ರಷ್ಯಾದ ಆಕ್ರಮಣ ಪ್ರಾರಂಭವಾದಾಗ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುದ್ಧವನ್ನ ಕಠಿಣವಾಗಿ ಧಿಕ್ಕರಿಸಿ, ತನ್ನ ದೇಶದ ಪ್ರತಿ ಇಂಚಿನ ಪ್ರದೇಶವನ್ನು ರಕ್ಷಿಸುವ ಪಣ ತೊಟ್ಟರು. ಪ್ರಬಲ ಪ್ರತಿರೋಧ ತೋರುವುದಾಗಿ ಹೇಳಿದರು. ಆದರೆ ಈಗಿನ ವಾತಾವರಣ ಮೊದಲಿನಂತೆ ಇಲ್ಲ. NATO ಸದಸ್ಯತ್ವಕ್ಕಾಗಿ ಹಂಬಲಿಸುತ್ತಿದ್ದ ವೊಲೊಡಿಮಿರ್ ಝೆಲೆನ್ಸ್ಕಿ, ಅದರಿಂದಲೇ ತಮ್ಮ ದೇಶದ ಮೇಲೆ ಯುದ್ಧವನ್ನು ಬರಮಾಡಿಕೊಂಡರು. ಈ ಮೂರೂ ವಾರಗಳಲ್ಲಿ ಬಹುಶಃ ಸತ್ಯದ ಅರಿವು ಆಗಿರಬೇಕು. ಈಗ ಯುದ್ಧವನ್ನು ಕೊನೆಗಾಣಿಸಲು ತಮ್ಮ ನಿಲುವನ್ನು ತ್ಯಜಿಸಲು ಸಿದ್ಧರಾಗಿದ್ದಾರೆ. 

ಸರಳ ಪದಗಳಲ್ಲಿ, ಝೆಲೆನ್ಸ್ಕಿ ವಾಸ್ತವತೆಯ ರುಚಿಯನ್ನು ಕಂಡರು. ಈ ಎಲ್ಲ ಆಗುಹೋಗುಗಳಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ ಮೂರು ತಪ್ಪು ಲೆಕ್ಕಾಚಾರ ಮಾಡಿದರು. ಅವುಗಳನ್ನು ಏನೆಂದು ತಿಳಿಯಲು ಮುಂದೆ ಓದಿ.

ಒಂದನೆಯ ತಪ್ಪು ಲೆಕ್ಕಾಚಾರ ಪಾಶ್ಚಿಮಾತ್ಯ ದೇಶಗಳ ಮೇಲಿನ ಅತೀವ ನಂಬಿಕೆ ಇಟ್ಟಿದ್ದು ಮತ್ತು ಬೆಂಬಲ ಸಿಗುವ ಕನಸು ಕಂಡಿದ್ದು.

ಎರಡನೆಯದು : ಉಕ್ರೇನ್ ಅನ್ನು ಪಾಶ್ಚಿಮಾತ್ಯ ದೇಶಗಳಿಗೆ ತಮ್ಮ ದೇಶದ ಪ್ರಾಮುಖ್ಯತೆಯನ್ನ ಮಾರಾಟ ಮಾಡಿದರು.

ಕಡೆಯದಾಗಿ, ಮೂರನೆಯದುಪುಟಿನ್ ಅವರ ನಿಜವಾದ ಉದ್ದೇಶಗಳನ್ನು ತಪ್ಪಾಗಿ ಗ್ರಹಿಸಿದ್ದು. ಈ ಎಲ್ಲವನ್ನ ಬಿಡಿಬಿಡಿಯಾಗಿ, ವಿಸ್ತಾರವಾಗಿ ಮುಂದೆ ಓದೋಣ.

