ನಮ್ಮಲ್ಲಿ ಹೆಚ್ಚಿನವರು ಒಮ್ಮೆಯಾದರೂ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದೇವೆ. ಆದರೆ BMTC ಇತಿಹಾಸ ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು ಹೇಳಿ?
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಇತ್ತೀಚೆಗೆ ತನ್ನ ರಜತ ಮಹೋತ್ಸವವನ್ನು ಆಚರಿಸಿಕೊಂಡಿತು. 25 ವರ್ಷಗಳ ಸುದೀರ್ಘ ಸೇವೆ ಕೊಟ್ಟು, ಅದೆಷ್ಟೋ ಜನರನ್ನು ಮೂಲೆ ಮೂಲೆಗೆ ತಲುಪಿಸಿದೆ. ನಗರದಾದ್ಯಂತ ಸಾಗಿಸಲು. BMTCಯು ಡಬಲ್ ಡೆಕ್ಕರ್ ಬಸ್‌ಗಳಿಂದ ಶುರು ಮಾಡಿ, ದೇಶದಲ್ಲೇ ಮೊದಲ ಹವಾನಿಯಂತ್ರಿತ ವೋಲ್ವೋ ಬಸ್‌ಗಳ ಸೇವೆ ಒದಗಿಸುವಷ್ಟು ಬೆಳೆದು ನಿಂತ ಪರಿ ಮೆಚ್ಚಲೇಬೇಕು.
BMTC ಇತಿಹಾಸ - ಆರಂಭ
BMTC ಯ ಕಥೆ ಮತ್ತು ಇತಿಹಾಸವು ನಿಜವಾಗಿಯೂ ಆಸಕ್ತಿದಾಯಕವಾಗಿದೆ. ಬೆಂಗಳೂರು ಸಾರಿಗೆ ವ್ಯವಸ್ಥೆಯನ್ನು ಮೊದಲು ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆ ಎಂದು ಕರೆಯಲಾಗುತ್ತಿತ್ತು. ಕೇವಲ 98 ಬಸ್ಸುಗಳಿಂದ 1940 ಸ್ಥಾಪನೆಯಾಗಿ ಶುರುವಾದ ಈ ಸಾರಿಗೆ ಮೊದಲು ಖಾಸಗಿಯವರ ಕೈಯಲ್ಲಿತ್ತು. ಬೆಂಗಳೂರು ನಗರ, ಉಪ-ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸೇವೆ ಇದರ ಮೂಲ ಉದ್ದೇಶವಾಗಿತ್ತು. ಮೈಸೂರು ರಾಜ್ಯ ಸರ್ಕಾರವು 1956 ರಲ್ಲಿ ಖಾಸಗಿ ಒಡೆತನದಿಂದ ಸರ್ಕಾರದ ತೆಕ್ಕೆಗೆ ಇದನ್ನು ತಗೆದುಕೊಂಡು ಅದಕ್ಕೆ ಬೆಂಗಳೂರು ಸಾರಿಗೆ ಸೇವೆ (BTS) ಎಂದು ಹೆಸರನ್ನ ಇಟ್ಟಿತು. ಮೊದಲು ಬೆಂಗಳೂರು ನಗರದಲ್ಲಿ 103 ಬಸ್‌ಗಳು ಮತ್ತು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ 15 ಬಸ್‌ಗಳನ್ನು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಓಡಾಟ ಶುರುವಾಗಿದ್ದು. ಬಸ್‌ನ ಒಳಗಿನ ಆಸನಗಳು ಸಾರ್ವಜನಿಕರಿಗಾಗಿದ್ದರೆ, ಚಾಲಕರ ಕ್ಯಾಬಿನ್‌ನ ಮುಂದಿನ ಆಸನವನ್ನು ಬಸ್ ಹಾದುಹೋಗುವ ಪ್ರದೇಶಗಳ ಸಾರ್ವಜನಿಕ ಪ್ರತಿನಿಧಿಗಳಿಗೆ ಮೀಸಲಿಡಲಾಗಿತ್ತು. 1997 ರಲ್ಲಿ, KSRTC (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ವಿಭಜನೆಯಾಗಿ ಅದರಲ್ಲಿ BMTC ಸಾರಿಗೆಯ ಒಂದು ವಿಭಾಗವಾಗಿ ಮಾಡಲಾಯಿತು.
BMTC ಐತಿಹಾಸಿಕ ಮಾರ್ಗಗಳು
ನಗರವು ವಿಕಸನಗೊಂಡು, ವಿಸ್ತಾರಗೊಂಡಂತೆ ಬಸ್ ಮಾರ್ಗಗಳು ಕೂಡಾ ಬೆಳೆಯುತ್ತಲೇ ಹೋದವು. ಹಿಂದಿನ ದಿನಗಳಲ್ಲಿ, BMTC 117km ದೂರದ ಮಾರ್ಗದಲ್ಲಿ (ಊರು ಸುತ್ತಿ) ಸಹ ತನ್ನ ಕಾರ್ಯಾಚರಣೆ ಮಾಡುತಿತ್ತು. ಆ ಮಾರ್ಗವನ್ನು 600 ಎಂದು ಕರೆಯಲಾಗುತ್ತಿತ್ತು. ಆ ಮಾರ್ಗದಲ್ಲಿ ಸುಮಾರು 158 ಬಸ್ ನಿಲ್ದಾಣಗಳಿದ್ದವು. ಈ ಮಾರ್ಗದಲ್ಲಿನ ಪ್ರಯಾಣವು ಸಾಮಾನ್ಯವಾಗಿ 7 ಗಂಟೆಗಳಷ್ಟಾಗಿತ್ತು. ಸಂಚಾರ ದಟ್ಟಣೆಯು ಬೆಂಗಳೂರಿನಲ್ಲಿ ಅತೀಯಾದ ಕಾರಣ 2018-19 ರಲ್ಲಿ ಈ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಬೇಕಾಯ್ತು.
ಇಂದು BMTC ಬಸ್ಸುಗಳು 4500 ವೈಯಕ್ತಿಕ ಮಾರ್ಗಗಳಲ್ಲಿ ಸಂಚರಿಸುತ್ತವೆ. 2019 ರಲ್ಲಿ, BMTC ಮತ್ತು ಸರ್ಕಾರಿ ಏಜೆನ್ಸಿಗಳು, ಬಸ್ ಆದ್ಯತೆಯ ಲೇನ್ ಅನ್ನು ಘೋಷಿಸಿದವು. ಆದಾಗ್ಯೂ, ಬಸ್ ಲೇನ್ ಮತ್ತು ಮೆಟ್ರೋ ನಿರ್ಮಾಣಕ್ಕೆ ಹಾಕಿದ ತಡೆಗೋಡೆಗಳ ನಡುವೆ ಜಾಗವಿಲ್ಲ ಎಂಬ ಕಾರಣ ಹೇಳಿ ಕಾರು ಮಾಲೀಕರು ಅದನ್ನು ಪಾಲಿಸಲೇ ಇಲ್ಲಾ.
BMTC, ಬಸ್ಸುಗಳು, ಹೆಗ್ಗಳಿಕೆ
BMTC ಭಾರತದಲ್ಲಿ ವೋಲ್ವೋ ಸಿಟಿ ಬಸ್‌ಗಳನ್ನು ಪರಿಚಯಿಸಿದ ಮೊದಲ ರಾಜ್ಯ-ಚಾಲಿತ ಸಾರಿಗೆ ಒಕ್ಕೂಟವಾಗಿದೆ. ಇಂದು, ಬೆಂಮಸಾಸಂ 860 ಎಸಿ ಬಸ್ಸುಗಳನ್ನು ನಿರ್ವಹಿಸುತ್ತದೆ. ಜೊತೆಗೆ 90 ನಾನ್ ಎಸಿ ಮಿಡಿ ಬಸ್ ಗಳನ್ನು ಓಡಿಸುತ್ತಿದೆ. BMTCಯು ತನ್ನ ನಗರದಲ್ಲಿ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು 75 ನಾನ್-ಎಸಿ ಇ-ಬಸ್‌ಗಳನ್ನು ಇತ್ತೀಚೆಗೆ ಖರೀದಿಸಿ ಸೇವೆಯನ್ನು ಸಹ ಪ್ರಾರಂಭಿಸಿದೆ.
ಪ್ರಸ್ತುತ ಸೇವೆಯಲ್ಲಿರುವ ಬಸ್ ಸೇವೆಗಳನ್ನು 6 ವರ್ಗಗಳಾಗಿ ವರ್ಗೀಕರಿಸಲಾಗಿದೆ.
