಜಾತಿಗೆ ಸೇರಿದ್ದಾರೆ ಎಂದೂ , ಮತ್ತು 0.8% ಜನರು ಮೊದಲು ಬೇರೆ ಜಾತಿಯಲ್ಲಿ ಹುಟ್ಟಿದರೂ ಈಗ ಹಿಂದೂ ಆಗಿ ಜೀವನ ನಡೆಸುತ್ತಿದ್ದಾರೆ.

ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆ

2005 ರಲ್ಲಿ ನಡೆದ ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆಯ ಪ್ರಕಾರ, ವಿವಾಹವಾದ ಹೆಣ್ಣು ಮಕ್ಕಳಲ್ಲಿ, ಕೇವಲ 2.2%ರಷ್ಟು  ಜನ ಅಂತರ್ಜಾತಿ ವಿವಾಹವಾಗಿದ್ದಾರೆ. ಇಂತಹ ಅಂತರ್ಧರ್ಮಿಯ ಮದುವೆಗಳಲ್ಲಿ, ಹೆಚ್ಚಿನವರು ಕ್ರಿಶ್ಚಿಯನ್ ಮತ್ತು ಸಿಖ್ ಧರ್ಮೀಯರು ಆಗಿದ್ದು, ಹಿಂದೂಗಳು ತೀರಾ ಕಡಿಮೆ ಎಂದು ಹೇಳಲಾಗಿದೆ. ನೀವು ಎಲ್ಲಾದರೂ ಟಿವಿ ತುಂಬಾ ನೋಡುತ್ತಿದ್ದರೆ, ಅಥವಾ ಚುನಾವಣೆ ಪ್ರಚಾರಗಳಲ್ಲಿ ಭಾಗವಸಿದ್ದರೆ, ಇದರ ಬಗ್ಗೆ ಹೆಚ್ಚು ಮಾತನಾಡಿದ್ದು ಕೇಳಿರುತ್ತೀರಿ. ಆದರೆ ಅಂಕಿ ಅಂಶಗಳ ಆಧಾರದ ಮೇಲೆ, ಇದು ಸಮಸ್ಯೆಯೇ ಅಲ್ಲ ಎಂದು ಹೇಳಲು ಯಾರು ಮುಂದು ಬರುವುದಿಲ್ಲ. ಇಷ್ಟೆಲ್ಲಾ ಮಾಹಿತಿ ಕಣ್ಮುಂದೆ ಇದ್ದರು ಸಹ, ಜನ ವ್ಯತಿರಿಕ್ತ ಭಾವನೆ ಹೊಂದಿರುವುದು ಒಂದು ವಿಪರ್ಯಾಸ. ಈ ಲೇಖನದಲ್ಲಿ ನಾವು ಹೇಗೆ ಈ 'ಲವ್ ಜಿಹಾದ್' ಎನ್ನುವ ಸಮಸ್ಯೆಯನ್ನು ಉಲ್ಬಣಗೊಳಿಸಿದ್ದಾರೆ ಮತ್ತು ಜನರನ್ನು ಹೇಗೆ ನಂಬಿಸುತ್ತಿದ್ದಾರೆ ಎಂದು ತಿಳಿಯೋಣ. 

ಶುದ್ಧಿ ಚಳುವಳಿ

2014ರಿಂದ ಈಚೆಗೆ ಈ ಶಬ್ದ ಸುದ್ದಿಯಲ್ಲಿ ಇತ್ತು ಎಂಬ ಕಾರಣಕ್ಕೆ , ಲವ್ ಜಿಹಾದ್ ಅನ್ನು ಬಿಜೆಪಿ ಸರ್ಕಾರಗಳು ರೂಪಿಸಿದ ಷಡ್ಯಂತ್ರ ಎಂದು ನೀವು ಅಂದುಕೊಂಡಿರಬಹುದು. ಆದರೆ ಇದನ್ನು ನಾವು 1920 ರ ದಶಕದ "ಶುದ್ಧಿ ಚಳುವಳಿ"ಯಿಂದಲೂ ಗಮನಿಸಬಹುದು. ಬೇರೆ ಧರ್ಮಕ್ಕೆ ಮತಾಂತರಗೊಂಡ ಅನೇಕ ಹಿಂದುಗಳನ್ನು ಮತ್ತೆ ವಾಪಾಸ್ ಹಿಂದೂ ಧರ್ಮಕ್ಕೆ ತರುವುದೇ ಈ ಚಳುವಳಿಯ ಉದ್ದೇಶವಾಗಿತ್ತು.