3 mistakes of Volodymyr Zelenskyy that went wrong
ವೊಲೊಡಿಮಿರ್ ಝೆಲೆನ್ಸ್ಕಿ ಮಾಡಿದ ಮೂರು ತಪ್ಪುಗಳು

ಮೊದಲನೇಯ ತಪ್ಪು ಲೆಕ್ಕಾಚಾರ :

ಉಕ್ರೇನ್ ದೇಶ ರಷ್ಯಾ ಅಂತಹ ದೇಶಗಳಿಗೆ ಸಾಟಿಯೇ ಅಲ್ಲ. ಈ ಸತ್ಯ ವೊಲೊಡಿಮಿರ್ ಝೆಲೆನ್ಸ್ಕಿಗೂ ಸಹ ತಿಳಿದಿದೆ.  ಅವರಷ್ಟೇ ಯಾಕೆ, ಪರಿಸ್ಥಿತಿಯನ್ನು ನೋಡುತ್ತಿದ್ದ ಪ್ರತಿಯೊಬ್ಬರಿಗೂ ಸ್ಪಷ್ಟ ಮಾಹಿತಿಯಾಗಿತ್ತು. ಸೈನ್ಯ, ಹಣಕಾಸು, ವಹಿವಾಟು ಮತ್ತು ಪ್ರಾಬಲ್ಯಗಳಲ್ಲಿ ರಷ್ಯಾವನ್ನು ಮೀರಿಸುವ ಶಕ್ತಿ ಉಕ್ರೇನ್ ಗೆ ಇರಲಿಲ್ಲ. ಆದರೆ ಝೆಲೆನ್ಸ್ಕಿ ಅವರು ನನ್ನ ಬಳಿ ಟ್ರಂಪ್ ಕಾರ್ಡ್ ಇದೆ ಎಂಬ ಮನೋಭಾವನೆಯಲ್ಲಿಯೇ ಎದುರಿಸುತ್ತಾ ಹೋದರು. ಯಾವ ಟ್ರಂಪ್ ಕಾರ್ಡ್ ಅಂತೀರಿ?ಪಾಶ್ಚಾತ್ಯ ಬೆಂಬಲದ ಟ್ರಂಪ್ ಕಾರ್ಡ್.

ಇದು ಝೆಲೆನ್ಸ್ಕಿ ಅವರ ಉದ್ಧಟತನವಲ್ಲ. ಆದರೆ, ದಾಳಿಯ ಮುಂಚಿನ ಬೆಳವಣಿಗೆಗಳು ಅವರನ್ನು ನಂಬುವಂತೆ ಮಾಡಿದ್ದವು. ಜೋ ಬಿಡೆನ್, ಉಕ್ರೇನ್ ತಟಸ್ಥ ದೇಶವಾಗಿರಲು ಸಾಧ್ಯವೇ ಇಲ್ಲ, ಮತ್ತು ಹಾಗೆ ಇರಬಾರದು ಎಂದೇ ವಾದ ಮಾಡಿಕೊಂಡು ಬಂದರು. ನ್ಯಾಟೋ ಪೂರ್ವದಲ್ಲಿ ಹಬ್ಬುವುದನ್ನು, ವಿಸ್ತಾರಗೊಳ್ಳುವುದನ್ನು ನಿಲ್ಲಿಸಲು ಸಹ ಅವರು ನಿರಾಕರಿಸಿದರು. ನಿಲ್ಲಿಸುವ ಬದಲಿಗೆ, ಉಕ್ರೇನ್ ಗೆ ಮಿಲಿಟರಿ ಸಾಧನಗಳನ್ನ, ಶಸ್ತ್ರಗಳನ್ನ ದೊಡ್ಡ ಸಂಖ್ಯೆಯಲ್ಲಿ ನೀಡಲು ಪ್ರಾರಂಭಿಸಿದರು. ಜೋ ಬಿಡೆನ್ ಅವರಿಗೆ ಇದರಲ್ಲಿ ಆಸಕ್ತಿ ಸಹ ಇತ್ತು ಮತ್ತು ಹೂಡಿಕೆಯ ವಿಷಯವೂ ಆಗಿತ್ತು. ಒಂದು  ಕಲ್ಲಿನಲ್ಲಿ ಎರಡು ಹಕ್ಕಿ ಉದುರಿಸುವ ತಂತ್ರ. ಅಫ್ಘಾನ್ ಅಲ್ಲಿ ಸಹ ಇದೆ ಆಗಿದ್ದು.  ನಿಜವಾಗಿಯೂ ಎಲ್ಲರಿಗೂ ಕಾಡುವ ಪ್ರಶ್ನೆ ಏನೆಂದರೆ; ಜೋ ಬಿಡೆನ್ ಉಕ್ರೇನ್‌ನಲ್ಲಿ ಹೂಡಿಕೆ ಮತ್ತು ಆಸಕ್ತಿ ಏಕೆ ತೋರಿಸಿದರು? ಎಂದು.