ಬೆಂಗಳೂರು ಸಾರಿಗೆ
ಸಂಪರ್ಕ
ಸಂಪರ್ಕ ಇವುಗಳು ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣಗಳ ಸುತ್ತ ಸುತ್ತು ಹೊಡೆಯುತ್ತಾ ಕಡಿಮೆ ಅಂತರ ಅಥವಾ ದೂರವನ್ನು ಕ್ರಮಿಸುತ್ತವೆ. ಇವು ಸಹ ನಾನ್-ಎಸಿ (ಸಾಮಾನ್ಯ) ಮಿನಿ ಬಸ್‌ಗಳಾಗಿವೆ. ಇವುಗಳು ಪ್ರಮುಖವಾಗಿ ಕೇಸರಿ ಬಣ್ಣ ಹೊಂದಿದ ಬಸ್ಸುಗಳಾಗಿವೆ. |
ಅಸ್ತ್ರ
ಅಸ್ತ್ರ |
ವಜ್ರ
ವಜ್ರ / ವಾಯು ವಜ್ರ |
ಇವು ಪ್ರಮುಖ ಬಸ್ ನಿಲ್ದಾಣಗಳು, ವಸತಿ ವಲಯಗಳು, ಕೈಗಾರಿಕಾ ಪ್ರದೇಶಗಳು ಮತ್ತು ಟೆಕ್ ಪಾರ್ಕ್‌ಗಳನ್ನು ಸಂಪರ್ಕಿಸುವ ಎಸಿ ಬಸ್‌ಗಳಾಗಿವೆ. ಹವಾನಿಯಂತ್ರಿತ ಬಸ್ಸುಗಳಾದ ಇವು ಸಾಮಾನ್ಯ ಬಸ್ಸುಗಳ ದರಕ್ಕಿಂತ ತುಸು ಹೆಚ್ಚು ಟಿಕೆಟ್ ದರ ಹೊಂದಿವೆ. ಇವುಗಳನ್ನು ತಿಳಿ ನೀಲಿ ಬಣ್ಣದ ಮೇಲೆ ಗುರುತಿಸಬಹುದಾಗಿದೆ.
ವಾಯು ವಜ್ರ
ಉಚಿತ ವೈ-ಫೈ ಹೊಂದಿರುವ ಎಸಿ ಬಸ್‌ಗಳು ಬೆಂಗಳೂರು ಮಹಾನಗರ ಪ್ರದೇಶದ ಪ್ರಮುಖ ಪ್ರದೇಶಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುತ್ತವೆ. ಇವು ನೋಡಲಿಕ್ಕೆ ವಜ್ರ ಬಸ್ಸುಗಳಂತೆ ಇರುತ್ತವೆ.
ಬೆಂಗಳೂರು ದರ್ಶಿನಿ
ಬೆಂಗಳೂರು ದರ್ಶಿನಿ |
ಇದು ಬೆಂಗಳೂರಿನ ಹೆಗ್ಗುರುತುಗಳುಳ್ಳ ಜಾಗಗಳನ್ನು, ಪ್ರಮುಖ ಪ್ರವಾಸಿ ಪ್ರದೇಶಗಳನ್ನು ಒಳಗೊಂಡಿರುವ ಮಾರ್ಗದಲ್ಲಿ ಓಡಾಡುವ ಹವಾನಿಯಂತ್ರಿತ ಬಸ್ಸುಗಳಾಗಿವೆ. ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ, ರಜಾದಿನಗಳಲ್ಲಿ ಇವುಗಳನ್ನು ನೋಡಬಹುದು. ಇದೊಂದು ಪ್ರವಾಸಿ ವಾಹನ ಸೇವೆ ಆಗಿದೆ.
ಈಗ ನಿಮಗೆ ಬೆಂಮಸಾಸಂ (ಬಿಎಂಟಿಸಿ)ಯ ಇತಿಹಾಸದ ಬಗ್ಗೆ ತಕ್ಕಮಟ್ಟಿಗೆ ತಿಳುವಳಿಕೆ ಬಂದಿರಬಹುದು ಎಂದು ಭಾವಿಸುತ್ತೇನೆ.
ಜನ ಸಾಮಾನ್ಯರಲ್ಲಿ ಒಂದೇ ಪ್ರಾರ್ಥನೆ, ಆದಷ್ಟು ಜನ ಸಾರಿಗೆಯ ಬಸ್‌ಗಳಲ್ಲಿ ಹೆಚ್ಚಾಗಿ ಪ್ರಯಾಣಿಸಿ. ಇದು ಊರಿಗೆ ಉತ್ತಮವಲ್ಲವೇ? ಸಾರ್ವಜನಿಕ ಸಾರಿಗೆಯನ್ನು ಬಳಸಿ ಮತ್ತು ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ನಗರಕ್ಕೆ ಸಹಾಯ ಮಾಡಿ.
0ಕಾಮೆಂಟ್‌ಗಳು