ಜಾಹಿರಾತು

ಯುವಜನರಲ್ಲಿ ಹೃದಯಾಘಾತ ಈಗೀಗ ಏಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ?

ಹೃದಯಾಘಾತ (Heart Attack), ಹೃದಯ ಸ್ತಂಭನ ಮತ್ತು ಇತರ ಹೃದಯ ಸಂಬಂಧಿತ ಕಾಯಿಲೆಗಳು ಪ್ರಪಂಚದಾದ್ಯಂತ ಜನರ ಆರೋಗ್ಯದ ದುಃಸ್ವಪ್ನವಾಗಿ ಉಳಿದಿವೆ. ಕಳವಳಕಾರಿ ಸಂಗತಿ ಏನೆಂದರೆ, ಇತ್ತೀಚನ ದಿನಗಳಲ್ಲಿ ಯುವಜನಸಂಖ್ಯೆಯಲ್ಲಿ(Young People) ಹೃದಯ ಸಂಬಂಧಿತ ಕಾಯಿಲೆಗಳು ತುಂಬಾ ವರದಿಯಾಗುತ್ತಿವೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ ಆಗಿರಬಹುದು, ಹಿಂದಿ ಬೆಳ್ಳಿ ತೆರೆಯ ಸಿದ್ಧಾರ್ಥ ಶುಕ್ಲಾ ಆಗಿರಬಹುದು ಇತ್ತೀಚಿಗೆ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಆಗಿರಬಹುದು, ಇವರೆಲ್ಲಾ ಈ ಹೃದಯ ಸಂಬಂಧಿತ ಕಾಯಿಲೆಗೆ ಜೀವ ತೆತ್ತಿದ್ದಾರೆ.
ಇಂತಹ ಘಟನೆಗಳಿಗೆ ವೈದ್ಯರು ಇನ್ನೂ ನಿರ್ಣಾಯಕ ಉತ್ತರಗಳನ್ನು ಕಂಡುಕೊಳ್ಳದಿದ್ದರೂ, ಅವರು ಇದಕ್ಕೆ ಕಾರಣವಾಗಬಹುದಾದ ಕೆಲವು ಅಂಶಗಳನ್ನು ಡಿಕೋಡ್ ಮಾಡಿದ್ದಾರೆ.
Heart Attack and Diseases in Young Population
ಯುವಜನಸಂಖ್ಯೆಯಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು

ಹೃದಯಾಘಾತ ಎಂದರೇನು?

ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದರೆ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಚಲನೆಯಲ್ಲಿ ತಡೆ ಉಂಟಾಗುವಿಕೆ. ಇದು ಹೃದಯಕ್ಕೆ ರಕ್ತದ ಹರಿವನ್ನು ತಡೆಯುತ್ತದೆ.
ಪ್ಲೇಕ್‌ಗಳ ರಚನೆಯಿಂದಾಗಿ ಹೃದಯಕ್ಕೆ ರಕ್ತದ ಹರಿವು ಹಠಾತ್ತಾಗಿ ತಡೆ ಉಂಟಾದಾಗ, ಪರಿಧಮನಿಯ ಅಪಧಮನಿಗಳು ಕಿರಿದಾಗಿ, ಹೃದಯಾಘಾತಕ್ಕೆ ಕಾರಣವಾಗುತ್ತದೆ. ಕೊಲೆಸ್ಟ್ರಾಲ್ ಸೇರಿದಂತೆ ಇತರೆ ಕೊಬ್ಬಿನ ನಿಕ್ಷೇಪಗಳ ಫಲಿತಾಂಶದಿಂದ ಪ್ಲೇಕ್‌ಗಳ ರಚನೆ ಆಗುತ್ತದೆ.
ಹೆಚ್ಚಿನ ಹೃದಯಾಘಾತಗಳು ಮಾರಣಾಂತಿಕವಾಗಬಹುದು. ಆದ್ದರಿಂದ, ಅದು ಸಂಭವಿಸಿದಾಗ, ಅವರಿಗೆ ತಕ್ಷಣ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.

ಯುವಕರಲ್ಲಿ ಹೃದಯಾಘಾತಕ್ಕೆ ಕಾರಣವೇನು?

