'ತೆರಿಗೆ ಭಯೋತ್ಪಾದನೆ(TAX TERRORISM)' ಎಂದರೆ ತೆರಿಗೆ ಅಧಿಕಾರಿಗಳು ಕಾನೂನುಬದ್ಧ ಅಥವಾ ಹೆಚ್ಚುವರಿ ಕಾನೂನು ವಿಧಾನಗಳನ್ನು ಬಳಸಿಕೊಂಡು ತೆರಿಗೆ ವಿಧಿಸಲು ಅನಧಿಕೃತವಾಗಿ ಅಧಿಕಾರ ಚಲಾಯಿಸುವುದು ಎಂದರ್ಥ. ಒಂದು ರೀತಿಯಲ್ಲಿ ತೆರಿಗೆ ಸುಲಿಗೆ ಎಂದು ಹೇಳಿದರೂ ತಪ್ಪಾಗಲ್ಲ. 
ವೊಡಾಫೋನ್ (Vodafone) ಪ್ರಕರಣವು ಈ ಒಂದು ವಿಷಯಕ್ಕೆ ಅತ್ತ್ಯುತ್ತಮ ಉದಾಹರಣೆ ಆಗಿದೆ. ಕಂಪನಿಯ ಪರವಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದರೂ ಕೂಡ, ಅದರ ಹೊರತಾಗಿ, ಅದರ ಹಿಂದಿನ ವಹಿವಾಟುಗಳ ಮೇಲಿನ ತೆರಿಗೆಯನ್ನು ಪಡೆಯಲು, ತೆರಿಗೆ ಕಾನೂನುಗಳನ್ನು ತಿದ್ದುಪಡಿಯನ್ನು ಮಾಡಲಾಯಿತು. 
ಈ ತೆರಿಗೆ ಭಯೋತ್ಪಾದನೆ ಹುಟ್ಟಲು, ಈಗ ಅಸ್ತಿತ್ವದಲ್ಲಿರುವ ತೆರಿಗೆ ವ್ಯವಸ್ಥೆಯೇ ಕಾರಣವಾಗಿದೆ.
tax-terrorism-india-kannada-ತೆರಿಗೆ ಭಯೋತ್ಪಾದನೆ
ತೆರಿಗೆ ಭಯೋತ್ಪಾದನೆ

1) ಸಂಕೀರ್ಣವಾಗಿ ರಚನೆ ಆಗಿರುವ ತೆರಿಗೆ ವಸೂಲಾತಿ ಕ್ರಮಗಳು

 ನಿಜ ಜೀವನದಲ್ಲಿ ಅತ್ಯಂತ ಸರಳವಾಗಿರುವ ವಹಿವಾಟುಗಳ ಮೇಲೆ ಕೂಡ ಹಲವಾರು ತೆರಿಗೆಗಳು ಅನ್ವಯವಾಗುತ್ತವೆ. ಇಂತಹ ತೆರಿಗೆಗಳ ಜಾಲವು, ಸರಾಗವಾಗಿ ನಡೆಯಬೇಕಾದ ವ್ಯವಹಾರಗಳಿಗೆ ತಡೆಯೊಡ್ಡುತ್ತವೆ.

2)ಕಾನೂನುಗಳಲ್ಲಿರುವ ಅಸ್ಪಷ್ಟತೆ

ಕಾನೂನಲ್ಲಿರುವ ಅಸ್ಪಷ್ಟತೆ, ಯಾವಾಗಲೂ ಕಾನೂನು ರಚಿಸುವವರ ಕಡೆಗೆ ವಾಲುತ್ತದೆ. ಕಾನೂನುನಲ್ಲಿರುವ ಅಸ್ಪಷ್ಟ ವ್ಯಾಖ್ಯಾನಗಳು ಕೆಲವೊಮ್ಮೆ MAT, CGT ಇತ್ಯಾದಿಗಳಂತಹ ತೆರಿಗೆಗಳ ಅನ್ವಯಿಸುವದರ ಬಗ್ಗೆ ಗೊಂದಲ ಉಂಟು ಮಾಡುತ್ತದೆ. ಈಗ GST ಬಂದ ಮೇಲೆ ನಿಯಮಗಳಲ್ಲಿ ಸ್ವಲ್ಪ ಸುಧಾರಣೆಗಳು ಕಂಡು ಬರುತ್ತಿವೆ. ವೊಡಾಫೋನ್ ಕೂಡ ಮೊದಲು ಇದೆ ಗೊಂದಲಕ್ಕೆ ಬಿದ್ದಿತ್ತು.

