ಉಕ್ರೇನ್‌ನಲ್ಲಿ ಶಾಂತಿಯನ್ನು ತರಲು ಮತ್ತು ಮರುಸ್ಥಾಪಿಸಲು, ಇಲ್ಲಿ ತನಕ ಅಂತರರಾಷ್ಟ್ರೀಯ ಸಮುದಾಯವು ಎಷ್ಟೋ ವರ್ಷಗಳಿಂದ ಮಾಡಲು ಅಸಾಧ್ಯವಾದ ಕೆಲಸವೊಂದನ್ನು ಸಾಧಿಸುವುದರ ಮೇಲೆ ಅವಲಂಬಿತವಾಗಿದೆ: ಆ ಅಸಾಧ್ಯ ಕೆಲಸ ಎಂದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮನಸ್ಸನ್ನು ಬದಲಾಯಿಸುವುದು.
ರಷ್ಯಾದ ಚುಕ್ಕಾಣಿ ಹಿಡಿದ ಎರಡು ದಶಕಗಳಲ್ಲಿ ಅಧಿಕಾರವನ್ನು ಕೇಂದ್ರೀಕರಿಸಿದ ನಂತರ, ಪುಟಿನ್ ಈಗ ಏಕಾಂಗಿಯಾಗಿ ತನ್ನ ದೇಶದ ರಾಷ್ಟ್ರೀಯ ಭದ್ರತಾ ನೀತಿಯ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಉಕ್ರೇನ್ ಮತ್ತು ಪಾಶ್ಚಿಮಾತ್ಯ ಸರ್ಕಾರಗಳು ಪುಟಿನ್ ಆಕ್ರಮಣವನ್ನು ನಿಲ್ಲಿಸಲು ಮೂರು ದಾರಿಯಲ್ಲಿ ಕೆಲಸ ಮಾಡುತ್ತಿವೆ: ಅವರು ಪುಟಿನ್ ಅವರನ್ನು ನೇರವಾಗಿ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ, ಅದೇ ಸಮಯದಲ್ಲಿ ಜಾಗತಿಕವಾಗಿ ಆರ್ಥಿಕ ನಿರ್ಬಂಧ ಹೆರುವ ಮೂಲಕ ಬೇರೆ ರಷ್ಯನ್ಸ್ ಮೇಲೆ ಒತ್ತಡ ಹಾಕಿ ಪುಟಿನ್ ಮನವೊಲಿಸಲು ನೋಡುತ್ತಿದ್ದಾರೆ. ಕಡೆಯದಾಗಿ, ರಷ್ಯಾದ ಆಕ್ರಮಣಕ್ಕೆ ಬಲವಾದ ಪ್ರತಿರೋಧ ತೋರುತ್ತಾ ಯುದ್ಧವಾಡುತ್ತಿದ್ದಾರೆ.
ಯುದ್ಧ ಶುರುವಾಗಿ ಏಳು ದಿನಗಳಾದರೂ, ಯುದ್ಧ ನಿಲ್ಲಿಸುವುದಾಗಲಿ ಅಥವಾ ರಾಜತಾಂತ್ರಿಕವಾಗಿ ಇತ್ಯರ್ಥ ಮಾಡಿಕೊಳ್ಳುವುದರಲ್ಲಿ ಪುಟಿನ್ ಅವರಿಗೆ ಸ್ವಲ್ಪವೂ ಇಷ್ಟವಿಲ್ಲ ಎಂದು ಪಾಶ್ಚಿಮಾತ್ಯ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಪುಟಿನ್ ಅವರ ಮುಂದಿನ ಯೋಜನೆಗಳ ಬಗ್ಗೆ ಅವರಿಗೆ ಸ್ವಲ್ಪ ಅರಿವು ಇರುವುದರಿಂದ, ಯೋಜನೆಗಳ ಮುನ್ಸೂಚನೆಗಳಿಂದ ಗಾಬರಿಗೊಂಡಿದ್ದಾರೆ.
"ಸಧ್ಯಕ್ಕೆ ಪುಟಿನ್ ಅವರ ಬಳಿ ಸಹ ಹೋಗಲು ಯಾರಿಗೂ ಆಗುತ್ತಿಲ್ಲ" ಎಂದು ಹೇಳುತ್ತಾ, ಲಾಟ್ವಿಯಾದ ಮಾಜಿ ಅಧ್ಯಕ್ಷ ವೈರಾ ವಿಕ್-ಫ್ರೀಬರ್ಗಾ ಮತ್ತೆ ಹೇಳುತ್ತಾರೆ " ಇತಿಹಾಸವನ್ನು ಮತ್ತೆ ಬರೆಯುವ ಹಠ ಹೊಂದಿರುವ ಪುಟಿನ್, ತಮ್ಮದೇ ಆದ ಲೋಕ ಸೃಷ್ಟಿಸಿಕೊಂಡು, ಜೀವನ ನಡೆಸುತ್ತಿದ್ದಾರೆ."
ರಷ್ಯಾದ ಪಡೆಗಳು ಉಕ್ರೇನಿಯನ್ ರಾಜಧಾನಿ ಕೈವ್ ಕಡೆಗೆ ಮುನ್ನುಗುತ್ತಿರುವುದನ್ನು ಉಲ್ಲೇಖಿಸಿ ವೈರಾ " ಈ ಮನುಷ್ಯ ನರಮೇಧ ಮಾಡಲು ಹೊರಟಿದ್ದಾನೆ. ಜಗತ್ತಿನ ಎಷ್ಟೋ ಜನ ಕಿವಿಮಾತು ಹೇಳಿದ್ದಾರೆ. ಜೋ ಬಿಡೆನ್, ಬೋರಿಸ್ ಜಾನ್ಸನ್, ಸ್ಕೋಲ್ಜ್ ಎಲ್ಲರೂ ಒಂದು ಕೈ ನೋಡಿ ಬಿಟ್ಟಿದ್ದಾರೆ. ಆದರೆ ಈ ಮಹಾಶಯ ಪದಗಳ ಪ್ರಭಾವಕ್ಕೆ ಬರುವುದು ಬಿಡಿ, ತಾರ್ಕಿಕವಾಗಿ ಸಹ ಎಲ್ಲರನ್ನ ಮೀರಿ ಹೋಗಿದ್ದಾನೆ". ಎಂದು ಹೇಳಿದ್ದಾರೆ.
ಪ್ರಮುಖ ಪಾಶ್ಚಿಮಾತ್ಯ ನಾಯಕರಾಗಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಗುರುವಾರ ಪುಟಿನ್ ಒಡನೆ ಮಾತನಾಡಿದಾಗ, ಪುಟಿನ್ ಯುದ್ಧವನ್ನು ನಿಲ್ಲಿಸುವ ಪ್ರಮೇಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಮಾತುಕತೆ |
ಉಕ್ರೇನ್ ಸೋಮವಾರ ರಷ್ಯಾದೊಂದಿಗೆ ಮಾತುಕತೆಯನ್ನು ಆರಂಭಿಸಿದ್ದರೂ ಮತ್ತು ಅದರ ಅಧ್ಯಕ್ಷರು ಗುರುವಾರ ಪುಟಿನ್ ಅವರೊಂದಿಗೆ ನೇರ ಮಾತುಕತೆಗೆ ವಿನಂತಿಸಿದ್ದರೂ, ಹೆಚ್ಚಿನ ವಿದೇಶಾಂಗ ನೀತಿ ತಜ್ಞರ ಪ್ರಕಾರ ಕದನ ವಿರಾಮದ ಕೀಲಿಯು ಮಾಸ್ಕೋ ಮತ್ತು ಯುಎಸ್, ಯುರೋಪಿಯನ್ ಒಕ್ಕೂಟಗಳಂತಹ ವಿಶ್ವ ಶಕ್ತಿಗಳ ನಡುವಿನ ಒಪ್ಪಂದದ ನಡುವೆ ಇದೆ ಎಂದು ವಿಶ್ಲೇಷಿಸಿದ್ದಾರೆ.
ಬಿಡೆನ್ ಅವರು ಫೆಬ್ರವರಿ 12 ರಂದು ಪುಟಿನ್ ಅವರೊಂದಿಗೆ ಕೊನೆಯದಾಗಿ ಮಾತನಾಡಿದ್ದು. ಪುಟಿನ್ ಆಕ್ರಮಣ ಮಾಡುತ್ತಿರುವಾಗಲೇ ಇನ್ನೊಂದು ಕರೆ ಮಾಡುವುದು ಸೂಕ್ತವಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿದ್ದಾರೆ. ಗುರುವಾರ ಪ್ರಕಟವಾದ ಸುದ್ದಿ ಬಗ್ಗೆ ಎನ್‌ಬಿಸಿ ನ್ಯೂಸ್‌ನೊಂದಿಗೆ ಮಾತನಾಡುತ್ತಾ, ಯುಎಸ್ ಅಧಿಕಾರಿಯೊಬ್ಬರು, " ಪುಟಿನ್ ಯುದ್ಧ ವಿರಾಮಕ್ಕೆ ಸಿದ್ಧರಿರುವ ಯಾವುದೇ ಲಕ್ಷಣಗಳಿಲ್ಲ" ಎಂದು ಹೇಳಿದರು.
ಪುಟಿನ್ ಮೇಲೆ ಕಣ್ಣಿಡಲು ಸಹ ಈಗ ಕಷ್ಟವಾಗುತ್ತಿದೆ. ಇಲ್ಲಿ ತನಕ ಇದ್ದ ಗುಪ್ತ ಮಾಹಿತಿದಾರರು ಸಹ ರಷ್ಯಾ ತೊರೆದಿದ್ದಾರೆ. ಆದರೆ ಕೆಲ ವೀಕ್ಷಕರ ಪ್ರಕಾರ, ಪುಟಿನ್ ಅವರ ಸಧ್ಯದ ಮನಸ್ಥಿತಿ ಬಗ್ಗೆ ಗಾಬರಿ ವ್ಯಕ್ತಪಡಿಸಿದ್ದಾರೆ. ಯುರೋಪಿಯನ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ " ಪುಟಿನ್ ಮನಸ್ಥಿತಿ ಈಗ ಸರಿ ಇಲ್ಲ. ತನ್ನ ಸಿಬ್ಬಂದಿಯವರ ಮೇಲೆ ಕೂಗಾಡುತ್ತಿದ್ದಾನೆ. ಪುಟಿನ್ ನ ಯುದ್ಧ ಯೋಜನೆಯಂತೆ ನಡೆಯುತ್ತಿಲ್ಲ. ಇದೊಂದು ಅಪಾಯಕಾರಿ ಸಮಯ".
ಮೂರು ಸಂಭವನೀಯ ಅಂಶಗಳು ಈಗ ಪುಟಿನ್ ಅವರನ್ನು ಮಾತುಕತೆಯ ಮೇಜಿನ ಕಡೆಗೆ ತಳ್ಳಬಹುದು.
ಮೊದಲನೆಯದು ಸಮಯದ ಮೇಲೆ ಅವಲಂಬಿತವಾಗಿದೆ:
ಟ್ಯಾಂಕ್ ವಿರೋಧಿ ಕ್ಷಿಪಣಿಗಳಿಂದ ಹಿಡಿದು ವಾಯು ರಕ್ಷಣಾ ವ್ಯವಸ್ಥೆ ತನಕ ಮತ್ತು ಪಾಶ್ಚಿಮಾತ್ಯ ದೇಶಗಳ ಮಿಲಿಟರಿ ಬೆಂಬಲದಿಂದ ಹಿಡಿದು ಮದ್ದುಗುಂಡುಗಳವರೆಗೆ, ಪಾಶ್ಚಿಮಾತ್ಯ ದೇಶಗಳು ಎಷ್ಟು ಬೇಗ ಉಕ್ರೇನಿಯನ್ನರಿಗೆ ತಲುಪಿಸುತ್ತಾರೆ ಎಂಬುದರ ಮೇಲಿದೆ. ಇಂತಹ ನೆರವು ಹೆಚ್ಚಾಗಿ ಪೋಲೆಂಡ್ ಮೂಲಕ ಪಶ್ಚಿಮ ಉಕ್ರೇನ್‌ಗೆ ಬರುತ್ತಿವೆ, ನಂತರ ಅವುಗಳನ್ನು ಪೂರ್ವದಲ್ಲಿನ ಯುದ್ಧ ಭೂಮಿಗೆ ಸಾಗಿಸಬೇಕಾಗುತ್ತದೆ. ಇವೆಲ್ಲಾ ಎಷ್ಟು ಕಡಿಮೆ ಸಮಯ ತಗೆದುಕೊಳ್ಳುತ್ತದೆ ಎಂಬುದರ ಮೇಲೆ ಈ ಮಾತುಕತೆ ಅವಲಂಬಿತವಾಗಿದೆ.
ಹೆಚ್ಚಿನ ಸಾಮಾಗ್ರಿ ಸಿಕ್ಕಂತೆ, ಪ್ರಮುಖ ಪಟ್ಟಣಗಳ ಮೇಲೆ ಆಗುತ್ತಿರುವ ದಾಳಿಗೆ ಪ್ರತಿರೋಧ ತೋರಲು ಸಹಾಯವಾಗುತ್ತದೆ.
ಎರಡನೆಯದು, ಯುದ್ಧ ಶುರುವಾದ ಮೂಲ ಕಾರಣವನ್ನು ಪರಿಗಣಿಸುವುದು.
ಪಾಶ್ಚಿಮಾತ್ಯ ಪ್ರಭಾವ ತನ್ನ ಮಗ್ಗುಲಲ್ಲೇ ಶುರು ಆದ ಮೇಲೆ, ರಷ್ಯಾ ಅಧ್ಯಕ್ಷ ಪುಟಿನ್ ಮೊದಲು ಅನೇಕ ಚೇತಾವನಿ ನೀಡಿದರು. ಆದರೂ, ಅದು ನಿಲ್ಲದ ಕಾರಣ ಅವರು ಯುದ್ಧವನ್ನು ಆರಿಸಬೇಕಾಯ್ತು. ಈ ಪಾಶ್ಚಿಮಾತ್ಯ ದೇಶಗಳು ಒಡಗೂಡಿ, ಕಡೆ ಪಕ್ಷ ಮಾನವೀಯ ಮೌಲ್ಯಗಳ ಆಧಾರದ ಮೇಲೆ, ಪುಟಿನ್ ಅನ್ನು ಮಾತುಕತೆಗೆ ಕರೆಯುವುದು. ತಮ್ಮ ಕಿಡಿಗೇಡಿ ವಿಸ್ತಾರವಾದದಿಂದ ಹಿಂದೆ ಸರಿಯಲು ಒಪ್ಪಿದರೆ, ಮಾತುಕತೆಗೆ ಪುಟಿನ್ ಬರಬಹುದು ಎಂದು ಕಾಣುತ್ತದೆ.
ಮಾಜಿ ಪೆಂಟಗನ್ ಮತ್ತು ಸ್ಟೇಟ್ ಡಿಪಾರ್ಟ್ಮೆಂಟ್ ಅಧಿಕಾರಿ ಮೈಕೆಲ್ ಆಲ್ಬರ್ಟ್ಸನ್ ಪ್ರಕಾರ, ಮಾತುಕತೆಯಲ್ಲಿ ರಷ್ಯಾ ಒಂದು ಒಪ್ಪಂದವನ್ನು ಗಟ್ಟಿಯಾಗಿ ಹಿಡಿದಿಡಬೇಕು, ಯುಎಸ್ ನ ಒಂದು ಪ್ರಸ್ತಾವನೆಗಾಗಿ ಕಾಯಬೇಕು. ಯುಎಸ್ ಮೇಲೆ ಸಮಯ ಮತ್ತು ರಾಜಕೀಯ ಆಟಗಳು ತಮ್ಮ ಒತ್ತಡವನ್ನು ಹೇರಲಿ, ಕೊನೆಗೆ ಯುಎಸ್ ತಂತಾನೇ ರಷ್ಯಾದ ಒಪ್ಪಂದದ ಕಡೆಗೆ ವಾಲುವಂತೆ ಮಾಡಬೇಕು ಎಂದು.
ಮೂರನೆಯದು,
ಉಕ್ರೇನ್ ಅನ್ನು ರಷ್ಯಾ ಸಂಪೂರ್ಣವಾಗಿ ನಾಶ ಮಾಡುವವರೆಗೆ ಕಾದು, ನಂತರ ಮಾತುಕತೆಗೆ ಇಳಿಯುವುದು. ಇದು ಒಳ್ಳೆಯ ಆಯ್ಕೆ ಅಲ್ಲ ಎಂದು ಎಲ್ಲರಿಗೂ ಗೊತ್ತು.
ಏನೇ ಆಗಲಿ. ಈ ಯುದ್ಧ ಬೇಗಾ ಕೊನೆಗಾಣಲಿ ಎಂಬುದು ನನ್ನ ಆಶಯ.
0ಕಾಮೆಂಟ್‌ಗಳು