ಹೃದಯ ಸಂಬಂಧಿತ ಕಾಯಿಲೆಗಳು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿವೆ. ಇದು ಇತ್ತೀಚೆಗೆ ಪತ್ತೆಯಾದ ರೋಗವಲ್ಲವಾದರೂ, ದೀರ್ಘಕಾಲದವರೆಗೆ ಹಾನಿಯನ್ನುಂಟುಮಾಡುತ್ತಿದೆ.
ಆದಾಗ್ಯೂ, ಮೊದ ಮೊದಲು ಕೇವಲ ವಯಸ್ಕರನ್ನು ಮತ್ತು ಮೊದಲಿನಿಂದಲೇ ಹೃದಯ ಸಂಬಂಧಿತ ಕಾಯಿಲೆ ಇರುವವರನ್ನು ಗುರಿಯಾಗಿಸಿಕೊಂಡಿದ್ದ ಅದರ ವಾಡಿಕೆಯ ಬದಲಾಗಿ, ಹೃದ್ರೋಗಗಳು ಈಗ ಕಿರಿಯ ಜನಸಂಖ್ಯೆಯ ಮೇಲೂ ಪರಿಣಾಮ ಬೀರುವುದಕ್ಕೆ ಶುರು ಮಾಡಿವೆ. ಇದು ಜನಗಳಲ್ಲಿ ಎಚ್ಚರಿಕೆಯನ್ನು ಮತ್ತು ಕಳವಳಗಳನ್ನು ಹುಟ್ಟುಹಾಕಿದೆ. ಇದರಿಂದಾಗಿ ಜನರು ಇದರ ಹಿಂದಿನ ವಿಜ್ಞಾನವನ್ನು, ತರ್ಕವನ್ನು ಹುದುಕುವಂತೆ ಶುರು ಮಾಡಿದೆ.

ಹೃದಯಾಘಾತ ನಿರ್ದಿಷ್ಟ ವಯಸ್ಸಿಗೆ ಸೀಮಿತವಾಗಿಲ್ಲದಿದ್ದರೂ ಸಹ, ನಿಮ್ಮ ಜೀವನಶೈಲಿ, ನಿಮ್ಮ ಆಹಾರ ಪದ್ಧತಿ, ನಿಮ್ಮ ವ್ಯಾಯಾಮದ ದಿನಚರಿ ಮತ್ತು ನೀವು ಒತ್ತಡವನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದರ ಮೇಲೆ ಅದರ ಸಂಭವನೀಯತೆಯ ಅವಲಂಬಿತವಾಗಿದೆ.

ವೈದ್ಯರ ಪ್ರಕಾರ ಪ್ರಮುಖ ಕಾರಣಗಳು:

ಡಾ ವನಿತಾ ಅರೋರಾ, ಹಿರಿಯ ಸಲಹೆಗಾರ್ತಿ, ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಸ್ಟ್ ಮತ್ತು ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್, ಅಪೊಲೊ ಆಸ್ಪತ್ರೆಗಳು, ನವದೆಹಲಿ, ಹೇಳುತ್ತಾರೆ "ಇತ್ತೀಚಿನ ದಿನಗಳಲ್ಲಿ ಯುವಜನತೆ ಯಾವುದೇ ರೀತಿಯ ಪೂರ್ವ ಹೃದಯ ತಪಾಸಣೆಗೆ ಒಳಗಾಗುವುದಿಲ್ಲ. ಪೂರ್ವ-ಹೃದಯ ತಪಾಸಣೆ ಇಲ್ಲದೆ ಜಿಮ್ ವರ್ಕೌಟ್ ಪ್ರಾರಂಭಿಸುತ್ತಾರೆ. ಈ ಸಮಯದಲ್ಲಿ ಅವರು ಹೆಚ್ಚಿನ ತೂಕ ಹೊರುವ ತರಬೇತಿಯನ್ನು ಸಹ ಶುರು ಮಾಡುತ್ತಾರೆ. ಇದರಿಂದಾಗಿ ಹೃದಯದ ಪದರದ ದಪ್ಪ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ  ಟ್ರೆಡ್ ಮಿಲ್ ವರ್ಕೌಟ್, ಕ್ರಾಸ್ ವರ್ಕೌಟ್ ತರಬೇತಿಯನ್ನು ಸಹ ಮಾಡುತ್ತಾರೆ. ಕೆಲವರು ದೇಹಕ್ಕೆ ಒಳ್ಳೆಯದಲ್ಲದ ಸಪ್ಲಿಮೆಂಟ್ (Supplements) ತೆಗೆದುಕೊಳ್ಳುತ್ತಾರೆ. ಇದು ಹೃದಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಇದರಿಂದ ಆರ್ಹೆತ್ಮಿಯಾ (arrhythmia) ಆಗುತ್ತದೆ."
ಡಾ. ಪಿಳ್ಳೈ ಈ ರೀತಿ ಹೇಳುತ್ತಾರೆ, " ಒಬ್ಬ ವ್ಯಕ್ತಿಯು ತನ್ನ ಇಪ್ಪತ್ತರ ಹರೆಯದಲ್ಲಿದ್ದಾಗ, ಹೆಚ್ಚಿದ ಕೊಲೆಸ್ಟ್ರಾಲ್ ಅಥವಾ ಇತರ ಆನುವಂಶಿಕ ಅಂಶಗಳಿಂದಾಗಿ ಅವರು ನಿಧಾನವಾಗಿ ಸಣ್ಣದಾದ ತಡೆಗಳನ್ನು( blockage) ಹೊಂದಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ವ್ಯಕ್ತಿಯು ತೀವ್ರವಾದ ಒತ್ತಡದ ಘಟನೆಯನ್ನು ಎದುರಿಸಿದಾಗ, ತಯಾರಿಗಳನ್ನೇ ಮಾಡದೇ ಹೆಚ್ಚಿನ ದೈಹಿಕ ಪರಿಶ್ರಮಕ್ಕೆ ಮುಂದಾದಾಗ ಅಥವಾ ಸೋಂಕಿನಂತಹ ತೀವ್ರವಾದ ಜೈವಿಕ ಒತ್ತಡಗಳಿಗೆ ಒಳಗಾದಾಗ, ಹೃದಯದ ಮೇಲಿನ ಒತ್ತಡ ಈಗಾಗಲೇ ಹೊಂದಿರುವ ಅಡೆತಡೆಗಳ ಬಳಿ ಹೆಪ್ಪುಗಟ್ಟುವಿಕೆಯನ್ನು ಉಂಟುಮಾಡುತ್ತದೆ. ಇದು ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ."