3) ದುರ್ಬಲ ಆಡಳಿತ

ದುರ್ಬಲ ಆಡಳಿತದ ಕಾರ್ಯವಿಧಾನವು ಕೆಲವೊಮ್ಮೆ ತೆರಿಗೆ ವಿವಾದಗಳನ್ನು ಹುಟ್ಟುಹಾಕುತ್ತವೆ. ಅಂತಿಮವಾಗಿ ಈ ವಿವಾದಗಳನ್ನು ನ್ಯಾಯಾಲಯಗಳಲ್ಲಿ ಪರಿಹರಿಸಲ್ಪಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಐಟಿ ಕಾಯಿದೆಯು ಸಿಬಿಡಿಟಿಗೆ (CBDT) ನೋಟಿಸ್ ಕಳುಹಿಸುವ ಪರಮಾಧಿಕಾರ ಕೊಡುತ್ತದೆ.ತನ್ನ ಆದಾಯವನ್ನು ಕಡಿಮೆ ವರದಿ ಮಾಡಿದ್ದಾರೆ ಅಥವಾ ತೆರಿಗೆಗಳನ್ನು ತಪ್ಪಾಗಿ ವರದಿ ಮಾಡಿದ್ದಾರೆ ಎಂಬ ಅನುಮಾನದ ಆಧಾರದ ಮೇಲೆ ನೋಟಿಸ್ ಕಳುಹಿಸಲು ಸಿಬಿಡಿಟಿಗೆ ಅಧಿಕಾರ ಇದೆ. ಅಧಿಕಾರಿಗಳ ಮೇಲೆ ಅಂತಹ ವಿವೇಚನೆಯು, ಕೆಲವೊಮ್ಮೆ, ದುರುಪಯೋಗವಾಗುತ್ತದೆ.


ಪರಿಣಾಮಗಳು:

1) ಈಸ್ ಆಫ್ ಡೂಯಿಂಗ್ ಬಿಸಿನೆಸ್ ಶ್ರೇಯಾಂಕ (EASE PF DPING BUSINESS INDEX) (142/188) ತೆರಿಗೆ ಭಯೋತ್ಪಾದನೆಗೆ ಸಾಕ್ಷಿಯಾಗಿದೆ. 
ವಿದೇಶಿ ಹೂಡಿಕೆದಾರರು ಇಂತಹ ತೆರಿಗೆ ಭಯೋತ್ಪಾದನೆಯಿಂದಾಗಿ ದೇಶದಲ್ಲಿ ಹೂಡಿಕೆ ಮಾಡಲು ಹೆದರುತ್ತಾರೆ.

2)ಯಾವುದೇ ರೀತಿಯಲ್ಲಿ ಅವರು ದಾವೆಗೆ ಒಳಗಾಗುವ ಕಾರಣದಿಂದ,  ಅನುಸರಿಸಿಕೊಂಡು ಹೋಗಲು ಸಿದ್ಧರಿರುವ ಉದ್ಯಮಿಗಳು ಕೂಡ ಇದನ್ನು ಪಾಲಿಸದೆ ಇರುವುದಕ್ಕೆ ಇದು ಕಾರಣವಾಗಿದೆ.

3) ಇಂತಹ ಅಪಾರದರ್ಶಕತೆ ಕೆಲವೊಮ್ಮೆ ಆದಾಯದ ಮೌಲ್ಯದ ಅಂದಾಜಿಸುವಿಕೆಗೆ ತೊಡಕನ್ನು ಉಂಟುಮಾಡುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಯೋಜನೆಗಳನ್ನು ರೂಪಿಸುವಲ್ಲಿ ತೊಂದರೆ ಉಂಟಾಗುತ್ತದೆ.