ಕಳೆದ ವರ್ಷ ಸೆಪ್ಟೆಂಬರ್ 1ರಂದು, ಝೆಲೆನ್ಸ್ಕಿ ತಮ್ಮ ಭಾಷಣವೊಂದರಲ್ಲಿ ಈ ರೀತಿಯ ಹೇಳಿಕೆ ನೀಡಿದರು."ಬರೀ ಅಂದುಕೊಳ್ಳುವುದಲ್ಲ, ಕೇಳಿದ್ದೇನೆ ಸಹ. ಅಧ್ಯಕ್ಷ ಜೋ ಬಿಡೆನ್ ಅವರು ನ್ಯಾಟೋ ಸದಸ್ಯತ್ವವನ್ನು ನೀಡುವ ವಿಷಯದಲ್ಲಿ ಉಕ್ರೇನ್ ಅನ್ನು ವೈಯಕ್ತಿಕವಾಗಿ ಬೆಂಬಲಿಸುತ್ತಿದ್ದಾರೆ. ಸಧ್ಯಕ್ಕೆ ಅದರ ಮಾರ್ಗ ಹೇಗಿದೆ ಎಂದು ಈಗ ಹೇಳಲು ಸ್ವಲ್ಪ ಕಷ್ಟ" ಎಂದು.

ಇದಷ್ಟೇ ಅಲ್ಲ. ಏಪ್ರಿಲ್ 2021 ರಲ್ಲಿ ಏನಾಯಿತು ಎಂದು ನೋಡೋಣ. ಈ ಸಮಯದಲ್ಲಿ ರಷ್ಯಾ ಉಕ್ರೇನ್ ನ ನಡೆಯನ್ನು ಖಂಡಿಸಿ ಮೊದಲ ಮಿಲಿಟರಿ ಪ್ರತಿರೋಧವನ್ನು ತೋರಿಸಲು ಸಜ್ಜಾಗುತಿತ್ತು. ಆಗ ಝೆಲೆನ್ಸ್ಕಿ ಅಮೆರಿಕದ ಬೆಂಬಲದ ಬಗ್ಗೆ ಬಹಳ ವಿಶ್ವಾಸ ಹೊಂದಿದ್ದರು. "ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್ ಅನ್ನು ಎಂದಿಗೂ ಏಕಾಂಗಿಯಾಗಿ ಉಳಿಯಲು ಬಿಡುವುದಿಲ್ಲ ಎಂದು ಅಧ್ಯಕ್ಷ ಬಿಡೆನ್ ಅಧ್ಯಕ್ಷ ಬಿಡೆನ್ ನನಗೆ ಭರವಸೆ ನೀಡಿದ್ದಾರೆ" ಎಂದು ಝೆಲೆನ್ಸ್ಕಿ ಹೇಳಿದ್ದರು.

'ಉಕ್ರೇನ್ ಅನ್ನು ಎಂದಿಗೂ ಏಕಾಂಗಿಯಾಗಿ ಉಳಿಯಲು ಬಿಡುವುದಿಲ್ಲ.' ಹೌದು. ಏಪ್ರಿಲ್ 2021 ರಲ್ಲಿ ಬಿಡೆನ್ ಅವರ ಈ ಭರವಸೆಯಿಂದಾಗಿ, ಝೆಲೆನ್ಸ್ಕಿ ಉಕ್ರೇನ್‌ನ ಬಗ್ಗೆ ದೊಡ್ಡ ವಿಷಯಗಳ ಬಗ್ಗೆ ಬೆಂಬಲ ಸಿಗುವ ಹಾಗೆ ಆಶೆ ಮೂಡಿಸಿತು. ಮಿಲಿಟರಿ ಸಹಾಯ (ಶಸ್ತ್ರ ಪೂರೈಕೆ) ಯಾವಾಗ ಶುರು ಆದ ಮೇಲೆ, ಉಕ್ರೇನ್ ಅಧ್ಯಕ್ಷ ಇದು ಕೇವಲ ಪ್ರಾರಂಭಿಕ ಹಂತ, ಅಸಲಿಗೆ ಮುಂದೆ ಇದಕ್ಕಿಂತಲೂ ದೊಡ್ಡ ಸಹಾಯ ನಮಗೆ ಸಿಗಲಿದೆ ಎಂದು ಭಾವಿಸಿದ್ದರು. ಅವರು ಅಲ್ಲೇ ಎಡವಿದರು. ಮಿಲಿಟರಿ ನೆರವು ನೀಡುವುದು ನ್ಯಾಟೋದ ಗರಿಷ್ಠ ಮಿತಿಯಾಗಿತ್ತು. ನ್ಯಾಟೋ ಸಂಘ ಅದನ್ನೂ ಮೀರಿ ಮುಂದೆ ಹೋಗಲು ನಿರಾಕರಿಸಿತು. ಬೆಂಬಲಕ್ಕೆ ಸೈನಿಕರನ್ನು ಕಳುಹಿಸುವುದು, ನೋ-ಫ್ಲೈ ಝೋನ್ ಅಷ್ಟೇ ಅಲ್ಲದೆ, ರಷ್ಯಾ ಮೇಲೆ  ನಿರ್ಬಂಧಗಳನ್ನು ಹೇರುವುದನ್ನು ಅಥವಾ ಹೇರಿಕೆಯನ್ನು ಪಾಲಿಸಲು ಸಹ ಕೆಲ ಸದಸ್ಯ ರಾಷ್ಟ್ರಗಳು ಮುಂದಾಗಲಿಲ್ಲ. ರಷ್ಯಾ ವಿರುದ್ಧ ಯಾವುದೇ ಕಣಕ್ಕೆ ಇಳಿಯುವುದು ಅವರಿಗೆ ಸುತರಾಂ ಇಷ್ಟ ಇರಲಿಲ್ಲ.

ಇಂದು ರಷ್ಯಾ ಆಕ್ರಮಣದ 19ನೇ ದಿನವಾಗಿದೆ, ಆದರೆ ಯುರೋಪ್ ಖಂಡದ ಕೆಲ ರಾಷ್ಟ್ರಗಳು ಇನ್ನೂ ರಷ್ಯಾದ ತೈಲ ಮತ್ತು ಅನಿಲವನ್ನು ಖರೀದಿಸುತ್ತಿವೆ. ವಾಸ್ತವವಾಗಿ ಉಕ್ರೇನ್ ಅನ್ನು ಪ್ರಚೋದಿಸಿದ ಪಾಶ್ಚಿಮಾತ್ಯ ದೇಶಗಳು, ಈಗ ಕೈ ಕಟ್ಟಿ ಕುಳಿತಿವೆ. ಯಾವುದೇ ರೀತಿಯ ರಾಜಿಗೆ ಮುಂದಾಗಲಿಲ್ಲ, ಭರವಸೆಗೆ ತಕ್ಕ ಹಾಗೆ ಯಾವುದೇ ಬೆಂಬಲ ಸಹ ನೀಡಲಿಲ್ಲ. ಅಷ್ಟೇ ಅಲ್ಲ, ಐರೋಪ್ಯ ಒಕ್ಕೂಟದ ಅರ್ಜಿಯನ್ನು ಸಹ ಸಧ್ಯಕ್ಕೆ ಮುಂದೂಡಿ, ಝೆಲೆನ್ಸ್ಕಿ ಆಸೆಗೆ ತಣ್ಣೀರು ಎರಚಿದರು. ತುರ್ತು ಸಹಾಯದ ಸಮಯ ಬಂದಾಗ ನ್ಯಾಟೋ ಸಹ ಹಿಂದೆ ನಿಂತು ಪ್ರೇಕ್ಷಕನಾಗಿ ನೋಡುತ್ತಿದೆ.

ಇದೇ ಝೆಲೆನ್ಸ್ಕಿ ಮಾಡಿದ ಮೊದಲನೇ ತಪ್ಪು ಲೆಕ್ಕಾಚಾರ.