ಕಳೆದ ದಶಕದಲ್ಲಿ ಹೃದ್ರೋಗಗಳು ಹೆಚ್ಚಾಗಿವೆ. ಇದು ಗಮನಕ್ಕೆ ಬಂದಿರುವ ಪ್ರವೃತ್ತಿಯಾಗಿದ್ದರೂ, ಕಳೆದ ವರ್ಷ ಹೆಚ್ಚಾದ ಪ್ರಕರಣಗಳ ಸಂಖ್ಯೆಯು ಚಿಂತೆಗೀಡು ಮಾಡುವ ಸಂಗತಿಯಾಗಿದೆ." ಎಂದು ಡಾ. ಪಿಳ್ಳೈ ಹೇಳುತ್ತಾರೆ. "ಹೆಚ್ಚಿನ ಆರೋಗ್ಯ ವೃತ್ತಿಪರರು ಪ್ರಕಾರ ಈ ಸಂಖ್ಯೆ ಕೋವಿಡ್ -19 ನ ನೇರ ಪರಿಣಾಮವೆಂದು ಭಾವಿಸಿದ್ದಾರೆ. ಏಕೆಂದರೆ ಈ ರೋಗವು, ರೋಗಿಯ ರಕ್ತನಾಳಗಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ, ”ಎಂದು ಅವರು ಹೇಳುತ್ತಾರೆ.

ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಪದ್ಧತಿ ಸಾಕಾಗುತ್ತದೆಯೇ? ಅಥವಾ ಆನುವಂಶಿಕ ಅಂಶಗಳು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತವೆಯೇ?

ಆರೋಗ್ಯಕರ ಜೀವನಶೈಲಿಯು ಹೃದಯ ಸಂಬಂಧಿ ಕಾಯಿಲೆಗಳನ್ನು ನಿಗ್ರಹಿಸುವುದಲ್ಲದೇ ಅದರ ಜತೆ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೈಪರ್ಗ್ಲೈಸೀಮಿಯಾದಂತಹ ಇತರ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ದಿನನಿತ್ಯದ ವ್ಯಾಯಾಮ ಮತ್ತು ಸರಿಯಾದ ಆಹಾರಕ್ರಮವು ಖಾಯಿಲೆಗಳನ್ನು ದೂರವಿಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಆದಾಗ್ಯೂ, ಹೆಚ್ಚು ಅರಿವು ಮತ್ತು ತಿಳುವಳಿಕೆಯುಳ್ಳ ಯುವ ಜನತೆ, ಹೃದ್ರೋಗ ರೋಗಿಗಳಾಗುತ್ತಿರುವುದು, ನಮ್ಮ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತಿದೆ.
ಡಾ. ಪಿಳ್ಳೈ ಪ್ರಕಾರ, ಭಾರತೀಯ ಜನಸಂಖ್ಯೆಯ ಹೆಚ್ಚಿನ ಭಾಗವು ವಂಶೀಯವಾಗಿ ಈ ರೋಗವನ್ನು ಪಡೆದುಕೊಂಡು ಬಂದಿದ್ದಾರೆ.
"ಈ ಹೃದಯ ಸಂಬಂಧಿತ ಕಾಯಿಲೆಯ, ಈ ಆನುವಂಶಿಕ ಪ್ರಸರಣವು ಮುಖ್ಯವಾಗಿ ತಾಯಿಯ ಬದಲು ತಂದೆಯ ಕಡೆಯಿಂದ ಹರಡುತ್ತದೆ ಎಂದು ಸಾಮಾನ್ಯವಾಗಿ ಗಮನಿಸಲಾಗಿದೆ" ಎಂದು ಅವರು ಹೇಳುತ್ತಾರೆ.
ಈ ರೀತಿ ಹರಡಿದ ರೋಗ, ಯುವ ಜನತೆಯನ್ನು ಹಿಂದಿನ ಪೀಳಿಗೆಗಿಂತ ಬಹು ಬೇಗ ರೋಗಕ್ಕೆ ತುತ್ತಾಗುವಂತೆ ಮಾಡುತ್ತವೆ. ಇದು ಅನುವಂಶೀಯವಾಗಿ ಬಂದ ಕಾರಣ ಇದನ್ನು ತಡೆಯಲಾಗದಿದ್ದರೂ, ಅದರ ತೀವ್ರತೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ.

ಮಾನಸಿಕ ಒತ್ತಡಗಳು ಒಂದು ಪಾತ್ರವನ್ನು ವಹಿಸುತ್ತವೆಯೇ?

ಹೃದಯ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ಒತ್ತಡ ಮತ್ತು ಆತಂಕಕ್ಕೆ ಸಂಬಂಧಿಸಿವೆ.
ದೀರ್ಘಾವಧಿಯ ಒತ್ತಡದಿಂದ ಹೆಚ್ಚುವ ಕಾರ್ಟಿಸೋಲ್ ಮಟ್ಟ, ಅಧಿಕ ಕೊಲೆಸ್ಟ್ರಾಲ್, ಅಧಿಕ ಟ್ರೈಗ್ಲಿಸರೈಡ್‌ಗಳನ್ನು ಮತ್ತು ರಕ್ತದಲ್ಲಿ ಸಕ್ಕರೆಗೆ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದಾಗಿ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ. ಪರಿಣತರ ಪ್ರಕಾರ ಇವು ಹೃದ್ರೋಗಕ್ಕೆ ಸಾಮಾನ್ಯ ಅಪಾಯಕಾರಿ ಅಂಶಗಳಾಗಿವೆ.
ಡಾ. ಅರೋರಾ ಅವರ ಪ್ರಕಾರ, "ಯುವಕರು ಹೆಚ್ಚಿನ ಒತ್ತಡವನ್ನು ಹೊಂದಿದ್ದಾರೆ. ಕೆಲಸಗಳ ಒತ್ತಡ, ನಗರ ಜೀವನದ ಸಂಬಂಧಿಸಿದ ಒತ್ತಡ, ಅವರ ಜೀವನಶೈಲಿ - ಇದು ಸಾಮಾನ್ಯವಾಗಿ ಧೂಮಪಾನ, ಮದ್ಯಪಾನ, ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ಒಳಗೊಂಡಿದೆ. ಇದು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದಾಗಿ ಹೃದಯಾಘಾತವೋ, ಹೃದಯ ಸ್ತಂಭನವೋ ಅಥವಾ ಆರ್ಹೆತ್ಮಿಯಾ ಉಂಟಾಗುತ್ತದೆ."