ಇದರ ಬಗ್ಗೆ ಸಂಶೋಧನಾ ಪ್ರಬಂಧ ಬರೆದ 'ಚಾರು ಗುಪ್ತಾ' ಅವರು ಹೇಳುವಂತೆ ಆರ್ಯ ಸಮಾಜ 'ಶುದ್ಧಿ ಚಳುವಳಿಯನ್ನು' ಮುನ್ನಡೆಸಿತ್ತು.  ಮುಸ್ಲಿಂ ಯುವಕರಿಂದ ಮತಾಂತರಗೊಂಡ ಹಿಂದೂ ಮಹಿಳೆಯರನ್ನು ಹಿಂದೂ ಧರ್ಮಕ್ಕೆ ಮರಳಿ ತರುವುದೇ ಇದರ ಮೂಲ ಉದ್ದೇಶವಾಗಿತ್ತು ಎಂದು ಅವರು ಉಲ್ಲೇಖಿಸುತ್ತಾರೆ. ಈ ಒಂದು ಅಭಿಯಾನವನ್ನು ಯಶಸ್ವಿಗೊಳಿಸಲು ಪತ್ರಿಕೆಗಳನ್ನು, ಕರಪತ್ರಗಳನ್ನು, ಪೋಸ್ಟರ್ ಗಳನ್ನು ಮಾಧ್ಯಮವಾಗಿ ಬಳಸಿಕೊಳ್ಳಲಾಗಿತ್ತು. ಇವುಗಳಲ್ಲಿ ಮುಸ್ಲಿಂ ಸಮುದಾಯದ ಪುರುಷರನ್ನು ಖಳನಾಯಕನಂತೆ ಬಿಂಬಿಸಲಾಗಿತ್ತು.

ಇಂತಹ ಒಂದು ಸಂದರ್ಭದಲ್ಲಿ, ಅನೇಕ ಕವಿತೆಗಳು ಸಹ ( ಹಿಂದಿಯಲ್ಲಿ ) ತುಂಬಾ ಪ್ರಸಿದ್ಧಿ ಹೊಂದಿದವು. ಉದಾಹರಣೆಗೆ, 1928 ರಲ್ಲಿ ಬರೆದ " ಚಾಂದ್ ಮುಸ್ಲಮಾನೋ ಕಿ ಹರಕತೆ" ಎಂಬ ಕವಿತೆ. ಇದರ ಕಚ್ಚಾ ಭಾಷಾಂತರ ಇಂತಿದೆ. " ಅಧಿಕಾರಕ್ಕಾಗಿ/  ಶಕ್ತಿಗಾಗಿ ಅವರು ಅವಿರತ ಶ್ರಮ ಪಟ್ಟರು, ಮುಸ್ಲಿಂಗೆ ಮತಾಂತರ ಮಾಡಲು, ಬೀದಿಗಳಲ್ಲೆಲ್ಲಾ ತಿರುಗಿದರು , ಮಹಿಳೆಯರನ್ನು ಮೋದಿ ಮಾಡಲು" ಎಂದು. ಈ ಅಭಿಯಾನ ಎಷ್ಟರ ಮಟ್ಟಿಗೆ ಜನಪ್ರಿಯವಾಯಿತೆಂದರೆ, ಹಿಂದೂ ಮಹಾಸಭಾ ತನ್ನ ಸ್ವಯಂ ಸೇವಕರನ್ನು ಬನಾರಸ್ ನ ರೈಲು ನಿಲ್ದಾಣಗಳಲ್ಲಿ ಘೋಷಣೆ ಕೂಗಲು ನೇಮಿಸಿತು. ಹಿಂದೂ ಮಹಿಳೆಯರು ಮುಸ್ಲಿಂ ಪುರುಷರೊಂದಿಗೆ ಓಡಿಹೋಗುವುದನ್ನು ತಡೆಯಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದು ಅದರ ಉದ್ದೇಶವಾಗಿತ್ತು.