ಎರಡನೆಯ ತಪ್ಪು ಲೆಕ್ಕಾಚಾರ :

ಮ್ಯೂನಿಚ್ ಭದ್ರತಾ ಸಮ್ಮೇಳನದ ಭಾಷಣವೊಂದರಲ್ಲಿ ಝೆಲೆನ್ಸ್ಕಿ ಈ ರೀತಿಯಾಗಿ ಹೇಳಿದರು. " ಉಕ್ರೇನ್, ಎಂಟು ವರ್ಷಗಳಿಂದ ಯುರೋಪ್ ಅನ್ನು ಗುರಾಣಿಯಂತೆ ಕಾರ್ಯ ನಿರ್ವಹಿಸುತ್ತಾ ಕಾಪಾಡಿಕೊಂಡು ಬಂದಿದೆ. ಉಕ್ರೇನ್ ತನ್ನ ಗಡಿಯಲ್ಲಿ ವಿಶ್ವದ ಶ್ರೇಷ್ಠ ಸೈನ್ಯವೊಂದನ್ನು ತಡೆಹಿಡಿದಿದೆ. ಯುರೋಪಿಯನ್ ಒಕ್ಕೂಟದ ಗಡಿಯಲ್ಲಿ ಅಲ್ಲ, ನಮ್ಮ ಗಡಿಯಲ್ಲಿ." ಎಂದು.

ಮತ್ತೊಂದು ಭಾಷಣದಲ್ಲಿ "ಕ್ಷಿಪಣಿಗಳು ಮಾರಿಯುಪೋಲ್‌ ನಗರಕ್ಕೆ ಹಾರಿದವೆ ಹೊರತು, ಯುರೋಪಿಯನ್ ನಗರಗಳಿಗೆ ಅಲ್ಲ. ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪುನಃಸ್ಥಾಪಿಸದಿದ್ದರೆ, ಯುರೋಪ್‌ನಲ್ಲಿ ಸಮಗ್ರ ಭದ್ರತೆ ಅಸಾಧ್ಯವೆಂದು ಈ ಘಟನೆಗಳು ದೃಢಪಡಿಸುತ್ತವೆ ಎಂದು ಸಹ ಹೇಳಿದರು."

ಇಲ್ಲಿ ಮತ್ತೆ ಝೆಲೆನ್ಸ್ಕಿ ಎಡವಿದರು. ಉಕ್ರೇನ್ ದೇಶ ಪಾಶ್ಚಿಮಾತ್ಯ ದೇಶಗಳಿಗೆ ವಿಸ್ತರಣಾವಾದದ ವೇದಿಕೆ ಆಗಿ ಕಂಡಿತು ಅಷ್ಟೇ. ಅವರು ನ್ಯಾಟೋ ಸದಸ್ಯತ್ವದ ಬಗ್ಗೆ ಗಂಭೀರವಾಗಿರಲಿಲ್ಲ, ನಿರ್ಬಂಧಗಳ ಬಗ್ಗೆ ಗಂಭೀರವಾಗಿರಲಿಲ್ಲ. ಅವರಿಗೆ ಉಕ್ರೇನ್ ವ್ಲಾಡಿಮಿರ್ ಪುಟಿನ್ ಅವರನ್ನು ಕೆರಳಿಸಲು ಕೇವಲ ಉಪಯುಕ್ತ ಸಾಧನವಾಗಿತ್ತು. ಅಷ್ಟೇ.

ಆದರೆ ಉಪಯುಕ್ತ ಸಾಧನಗಳಿಗೂ ಸಹ ಒಂದು ಕೊನೆ ದಿನ ಅಂತ ಇರುತ್ತೆ ಅಲ್ಲವೇ? ಅದರಂತೆ ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿತು. ಇವೆಲ್ಲ ಹೊಸ ತಂತ್ರಗಳೇನೂ ಅಲ್ಲ. ಪುಟ್ಟ ದೇಶಗಳನ್ನು ಆಟದ ಗೊಂಬೆಯಂತೆ ಮಾಡಿ ಪಶ್ಚಿಮ ದೇಶಗಳು, ಬಹಳ ಆಟ ಆಡಿವೆ.

ಒಮ್ಮೆ ಅಫ್ಘಾನಿಸ್ತಾನದ ಬಗ್ಗೆ ಯೋಚಿಸಿ. 1980 ರ ದಶಕದಲ್ಲಿ, ಸೋವಿಯತ್ ಸೈನ್ಯದ ವಿರುದ್ಧ ಹೋರಾಡಲು ಅಮೆರಿಕವು ಮುಜಾಹಿದ್ದೀನ್‌ಗಳಿಗೆ ಹಣವನ್ನು ನೀಡಿತು. ಆರ್ಥಿಕ ಮತ್ತು ಮಿಲಿಟರಿ ಸಹಾಯ ಮಾಡಿತು. ಅಫ್ಘಾನಿಸ್ತಾನ ಏನೂ ಅಮೇರಿಕಾಕ್ಕೆ ಬೇಕಾದ ಪ್ರಮುಖ ದೇಶವೇನೂ ಆಗಿರಲಿಲ್ಲ. ಆದ್ರೆ ಇದರಲ್ಲಿ ಏಕೆ ಕಡ್ಡಿ ಅಲ್ಲಾಡಿಸಿತು ಗೊತ್ತೇ? ಸೋವಿಯೆತ್ ದೇಶಕ್ಕೆ ಕಿರಿಕಿರಿ ಮಾಡುವುದೇ ಪ್ರಮುಖ ಉದ್ದೇಶವಾಗಿತ್ತು. ಅಫ್ಘಾನಿಸ್ತಾನ ಆಟದ ಗೊಂಬೆಯಾಗಿ ಹೋಯ್ತು.

ಜಾರ್ಜಿಯಾದ ಕಥೆ ಕೂಡ ಅದೇ. 2000 ರ ದಶಕದ ಉತ್ತರಾರ್ಧದಲ್ಲಿ ಅಮೆರಿಕವು ಜಾರ್ಜಿಯಾವನ್ನು ಶಸ್ತ್ರಸಜ್ಜಿತಗೊಳಿಸಿತು. ಅಮೇರಿಕಾ ಜಾರ್ಜಿಯನ್ ಸೈನಿಕರಿಗೆ ತರಬೇತಿ ನೀಡಿತು. ಭವಿಷ್ಯದಲ್ಲಿ ಅದಕ್ಕೆ ನ್ಯಾಟೋ ಸದಸ್ಯತ್ವವನ್ನು ನೀಡುವ ಆಶ್ವಾಸನೆ ಕೊಟ್ಟಿತು. ಆದರೆ ಯುದ್ಧ ಪ್ರಾರಂಭವಾದಾಗ, ನ್ಯಾಟೋ ಹಿಂದೆ ಸರಿಯಿತು.

ಝೆಲೆನ್ಸ್ಕಿ ಅದೇ ತಪ್ಪನ್ನು ಮಾಡಿದರು. ಉಕ್ರೇನ್ ನ್ಯಾಟೋಗೆ ಪ್ರಮುಖ ಕಾರ್ಯತಂತ್ರದ ಆಸ್ತಿ ಎಂದು ಅವರು ನಂಬಿದ್ದರು. ಅವರು ನೀರಿಕ್ಷೆ ತಪ್ಪಾಗಿತ್ತು. ನ್ಯಾಟೋಗೆ, ಉಕ್ರೇನ್ ಮತ್ತೊಂದು ಚದುರಂಗದ ಸಿಪಾಯಿ ಆಗಿತ್ತು.

ಮೂರನೆಯ ತಪ್ಪು ಲೆಕ್ಕಾಚಾರ :