ತಡೆಯುವ ಕ್ರಮಗಳು :

"ಮುನ್ನೆಚ್ಚರಿಕೆ ಕ್ರಮಗಳು, ರೋಗದಿಂದ ವಾಸಿಯಾಗುವುದಕ್ಕಿಂತ ಒಳ್ಳೇದು" ಎನ್ನುತ್ತಾರೆ ಡಾ. ಅರೋರಾ. 
"ಅತ್ಯಂತ ಮುಖ್ಯವಾದ ವಿಷಯವೆಂದರೆ, ಪೂರ್ವದಲ್ಲೇ ಹೃದಯ ಪರೀಕ್ಷೆಯನ್ನು ಮಾಡುಸಿಕೊಳ್ಳುವುದು. ಒಬ್ಬ ವ್ಯಕ್ತಿಗೆ ಹೃದಯ ಸಂಬಂಧಿ ಕಾಯಿಲೆಗಳು ಉಳ್ಳ ಕುಟುಂಬದ ಇತಿಹಾಸ ಇದ್ದರೆ, ಹೃದ್ರೋಗಶಾಸ್ತ್ರಜ್ಞ ಬಳಿಯೂ ಅಥವಾ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಸ್ಟ್ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು."
ಮತ್ತೊಂದೆಡೆ ಡಾ. ಪಿಳ್ಳೈ ಸಲಹೆ ಎಂದರೆ "ಜನ ತಮ್ಮ ಜಡತನದ ಜೀವನಶೈಲಿಯನ್ನು ಬದಲಾಯಿಸಬೇಕು, ಹೆಚ್ಚುವರಿ ಸಕ್ಕರೆ ಸೇವನೆಯನ್ನು ಹಿಡಿತದಲ್ಲಿ ಇಡಬೇಕು, ಲಿಪಿಡ್‌ಗಳ ಬೆಗ್ಗೆ ಹುಷಾರಾಗಿರಬೇಕು, ಕೊಬ್ಬಿನ ಅಂಶಗಳ ಸೇವನೆ, ಧೂಮಪಾನ ಮತ್ತು ಮದ್ಯಪಾನವನ್ನು ನಿಲ್ಲಿಸಬೇಕು. ಈ ಮೇಲಿನ ಎಲ್ಲವೂ ಕಾಯಿಲೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ.


COVID-19 ಮತ್ತು ಹೃದಯದ ಆರೋಗ್ಯ :

ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ, ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಜನರು ಅದನ್ನು ಕೆಟ್ಟದಾಗಿ ಹೊಂದಿದ್ದಾರೆ. ಕೋವಿಡ್ ರೋಗಲಕ್ಷಣಗಳನ್ನು ನಿಭಾಯಿಸುವುದರಿಂದ ಹಿಡಿದು ಕೋವಿಡ್ ನಂತರದ ತೊಡಕುಗಳನ್ನು ನಿರ್ವಹಿಸುವವರೆಗೆ, ಹೃದ್ರೋಗಿಗಳು ತೀವ್ರವಾದ ಸೋಂಕುಗಳು ಮತ್ತು ಹಠಾತ್ ಸಾವುಗಳ ನಿರಂತರ ಭಯದಲ್ಲಿ ಬದುಕುತ್ತಿದ್ದಾರೆ.
COVID-19 ರೋಗವು ಜನಗಳ ವಯಸ್ಸಿನಲ್ಲಿ ಯಾವುದೇ ತಾರತಮ್ಯ ಹೊಂದಿಲ್ಲ ಎಂದು ಡಾ. ಪಿಳ್ಳೈ ಹೇಳುತ್ತಾರೆ. ಅವರ ಪ್ರಕಾರ, ತಮ್ಮ ಹೃದಯ ಸಮಸ್ಯೆಗಳುಳ್ಳ ಯುವ ಜನತೆ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ.
"ಭಾರತದ ಸರಾಸರಿ ಹೃದ್ರೋಗ ಹೊಂದಿರುವವರ ವಯಸ್ಸು 40-50 ವಯಸ್ಸಿನ ವ್ಯಾಪ್ತಿಯಲ್ಲಿ ದಾಖಲಾಗಿದೆ. ದುರದೃಷ್ಟವಶಾತ್, ಇದು ಕೇವಲ ಹೃದ್ರೋಗವಲ್ಲ" ಎಂದು ಅವರು ಹೇಳುತ್ತಾರೆ.
"ಇಂತಹ ಸಂದರ್ಭದಲ್ಲಿ, ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೈಪರ್ಗ್ಲೈಸೀಮಿಯಾ ಹರಡುವಿಕೆಯಲ್ಲಿ ಹೆಚ್ಚಿನ ದಾಖಲಾತಿ ಸಹ ಕಂಡುಬಂದಿದೆ" ಎಂದು ಅವರು ಹೃದ್ರೋಗ ಹೊಂದಿರುವವರ ಬಗ್ಗೆ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು