ಜಾಹಿರಾತು

ಕೆ.ಪಿ.ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಅವರ ಪುಸ್ತಕಗಳ ಪಟ್ಟಿ

ತೇಜಸ್ವಿ ಎಂಬ ತೇಜಸ್ಸಿನ ಬರಹಗಾರ

ಕರ್ನಾಟಕ ಎನ್ನುವುದಕ್ಕಿಂತ ಭಾರತ ಕಂಡ ಅತ್ಯುತ್ತಮ ಸಾಹಿತಿಗಳಲ್ಲಿ ಪೂರ್ಣಚಂದ್ರ ತೇಜಸ್ವಿ (K. P. Poornachandra Tejaswi) ಕೂಡ ಒಬ್ಬರು. ಬರೀ  ಬುಕ್-ಪೆನ್ನು ಹಿಡಿದು ಕುಳಿತ ಸಾಹಿತಿ ಇವರಾಗಿರಲಿಲ್ಲ. ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ, ಸಂಗೀತ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಳಕೆ ಹಾಗೂ ಅದರಿಂದ ಪುಸ್ತಕ ಪಬ್ಲಿಷಿಂಗ್, ಅಡುಗೆ... ಹೀಗೆ ಹತ್ತು-ಹಲವು ಅವರ ಆಸಕ್ತಿ, ಅಭಿರುಚಿಗಳಾಗಿದ್ದವು. ಪ್ರಕೃತಿಯ ಮಡಿಲಲ್ಲಿ ತಮ್ಮದೇ ಆದ ಬಾಂಧವ್ಯವನ್ನು ಹುಟ್ಟು ಹಾಕಿಕೊಂಡು, ಕನ್ನಡಕ್ಕಾಗಿ ಸೇವೆ ಮಾಡಿದ ಅಪ್ರತಿಮ ದಾರ್ಶನಿಕ.

ಸ್ವಾಭಿಮಾನದ ಜೀವ

ಅಪ್ಪ ರಾಷ್ಟ್ರಕವಿ ಆಗಿದ್ದರೂ, ಅವರ ಹೆಸರಿನ ಹಂಗಲ್ಲಿ ಬದುಕದೇ, ತಮ್ಮದೇ ಆದ ಛಾಪನ್ನು ಮೂಡಿಸಿದರು. ತಂದೆ ಕುವೆಂಪು (Kuvempu) ರವರಿಂದ ಪಿತ್ರಾರ್ಜಿತ ಆಸ್ತಿಯಂತೆ, ಅವರಿಗೆ ಕನ್ನಡ ಪ್ರಯೋಗದ ಮೇಲೆ ಸಾಕಷ್ಟು ಹಿಡಿತ ಇತ್ತು. ಕನ್ನಡ ಸಾಹಿತ್ಯದಲ್ಲಿ ಅನ್ವೇಷಿಸಲಾಗದ ಅನೇಕ ವಿಷಯಗಳ ಮೇಲೆ, ತಮ್ಮ ಬರಹಗಳನ್ನು ಬರೆಯುವುದರ ಮೂಲಕ ನವ ಸಾಹಿತ್ಯಕ್ಕೆ ಉಸಿರು ತುಂಬಿದವರು. ಅವರು ಅಬಚೂರಿನಾ ಪೋಸ್ಟ್ ಆಫಿಸು ಎಂಬ ಸಣ್ಣ ಕಥಾ ಸಂಕಲನದೊಂದಿಗೆ ಬಂಡಾಯ ಸಾಹಿತ್ಯ ಪ್ರಕಾರವನ್ನು ಶುರು ಮಾಡಿದವರು.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ
 ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಬರಹದ ಸೇವೆ

ತಮ್ಮ ಈ ಬರಹ ವೃತ್ತಿ ಜೀವನವನ್ನು ಕವನಗಳ ಮೂಲಕ ಶುರು ಮಾಡಿದರು. ತಡ ನಂತರ, ನಿಧಾನವಾಗಿ, ಸಣ್ಣ ಕಥೆ, ಕಾದಂಬರಿ ಹಾಗೂ ಪ್ರಬಂಧಗಳನ್ನು ಬರೆಯಲು ಶುರು ಮಾಡಿದರು. ಪ್ರಜಾವಾಣಿ (Prajavani) ಕನ್ನಡ ಪತ್ರಿಕೆಯು ದೀಪಾವಳಿಯ ಸಂದರ್ಭದಲ್ಲಿ ನಡೆಸಿದ ಸ್ಪರ್ಧೆಯಲ್ಲಿ ತೇಜಸ್ವಿ ಅತ್ಯುತ್ತಮ ಕಥಾ ಪ್ರಶಸ್ತಿಯನ್ನು ಪಡೆದರು. ಅವರು ಬರೆದ ಮೊದಲ ಸಣ್ಣ ಕಥೆಯ ಹೆಸರು "ಲಿಂಗ ಬಂದ". ಮಳೆ ಬೀಳುವ ಪಶ್ಚಿಮ ಘಟ್ಟಗಳಲ್ಲಿ ನಡೆವ ಘಟನೆಗಳನ್ನು ಒಂದು ಸಣ್ಣ ಹುಡುಗನ ಕಣ್ಣಿನ ಮುಖಾಂತರ ಈ ಕಥೆಯನ್ನು ಹೇಳಿದರು.

Click here to read in English

ತೇಜಸ್ವಿಯವರು ಬರೆದ ಪುಸ್ತಕಗಳು ( Books By Poornachandra Tejaswi)

ತೇಜಸ್ವಿ ಅವರ ಅಪ್ರತಿಮ ಬರಹಗಳ ಪಟ್ಟಿ ಇಲ್ಲಿದೆ. ಅದರ ಜತೆಗೆ ನನ್ನ ಹಲವು ಅನಿಸಿಕೆಗಳನ್ನು ಸಹ ಬರೆದಿದ್ದೇನೆ.


Books by K. P. Poornachandra Tejaswi List-01
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಪಟ್ಟಿ-01

Books by K. P. Poornachandra Tejaswi List-02
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಪಟ್ಟಿ-02

Books by K. P. Poornachandra Tejaswi List-03
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಪಟ್ಟಿ-03

Books by K. P. Poornachandra Tejaswi List-04
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಪಟ್ಟಿ-04

Books by K. P. Poornachandra Tejaswi List-05
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಪಟ್ಟಿ-05

Books by K. P. Poornachandra Tejaswi List-06
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಪಟ್ಟಿ-06

Books by K. P. Poornachandra Tejaswi List-07
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಪಟ್ಟಿ-07

ಈ ಪೋಸ್ಟ್ ಇಷ್ಟವಾದಲ್ಲಿ, ಶೇರ ಮಾಡಿ.
Click here to read in English

ಕಾಮೆಂಟ್‌‌ ಪೋಸ್ಟ್‌ ಮಾಡಿ

2ಕಾಮೆಂಟ್‌ಗಳು