ಝೆಲೆನ್ಸ್ಕಿಅವರು ಪುಟಿನ್ ಅವರ ಮನಸ್ಸನ್ನು, ಅವರ ಎಚ್ಚರಿಕೆಗಳನ್ನು ಮತ್ತು ಅವರ ಮಾತುಗಳನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಲು ವಿಫಲರಾದರು. ಈ ಸಂದರ್ಭದಲ್ಲಿ, ನೀವು ನಿಜವಾಗಿಯೂ ಝೆಲೆನ್ಸ್ಕಿ ಅವರನ್ನು ದೂಷಿಸಲು ಸಾಧ್ಯವಿಲ್ಲ. ಕೊನೆಯ ಕ್ಷಣದವರೆಗೂ, ಯುದ್ಧ ನಡೆಯುತ್ತದೆ ಎಂದು ಯಾರೂ ಸಹ ಭಾವಿಸಿರಲಿಲ್ಲ. ಕೆಲ ಬೆದರಿಕೆಗಳು ಬರಬಹುದು, ಕೆಲವು ಗಲಾಟೆ ಆಗಬಹುದು, ಆದರೆ ಅಂತಿಮವಾಗಿ ರಷ್ಯಾ ಹಿಂದೆ ಹೋಗುತ್ತದೆ ಎಂದೇ ಎಲ್ಲ ತಿಳಿದಿದ್ದರೂ. ಇವೆಲ್ಲಾ ಸಾಂಪ್ರದಾಯಿಕ ಬುದ್ಧಿವಂತಿಕೆಯ ಆಲೋಚನೆಗಳು. ಆದರೆ ಆಗಿದ್ದೆ ಬೇರೆ.

ಜನವರಿ 28ರ ಆಚೆ ಈಚೆ, ಝೆಲೆನ್ಸ್ಕಿ ಯುದ್ಧದ ವಾತಾರವರಣದ ಬಗ್ಗೆ ಯಾವುದೇ ಮನಸ್ಥಿತಿ ಹೊಂದಿರಲಿಲ್ಲ. ಅವರು ಹೇಳಿದ್ದು ಇದನ್ನೇ "ಮಾಧ್ಯಮಗಳ ಪ್ರಕಾರ ನಮ್ಮಲ್ಲಿ ಯುದ್ಧದ ವಾತಾವರಣ ಇದೆ ಅಂತೆ. ಗಡಿಗಳಲ್ಲಿನ ರಸ್ತೆಗಳಲ್ಲಿ ಸೈನಿಕರ ಓಡಾಟವಿದೆ ಅಂತೆ. ಅಲ್ಲಲ್ಲಿ ಸೈನ್ಯಗಳು ಜಮಾವಣೆಗೊಳ್ಳುತ್ತಿವೆ ಅಂತೆ. ಜನರು ಎಲ್ಲೆಲ್ಲಿಗೋ ಹೋಗುತ್ತಿದ್ದಾರಂತೆ. ಆದರೆ ಇವೆಲ್ಲ ಯುದ್ಧ ವಾತಾವರಣ ಎಂದು ಹೇಳಲು ಆಗುವುದಿಲ್ಲ. ಯಾರು ಗಾಬರಿ ಪಡಬೇಕಾಗಿಲ್ಲ." ಎಂದು.

ಇವೆಲ್ಲದರ ಹಿನ್ನೋಟದ ಮುನ್ಸೂಚನೆಗಳನ್ನ ಸೂಕ್ಮವಾಗಿ ಮತ್ತು ಗಂಭೀರ ಪ್ರಯತ್ನಗಳನ್ನು ಝೆಲೆನ್ಸ್ಕಿ ಮಾಡಬೇಕಿತ್ತೇ? ಚೆನ್ನಾಗಿ ತಯಾರಿ ಮಾಡಿಕೊಳ್ಳಬೇಕಿತ್ತೇ? ಪುಟಿನ್ ಅವರ ಪ್ರಸ್ತಾಪಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಿತ್ತೇ? ಬಹುಶಃ ಅವರು ಇವುಗಳನ್ನ ಗಂಭೀರವಾಗಿ ಪರಿಗಣಿಸಬೇಕಿತ್ತು.

ಆದರೆ ಒಮ್ಮೆ ನೀವು ಝೆಲೆನ್ಸ್ಕಿ ಸ್ಥಾನದಲ್ಲಿ ನಿಂತು ನೋಡಿಕೊಳ್ಳಿ. ನೀವು ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಮೈತ್ರಿಯ ಭರವಸೆಯ ಬೆಂಬಲವನ್ನು ಹೊಂದಿದ್ದಾಗ ಮತ್ತು ಪ್ರತಿನಿತ್ಯ ನಿಮ್ಮ ದೇಶದಲ್ಲಿ ಹೇರಳವಾಗಿ ಮಿಲಿಟರಿ ಶಸ್ತ್ರಾಸ್ತ ಬಂದು ಬೀಳುವಾಗ, ರಷ್ಯಾದ ಮೇಲೆ ಹಿಂದೆಂದೂ ಕಾಣದ ನಿರ್ಬಂಧಗಳ ಮಳೆಸುರಿವಾಗ, ಝೆಲೆನ್ಸ್ಕಿ ಯುದ್ಧ/ ಹೋರಾಟವನ್ನು ಆಯ್ಕೆ ಮಾಡಿಕೊಂಡಿದ್ದರಲ್ಲಿ ಏನೂ ತಪ್ಪಿಲ್ಲ.