ಆದಾಗ್ಯೂ,  ಈ ಸಮಸ್ಯೆಯನ್ನು ಹಲವಾರು ಕ್ರಮಗಳ ಮೂಲಕ ಪರಿಹರಿಸಬಹುದು:

ಪರಿಹಾರ :

1) ಅಡ್ವಾನ್ಸ್ ರೂಲಿಂಗ್ (Advance Ruling) ಪ್ರಾಧಿಕಾರಕ್ಕೆ ಹೆಚ್ಚಿನ ಜವಾಬ್ದಾರಿ ನೀಡಬಹುದು. ಇದು ಅನಗತ್ಯ ವ್ಯಾಜ್ಯಗಳನ್ನು ತಪ್ಪಿಸುತ್ತದೆ.
2) ಜಿಎಸ್‌ಟಿ (GST) ಜಾರಿಗೊಳಿಸುವ ಮೂಲಕ ಪರೋಕ್ಷ ತೆರಿಗೆ ರಚನೆಯನ್ನು ಸರಳಗೊಳಿಸುವುದು ಭಾರತದ ಖಾಸಗಿ ವಲಯದ ಆರೋಗ್ಯಕ್ಕೆ ಧನಾತ್ಮಕವಾಗಿರುತ್ತದೆ. ಈಗಿನ ದಿನಗಳಲ್ಲಿ ಅದರ ಪರಿಣಾಮವನ್ನು ನಾವು ನೇರವಾಗಿ ನೋಡುತ್ತಿದ್ದೇವೆ.

3) ನೇರ ತೆರಿಗೆ ಚೌಕಟ್ಟನ್ನು ಬಿಚ್ಚಿಡಲು ನೇರ ತೆರಿಗೆ ಸಂಹಿತೆಯನ್ನು ಜಾರಿಗೊಳಿಸಬಹುದು. GAAR ನಿಬಂಧನೆಗಳನ್ನು ಪರಿಷ್ಕರಿಸಿ, SAAR ಗೆ ತರುವಂತೆ ಮಾಡಬೇಕು.

4) ತೆರಿಗೆ ಅಧಿಕಾರಿಗಳು ಮತ್ತು ಕಾರ್ಪೊರೇಟ್ ವಲಯದ ನಡುವೆ ಸಹಕಾರವನ್ನು ಸೃಷ್ಟಿಸಲು ಕಾರ್ಪೊರೇಟ್ ಕಾನೂನು ಸೇವಾ ಕೇಡರ್ ಸಹಾಯ ಮಾಡುವಂತಹ ವಾತಾವರಣ ಸೃಷ್ಟಿ ಆಗಬೇಕು.

5) ತೆರಿಗೆ ಭಯೋತ್ಪಾದನೆ ಪ್ರಕರಣಗಳ ತನಿಖೆ ಮತ್ತು ಅದರ ಬಗ್ಗೆ ತೀರ್ಪು ನೀಡಲು ತೆರಿಗೆ ಭಯೋತ್ಪಾದನಾ ನಿಗ್ರಹ ಬ್ಯೂರೋವೊಂದನ್ನು ಸ್ಥಾಪಿಸಿ, ಅದಕ್ಕೆ ಅರೆ ನ್ಯಾಯಾಂಗ ಅಧಿಕಾರಗಳನ್ನು ನೀಡಬಹುದು.

 ಭಾರತದ ನಿಜವಾದ ಆರ್ಥಿಕ ಸಾಮರ್ಥ್ಯವನ್ನು ತೆರೆದಿಡಲು, ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕೆಲಸ ಮಾಡಬೇಕೆ ಹೊರತು, ಜಗಳವಾಡಿಕೊಂಡಲ್ಲ.  ತೆರಿಗೆ ವಂಚನೆಯನ್ನು ಮೂಲದಲ್ಲೇ ತೆಗೆದುಹಾಕಬೇಕು, ತೆರಿಗೆಯನ್ನು ಭಯೋತ್ಪಾದನೆಯ ಮೂಲಕವಲ್ಲ, ಬದಲಿಗೆ ತೆರಿಗೆ ಅನುಸರಣೆಯ ಮೂಲಕ ಸಂಗ್ರಹಿಸಬೇಕು.