ಇದರಿಂದ ತಿಳಿಯುವ ವಿಷಯ ಏನೆಂದರೆ, ಈ ಲವ್ ಜಿಹಾದ್ ಎನ್ನುವುದು ಈಗ ಹುಟ್ಟಿರುವ ಸಮಸ್ಯೆಯಲ್ಲ. ಮೊದಲಿಂದಲೂ ಚಾಲ್ತಿಯಲ್ಲಿ ಇರುವ ಕಳಕಳಿಯ ವಿಚಾರವಾಗಿದೆ.

ಮೊದಲ ಬಿಸಿ-ಕರ್ನಾಟಕ ಸರ್ಕಾರದ ತನಿಖೆ

ಆದರೆ ಪ್ರಸಕ್ತ ವಿದ್ಯಮಾನದಲ್ಲಿ ಇದರ ಮೊದಲ ಬಿಸಿ ಶುರುವಾಗಿದ್ದು 2009ರಲ್ಲಿ. ನಮ್ಮ ಕರ್ನಾಟಕದ ಬಿಜೆಪಿ ನೇತೃತ್ವದ ಸರ್ಕಾರವು, ಎರಡು ಮುಸ್ಲಿಂ ರಾಜಕೀಯ ಸಂಘಟನೆಗಳಾದ - ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಕ್ಯಾಂಪಸ್ ಫ್ರಂಟ್ ಗೆ ಸಂಬಂಧಿಸಿದ ಮುಸ್ಲಿಂ ಪುರುಷರ ವಿರುದ್ಧ ತನಿಖೆ ಅರಾಂಭಿದಾಗ. ಈ ಪುರುಷರು, ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು ಓಲೈಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ರಾಜ್ಯಸರ್ಕಾರ ತನಿಖೆಯನ್ನು ಆರಂಭಿಸಿತು. ಇಷ್ಟೆಲ್ಲಾ ಆಧಾರಗಳನ್ನು ಇಟ್ಟುಕೊಂಡು ಕೆಲಸ ಮಾಡಿದರು ಸಹ ಲವ್ ಜಿಹಾದ್ ಬಗ್ಗೆ ಪುರಾವೆ ಸಿಗದ ಕಾರಣ ಸರ್ಕಾರದ ಆರೋಪಗಳನ್ನು ತಳ್ಳಿ ಹಾಕಿ, ಅದೇ ವರ್ಷದಲ್ಲಿ ಈ ಕೇಸ್ ಅನ್ನು ಮುಚ್ಚಲಾಯಿತು. ಬಿಜೆಪಿ ಸರ್ಕಾರ ಸಹ ತಮ್ಮ ಬಳಿ ಲವ್ ಜಿಹಾದ್ ಬಗೆಗಿನ ಯಾವುದೇ ಪುರಾವೆ ಅಥವಾ ಡೇಟಾ ಬ್ಯಾಂಕ್ ಇಲ್ಲ ಎಂದು ಹೇಳಿಕೊಂಡಿತು.

ಶಿಕ್ಷಣ ತಜ್ಞರ ಅಭಿಪ್ರಾಯ ಮತ್ತು ಅವರ ಪುಸ್ತಕದ ವಿಷಯ

ಶಿಕ್ಷಣ ತಜ್ಞರಾದ ಶಿವಂ ಶಂಕರ್ ಸಿಂಗ್ ಮತ್ತು ಆನಂದ್ ವೆಂಕಟ ನಾರಾಯಣರವರ ಪ್ರಕಾರ, ಲವ್ ಜಿಹಾದ್ ನ ಈ ವಿದ್ಯಮಾನವನ್ನು ಪರ್ಯಾಯ ವಾಸ್ತವ ಎಂದು ಕರೆದರು. ತಮ್ಮ ಇತ್ತೀಚಿನ ಪುಸ್ತದಲ್ಲಿ ಅವರು ಬರೆದ ಹಾಗೆ " ಮಾನವರು ತಮ್ಮ ನಿರ್ಧಾರಗಳು ಬೇರೆಯವರ ಮೇಲೆ ಅವಲಂಬಿತವಾಗಿಲ್ಲ ಎಂದು ನಂಬಿದ್ದಾರೆ" ಎಂದು ಬರೆದಿದ್ದಾರೆ. ಆದರೆ ರಾಜಕಾರಣಿಗಳು ತಮ್ಮ ಒಂದು ಭಾಷಣದಿಂದಲೇ, ಜನರ ಮೇಲೆ ಪ್ರಭಾವ ಬೀರಿ ಅವರ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತಾರೆ. ಈ ಶಿಕ್ಷಣ ತಜ್ಞರ ಪ್ರಕಾರ, ರಾಜಕಾರಣಿಗಳು 5 ಹೆಜ್ಜೆಗಳ ಮೂಲಕ ತಮ್ಮ ಭಾಷಣವನ್ನೋ ಅಥವಾ ನಿರೂಪಣೆಯನ್ನು ಹೊರಹಾಕುತ್ತಾರೆ - ಉದ್ದೇಶ, ನಿರೂಪಣೆ, ಸನ್ನಿವೇಶ, ಪ್ರಚಾರ ಮತ್ತು ವಿಷಯ. ಈ ಐದು ಹಂತಗಳನ್ನು ಉಪಯೋಗಿಸಿ ರಾಜಕಾರಣಿಗಳು ಹೇಗೆ ಜನರನ್ನು 'ಲವ್ ಜಿಹಾದ್' ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ವಿವರಿಸಿದ್ದಾರೆ. 

ಮೊದಲು - ಬಲಾಢ್ಯವಾದ ಉದ್ಧೇಶವನ್ನು ರೂಪಿಸಕೊಳ್ಳುತ್ತಾರೆ. ಇದರಿಂದ ಅವರು ಒಂದು ಪ್ರತ್ಯೇಕ ಜಾತಿಯನ್ನು "ವೋಟ್ ಬ್ಯಾಂಕ್" ಆಗಿ ಒಲಿಸಿಕೊಳ್ಳುತ್ತಾರೆ. ಲವ್ ಜಿಹಾದ್ ನ ಮುಖ್ಯ ಉದ್ದೇಶ "ಹಿಂದೂಗಳನ್ನೆಲ್ಲಾ  ಒಟ್ಟು ಮಾಡುವುದು".

ಎರಡನೇ ಹೆಜ್ಜೆ- ನಿರ್ಧರಿಸಿದ ಉದ್ದೇಶದ ಸುತ್ತ ಒಳ್ಳೆಯ ನಿರೂಪಣೆ ಹೆಣೆಯುವುದು. ಉದಾಹರಣೆಗೆ " ಹಿಂದುಗಳೇ ಎಚ್ಚೆತ್ತುಕೊಳ್ಳಿ, ಧರ್ಮಕ್ಕೆ ಕುತ್ತು ಬಂದಿದೆ" ಎಂದು. ಕೇವಲ ನಮ್ಮನ್ನು ಬೆಂಬಲಿಸಿದರೆ ಮಾತ್ರ ನಿಮಗೆ ನ್ಯಾಯ ಸಿಗುತ್ತದೆ ಎಂದು ಅಮೀಷ ಒಡ್ಡುತ್ತಾರೆ. ಇನ್ನೊಂದು ರೀತಿಯಲ್ಲಿ, ಹಿಂದಿನ ದಿಗ್ಗಜರನ್ನು ಉದಾಹರೆಣೆಗೆ ತಗೆದುಕೊಂಡು, ಅವರ ಕಾಲದಲ್ಲಿ ಹೇಗೆ ಧರ್ಮವನ್ನು ರಕ್ಷಿಸಲಾಯಿತು ಅದೇ ರೀತಿ ಈಗ ನಾವು ಸಹ ಒಂದಾಗೋಣ ಎಂದು ಸಾರುತ್ತಾರೆ.

ಮೂರನೆಯ ಹೆಜ್ಜೆ - ಸಂದರ್ಭಗಳನ್ನು ರಚಿಸಿಸುವುದು. ಹಿಂದೂಗಳು ಯಾಕೆ ಅಪಾಯದಲ್ಲಿ ಇದ್ದಾರೆ? ಏಕೆಂದರೆ ಮುಸಲ್ಮಾನರು ಹಿಂದುಗಳನ್ನು ಮತಾಂತರ ಮಾಡುತ್ತಿದ್ದಾರೆ. ಇದರಿಂದ ತಮ್ಮ ಪ್ರಾಬಲ್ಯವನ್ನು ಹೇರಲು ಮುಂದಾಗುತ್ತಿದ್ದಾರೆ ಎಂಬ ಭಾವನೆಯನ್ನು ಬಿತ್ತುವುದು. ಫಿರೋಜ್ ಶಾ ತುಘಲಕ್, ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ರಂತಹ ಉದಾಹರಣೆ ತಗೆದುಕೊಂಡು ಈ ನಂಬಿಕೆಯನ್ನು ಸಮರ್ಥಿಸುತ್ತಾರೆ ಮತ್ತು ಬಲಪಡಿಸುತ್ತಾರೆ.

ನಾಲ್ಕನೆಯ ಹೆಜ್ಜೆ - ಪ್ರಚಾರ ಮಾಡುವುದು / ಅಭಿಯಾನ ಹಮ್ಮಿಕೊಳ್ಳುವುದು. ಲವ್ ಜಿಹಾದ್ ಎಂಬ ಸಮಸ್ಯೆಯೇ,  ಸ್ವತಃ ಒಂದು ಅಭಿಯಾನವಾಗಿ  ಮಾರ್ಪಾಡಾಗುತ್ತದೆ.

ಐದನೇಯ, ಹಾಗು ಕೊನೆಯ ಹೆಜ್ಜೆ - ಪರ್ಯಾಯ ವಾಸ್ತವದಲ್ಲಿರುವ ಲವ್ ಜಿಹಾದ್‌ ಬಗ್ಗೆಗಿನ ವಿಷಯಗಳಲ್ಲಿ ಜನರನ್ನು ನಂಬುವಂತೆ ಮಾಡುವುದು. 

ಆಗ ಮತ್ತು ಈಗ :

1920 ರ ದಶಕದಲ್ಲಿ ಶುದ್ಧಿ ಚಳುವಳಿ ಅಭಿಯಾನದ ಸಮಯದಲ್ಲಿ ಪುಸ್ತಕಗಳು ಮತ್ತು ಕರಪತ್ರಗಳನ್ನು ಹೇಗೆ ಬಳಸಲಾಗಿತ್ತೋ, ಈಗ ಸಹ ಇಂತಹ ವಿಷಯಗಳ  ಕುರಿತು ಸುದ್ದಿಗಳನ್ನು ರಚಿಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ವಿಶ್ವ ಹಿಂದೂ ಪರಿಷದ್, ಲವ್ ಜಿಹಾದ್ ಅನ್ನು ನಿಭಾಯಿಸಲು ಹಾಟ್ಲೈನ್ ಕೇಂದ್ರವನ್ನು ಸ್ಥಾಪಿಸಿತು. ಸ್ಥಾಪಿಸಿದ ಮೂರೂ ತಿಂಗಳಲ್ಲಿ ಸುಮಾರು 1500 ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ವರದಿ ಸಹ ಸಹ ಮಾಡಿತು. ಶ್ರೀರಾಮ ಸೇನೆಯು 2009 ರಲ್ಲಿ ಲವ್ ಜಿಹಾದ್ ವಿರೋಧಿ ಅಭಿಯಾನವನ್ನು "ನಮ್ಮ ಹೆಣ್ಣು ಮಕ್ಕಳನ್ನು ಉಳಿಸಿ, ಭಾರತವನ್ನು ಉಳಿಸಿ" ಎಂಬ ಘೋಷ ವಾಕ್ಯದೊಂದಿಗೆ ಆರಂಭಿಸಿತು.

ಮುಸ್ಲಿಮರು ಮತ್ತು ಜಾಟರ ನಡುವೆ ಉದ್ವಿಗ್ನತೆ ಉಂಟಾದಾಗ ಪಶ್ಚಿಮ ಯುಪಿಯಲ್ಲಿ 2013 ರಲ್ಲಿ ಇಂತಹ ಅಭಿಯಾನಗಳು ಇನ್ನೂ ಹೆಚ್ಚ್ಚಾದವು. ಈ ಸೋಶಿಯಲ್ ಮೀಡಿಯಾ ಯುಗದಲ್ಲಿ, ಇಂತಹ ವಿಷಯಗಳನ್ನು ರಚಿಸುವುದು ಇನ್ನೂ ಸುಲಭವಾಗಿದೆ. 2014 ರಲ್ಲಿ ಯೋಗಿ ಆದಿತ್ಯನಾಥ್ ಈ ವಿಷಯದ ಕುರಿತು ಮಾತನಾಡಿದಾಗ, ಇಂತಹ ಅಭಿಯಾನಗಳು ಇನ್ನಷ್ಟು ಹೆಚ್ಚಾದವು. 

"ಲವ್ ಜಿಹಾದ್ ಅನ್ನು ಭಾರತೀಯರ ವಿರುದ್ಧ ರಚಿಸಲಾಗಿರುವ ಅಂತಾರಾಷ್ಟ್ರೀಯ ಷಡ್ಯಂತ್ರ. ಇದರ ಹಿಂದೆ ಅನೇಕ ಅಂತಾರಾಷ್ಟ್ರೀಯ ಬೆಂಬಲವಿದೆ . ಇದಕ್ಕಾಗಿಯೇ ಅನೇಕಾನೇಕ ಪ್ಯಾಕೇಜ್ ಗಳನ್ನೂ ಸಹ ಘೋಷಿಸಲಾಗಿದೆ." ಎಂದು 'ಆಪಕಾ ಅದಾಲತ್" ನಲ್ಲಿ ಯೋಗಿಜೀ ಹೇಳಿರುವುದು ನಿಮಗೆ ಗೊತ್ತಿರಬಹುದು.

ನನ್ನ ಅನಿಸಿಕೆ:

ಲವ್ ಜಿಹಾದ್  ಇದೆಯೋ? ಇಲ್ಲವೋ? ಅದು ಒಂದು ಸೃಷ್ಟಿಸಲಾದ ವಿಷಯವೋ? ಅಲ್ಲವೋ? ನನಗೆ ಗೊತ್ತಿಲ್ಲ. ಅಂಕಿ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡು ನೋಡಿದರೆ ಇಲ್ಲ ಎನ್ನಬಹುದು. ಆದರೆ ನೈಜ ಬಣ್ಣ ದೈನಂದಿನ ಜೀವನದಲ್ಲಿ ಇದ್ದರೂ ಇರಬಹುದು. ದೇಶಕ್ಕೆ ಹೋಲಿಸಿ ನೋಡಿದರೆ ಇದನ್ನು ಪ್ರೂವ್  ಮಾಡಲು ತುಂಬಾ ಕಷ್ಟ. ಹಾಗಂತ ಇದು ಭಾರತದ  ಅತ್ಯಂತ ಗಂಭೀರ ಸಮಸ್ಯೆ ಎಂದು ಸಹ ಹೇಳಲು ಆಗುವುದಿಲ್ಲ. ಇದನ್ನೂ  ಮೀರಿದ ಅನೇಕ ಸಮಸ್ಯೆಗಳು ಭಾರವನ್ನು ಕಾಡುತ್ತಿವೆ. ಹಾಗಂತ ಸುಮ್ಮನೆ ಬಿಟ್ಟರು ಸಹ ಮಗ್ಗುಲಿನ ಮುಳ್ಳಾಗುವ ಎಲ್ಲ ಸಾಧ್ಯತೆಗಳು ಸಹ ಇದೆ.

ಭಾರತದಲ್ಲಿ ಬಲವಂತದ ಮತಾಂತರ ನಡೆಯುತ್ತಿವೆ. ಇದು ನಂಬಲೇ ಬೇಕಾದ ಕಹಿ ಸತ್ಯ. ಆದರೆ ರಾಜಕಾರಣಿಗಳು ಬಿಂಬಿಸುವಂತೆ, ಅಷ್ಟು ಘೋರವಾಗಿಲ್ಲ. 2012 ರಲ್ಲಿ, ಕೇರಳದ ಮುಖ್ಯಮಂತ್ರಿ ಹೇಳಿಕೆ ಪ್ರಕಾರ 2006 ರಿಂದ ಈಚೆಗೆ 2500 ಕ್ಕೂ ಹೆಚ್ಚು ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದರು. ಆದರೆ ಇವುಗಳಲ್ಲಿ ಯಾವವು ಬಲವಂತದ ಮತಾಂತರವಾಗಿದ್ದವು ಎಂದು ಹೇಳುವುದು ಹೇಳಲಾಗಲಿಲ್ಲ. 

ಹಲವಾರು ರಾಜ್ಯಗಳಲ್ಲಿ ವಿಧಿಸಲಾಗಿರುವ ಮತಾಂತರ ಕಾನೂನುಗಳು ಅಂತರ್ ಧರ್ಮೀಯ ವಿವಾಹಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ. ಉದಾಹರಣೆಗೆ, ತೆಲಂಗಾಣದಲ್ಲಿ, ದಂಪತಿಗಳು ತಮ್ಮ ವಿವಾಹವನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಂದಾಯಿಸಲು ಬಯಸಿದರೆ, ವಿವಾಹ ಆಗುವ 30 ದಿನ ಪೂರ್ವದಲ್ಲಿ ಅವರು ಅರ್ಜಿಯನ್ನು ಸಲ್ಲಿಸಬೇಕು. ಒಂದು ವೇಳೆ ದಂಪತಿಗಳು ನೊಂದಾಯಿಸಿದರು ಕೂಡ, ಮದುವೆಯನ್ನು ನಿಲ್ಲಿಸಲು ಕುಟುಂಬದವರಿಗೆ ಅಥವಾ ಅನೇಕ ಸಂಸ್ಥೆಗಳಿಗೆ, 30 ದಿನಗಳು ಸಾಕಷ್ಟು ಸಮಯವನ್ನು ನೀಡುತ್ತವೆ.


Sources,

The Quint

Charu Gupta Essay

Ordinance Details

Indian Express

Pew Research

The Print

Brittanica

First Post

Telangana Rule

The Wire

ಕಾಮೆಂಟ್‌‌ ಪೋಸ್ಟ್‌ ಮಾಡಿ

2ಕಾಮೆಂಟ್‌ಗಳು