ಪಾಶ್ಚಿಮಾತ್ಯ ದೇಶಗಳು ಝೆಲೆನ್ಸ್ಕಿಗೆ ಸಾರ್ವಭೌಮತ್ವವನ್ನು ಭರವಸೆ ನೀಡಿತು, ಆದರೆ ಅವುಗಳ ಅವರ ಪರ ನಿಂತು ಅದಕ್ಕಾಗಿ ಹೋರಾಡಲು ನಿರಾಕರಿಸಿದವು. ಇತಿಹಾಸವು ಇದಕ್ಕಾಗಿ ಝೆಲೆನ್ಸ್ಕಿ ಅವರನ್ನ ತಕ್ಕಡಿಯಲ್ಲಿ ಮುಂದೆ ಅಳೆಯುತ್ತದೆ.

ಈ ಎಲ್ಲಾ ಟ್ವಿಟ್ಟರ್ ಅಬ್ಬರ, ಈ ಎಲ್ಲಾ ಯೂಟ್ಯೂಬ್ ನಲ್ಲಿನ ವೈಭವ, ಒಂದು ದಿನ ಕಣ್ಮರೆಯಾಗುತ್ತದೆ. ಕೊನೆಗೆ ಏನಾಯಿತು (ಯುದ್ಧದ ಫಲಿತಾಂಶ) ಎಂಬುದೇ ಸತ್ಯವಾಗಿ ಉಳಿಯುತ್ತದೆ.

ಮಾತುಕತೆ ವಿಷಯಕ್ಕೆ ಬಂದಾಗ, ರಷ್ಯಾ ಯುದ್ಧದ ಮೊದಲು ಬೇಡುತ್ತಿದ್ದ ಬೇಡಿಕೆಯನ್ನು, ಉಕ್ರೇನ್ ಈಗ ಯುದ್ಧ ಶುರು ಆದ ಮೇಲೆ ಒಪ್ಪಲು ತಯಾರಾಗಿದೆ. ಮೊದಲೇ ಒಪ್ಪಿದಿದ್ದರೆ, ಎಷ್ಟೋ ಸಾವು ನೋವು ನಿಲ್ಲುತ್ತಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ, ರಷ್ಯಾ ಮೊದಲು ಕೇವಲ ಉಕ್ರೇನ್ ನ ತಟಸ್ಥತೆಯನ್ನು ಬಯಸುತ್ತಿತ್ತು. ಅದಾದ ಮೇಲೆ ನ್ಯಾಟೋ ಸೇರಬಾರದು ಎಂಬ ಎಚ್ಚರಿಕೆ ಸಹ ಕೊಟ್ಟಿತು. ರಷ್ಯಾದವರಿಗೆ ಆಗ ಅಷ್ಟೇ ಬೇಕಾಗಿತ್ತು.

ಆದರೆ ಅವರು ಈಗ ಝೆಲೆನ್ಸ್ಕಿಯನ್ನು ಡಾನ್ಬಾಸ್ ಮತ್ತು ಕ್ರಿಮಿಯಾ ಪ್ರದೇಶವನ್ನು ಸ್ವತಂತ್ರ ರಾಜ್ಯಗಳಾಗಿ ಗುರುತಿಸಬೇಕೆಂದು ಬಯಸುತ್ತಿದ್ದಾರೆ.

ಈ ಎಲ್ಲಾ ಕಿತ್ತಾಟಗಳ ನಡುವೆ ಎಷ್ಟೋ ಮುಗ್ಧ ಜೀವಗಳ ಹರಣವಾಗಿದೆ. ಇದೇ ಆ ವ್ಯತ್ಯಾಸ.

References: