ಜಾಹಿರಾತು

ಭಾರತದಲ್ಲಿ ಏಕೆ ಆಂಡ್ರಾಯ್ಡ್ (Android) ಐಒಸ್ (IOS) ಅನ್ನು ಮೀರಿ ನಿಂತಿದೆ?

ಆಂಡ್ರಾಯ್ಡ್ OS(Android OS) ಅನ್ನು ಆರಂಭದಲ್ಲಿ ಆಂಡ್ರಾಯ್ಡ್ ಇಂಕ್.( Android Inc.) ಸಂಸ್ಥೆಯಿಂದ ಅಭಿವೃದ್ಧಿ ಪಡಿಸಲಾಯಿತು. 2005ರಲ್ಲಿ ಗೂಗಲ್ ( Google) ಇದನ್ನು ಸ್ವಾಧೀನಪಡಿಸಿಕೊಂಡಿತು. ಮೊಬೈಲ್ ಫೋನ್ ಲೆಕ್ಕದಲ್ಲಿ, ಆಂಡ್ರಾಯ್ಡ್ ಮೊಬೈಲ್ (Android Mobile) 2011 ರಿಂದ ಹೆಚ್ಚು ಮಾರಾಟವಾದ ಮೊಬೈಲ್ ಆಗಿದೆ. ಹಾಗೆಯೇ 20013 ರಿಂದ ಆಂಡ್ರಾಯ್ಡ್ ಟ್ಯಾಬ್ಲೆಟ್ (Android Tablet), ಅತೀ ಹೆಚ್ಚು ಮಾರಾಟವಾದ ಟ್ಯಾಬ್ಲೆಟ್ಗಳು ಆಗಿವೆ. ಭಾರತದಲ್ಲಿ ಸುಮಾರು 370 ಮಿಲಿಯನ್ ಸ್ಮಾರ್ಟ್ಫೋನ್ ಬಳಕೆದಾರರು ಇದ್ದಾರೆ. ಅದರಲ್ಲಿ ಶೇ.90.67 ಬಳಕೆದಾರರ ಬಳಿ ಆಂಡ್ರಾಯ್ಡ್ ಮೊಬೈಲ್ ಇದೆ. ಇದರ ಅಧಿಪತ್ಯ ಇಷ್ಟೊಂದು ದೊಡ್ಡದು. ಮುಂದೆ ಸಹ ಆಂಡ್ರಾಯ್ಡ್ ಮೊಬೈಲ್ಗಳು ಇನ್ನೂ ಹೆಚ್ಚು ಬೆಳೆಯುವ ಎಲ್ಲಾ ಲಕ್ಷಣಗಳು ಇವೆ.


ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಒಂದನೇ ಆಯ್ಕೆಯು ಆಂಡ್ರಾಯ್ಡ್ ಆಗಿರಲು ಕಾರಣ ಏನು ಎಂದು ನೋಡೋಣ.
Android is more successful than IOS in India, Kannada
ಆಂಡ್ರಾಯ್ಡ್ ಐಒಸ್ ಅನ್ನು ಮೀರಿ ನಿಂತಿದೆ

ಉಚಿತ ಮತ್ತು ಮುಕ್ತವಾಗಿರುವ ಮೂಲ:

ಮೊದಲನೆಯದಾಗಿ, ಈ OS ಮಾರುಕಟ್ಟೆಯಲ್ಲಿ ಉಚಿತವಾಗಿದೆ. ಅನೇಕ ಹಾರ್ಡ್‌ವೇರ್ ತಯಾರಕರು ತಮ್ಮ ವ್ಯವಹಾರದಲ್ಲಿ ಇದನ್ನು ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇದರಿಂದಾಗಿ, ಗ್ರಾಹಕರಿಗೆ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಕಡಿಮೆ ದರದಲ್ಲಿ ದೊರಕಲು ಸುಲಭವಾಯ್ತು. ಕೆಲವೇ ಸಾವಿರಗಳಲ್ಲಿ ಲಭ್ಯವಿರುವ ಸ್ಮಾರ್ಟ್ ಫೋನ್ ದೇಶದ ಮೂಲೆ ಮೂಲೆಗೂ ತಲುಪಿತು.  ಅಲ್ಲದೆ, ಆಂಡ್ರಾಯ್ಡ್ ಮುಕ್ತ ಮೂಲವಾಗಿದೆ. ಅಂದರೆ ಯಾವುದೇ ಪ್ಲಾಟ್‌ಫಾರ್ಮ್ಗಳ ಹಂಗು ಇದಕ್ಕಿಲ್ಲ, ಸ್ವಾತಂತ್ರವಾಗಿದೆ. ಆದ್ದರಿಂದ ವಿಂಡೋಸ್, ಲಿನಕ್ಸ್ ಮತ್ತು ಮ್ಯಾಕ್‌ನಂತಹ ಎಲ್ಲಾ ಪ್ಲಾಟ್‌ಫಾರ್ಮ್‌ಗಳನ್ನು ಈ OS ಬೆಂಬಲಿಸುತ್ತದೆ.  ಇದು ತೆರೆದ ಮೂಲವಾಗಿರುವುದರಿಂದ, ಯಾರು ಬೇಕಾದರೂ ಸಹ ಡೌನ್‌ಲೋಡ್ ಮಾಡಬಹುದು, ಮಾರ್ಪಾಡು ಮಾಡಬಹುದು. ಅದೂ ಉಚಿತವಾಗಿ. ಈ ಒಂದು ಸೌಲಭ್ಯದಿಂದ, ದಿನದಿಂದ ದಿನಕ್ಕೆ ಅಪ್ಲಿಕೇಶನ್ ಡೆವಲಪರ್‌ಗಳ ಸಂಖ್ಯೆಯನ್ನು ಹೆಚ್ಚಾಗುತ್ತಾ ಹೋಯಿತು. ಹಲವಾರು ಅಪ್ಲಿಕೇಶನ್‌ಗಳನ್ನು ಸಹ ಅಭಿವೃದ್ಧಿಪಡಿಸಲಾಯ್ತು ಮತ್ತು ಇನ್ನೂ ಅಭಿವೃದ್ಧಿಪಡಿಸುತ್ತಿದ್ದಾರೆ. ಇದು ವೈವಿಧ್ಯೀಕರಣಕ್ಕೆ ಕಾರಣವಾಗಿ, ಹಲವಾರು ಬಳಕೆದಾರರನ್ನು ಆಕರ್ಷಿಸಿತು.

ಬಳಕೆಯ ಕ್ಷಮತೆ ಮತ್ತು ಉಪಯುಕ್ತತೆ:

ಉಪಯುಕ್ತತೆಯ ಬಗ್ಗೆ ಮಾತನಾಡಬೇಕೆಂದರೆ, ಆಂಡ್ರಾಯ್ಡ್‌ನ ಬಹುಮುಖ ಸ್ವಭಾವವು ಬಹಳಷ್ಟು ಭಾರತೀಯ ಬಳಕೆದಾರರನ್ನು ಆಕರ್ಷಿಸಿದೆ.  ಆಂಡ್ರಾಯ್ಡ್ನ್ ಕೆಲ ಬಹುಮುಖ ವೈಶಿಷ್ಟ್ಯಗಳು ಇಂತಿವೆ,

ತಮ್ಮ ಸ್ವಂತ ಫೋನ್ ಅನ್ನು ಮಾರ್ಪಾಡು ಮಾಡುವ ಸ್ವಾತಂತ್ರ್ಯ:

ಆಂಡ್ರಾಯ್ಡ್‌ನ ಪ್ರಮುಖ ಶಕ್ತಿಯೆಂದರೆ ಇದು ವ್ಯಾಪಕವಾದ ಮಾರ್ಪಾಡನ್ನು ಅನುಮತಿಸುತ್ತದೆ.  ಮುಖಪುಟ ಪರದೆಯ ವಿನ್ಯಾಸವನ್ನು ಬದಲಾಯಿಸುವುದು, ವಿಜೆಟ್‌ಗಳನ್ನು ಸೇರಿಸುವುದು, ಅನಿಮೇಟೆಡ್ ವಾಲ್‌ಪೇಪರ್‌ಗಳನ್ನು ಹಾಕಿಕೊಳ್ಳಲು ಹೀಗೆ ಎಲ್ಲಾ ರೀತಿಯ ವೈಯಕ್ತಿಕ ಮಾರ್ಪಾಡುಗಳಿಗೆ ಇದು ಹೇಳಿ ಮಾಡಿಸಿದಂತಿದೆ. ಇಲ್ಲಿ  UI ಅನ್ನು ಸಹ ಬದಲಾಯಿಸಿ ನಿಮ್ಮ ಫೋನ್ ಅನ್ನು ವಿಂಡೋಸ್ ಫೋನ್ ಅಥವಾ ಐಫೋನ್‌ನಂತೆ ಕಾಣುವಂತೆ ಮಾಡಬಹುದು. ಮುಖ್ಯವಾಗಿ, ಈ OS 100 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ.  ಗೂಗಲ್ ಅಸಿಸ್ಟೆಂಟ್ ವೈಶಿಷ್ಟ್ಯವನ್ನು ಅಪ್‌ಗ್ರೇಡ್ ಮಾಡಲಾಗಿದೆ. ಕೇವಲ ರೊಬೊಟಿಕ್ ಆಗಿರುವ ಬದಲು, ನೈಜ-ಸಮಯದ ಸಹಾಯವನ್ನು ಒದಗಿಸುವಷ್ಟು ಶಕ್ತಿ ನೀಡಲಾಗಿದೆ.  ವಿಸ್ತರಿಸಬಹುದಾದ ಮೆಮೊರಿಯು, ರೋಬಸ್ಟ್/ ಗಟ್ಟಿಯಾಗಿರುವ OSನ ಮತ್ತೊಂದು ಆಕರ್ಷಕ ವೈಶಿಷ್ಟ್ಯವಾಗಿದೆ.

ಹಾರ್ಡ್‌ವೇರ್‌ನ ಆಯ್ಕೆ: 

ಜನರು ಆಂಡ್ರಾಯ್ಡ್ ಅನ್ನೇ OS ಮಾಡಿಕೊಳ್ಳಲು ಬಯಸಿದರೆ, ಹಾರ್ಡ್‌ವೇರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗಳಿವೆ. ಇನ್ನು ತಯಾರಕರು ಬಹಳ ಸಂಖ್ಯೆಯಲ್ಲಿ ಇನ್ನೂ ಆಂಡ್ರಾಯ್ಡ್ ಕಡೆಗೆ ಒಲವು ತೋರುತ್ತಿದ್ದಾರೆ. ಇದು ಮುಂದುವರಿಯುವ ನಿರೀಕ್ಷೆ ಸಹ ಇದೆ.

ಪ್ಲೇಸ್ಟೋರ್ ಮತ್ತು ಥರ್ಡ್-ಪಾರ್ಟಿ ಆಪ್ ಸ್ಟೋರ್: 

ಸುಮಾರು 3.5 ಮಿಲಿಯನ್ ಆಂಡ್ರಾಯ್ಡ್ (Android) ಅಪ್ಲಿಕೇಶನ್‌ಗಳು ಇರುವುದರಿಂದ, ಬಳಕೆದಾರರಿಗೆ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಲು ಹಲವಾರು ಆಯ್ಕೆಗಳಿವೆ.  ಹೆಚ್ಚುವರಿಯಾಗಿ, ಆಂಡ್ರಾಯ್ಡ್ ತನ್ನ ಪ್ಲೇ ಸ್ಟೋರ್‌ನಲ್ಲಿ ಗರಿಷ್ಠ ಸಂಖ್ಯೆಯ ಉಚಿತ ಅಪ್ಲಿಕೇಶನ್‌ಗಳನ್ನು ಹೊಂದಿದೆ.  ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ ಹೊರತುಪಡಿಸಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಸ್ಟೋರ್ ಅನ್ನು ಬಳಸಲು ಸಹ ಆಂಡ್ರಾಯ್ಡ್  ಅನುಮತಿ ನೀಡಿದೆ.
IOS and ANDROID comparison dindima kannada
ಹೋಲಿಕೆ

ಸಾರ್ವತ್ರಿಕ, ವೇಗದ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯ: 

ಒಂದೇ ಅಡಾಪ್ಟರ್ ಅನ್ನು ಯಾವುದೇ ರೀತಿಯ ಆಂಡ್ರಾಯ್ಡ್ (Android) ಫೋನ್‌ಗೆ ಬಳಸಬಹುದು.  ಅಲ್ಲದೆ, ಓಎಸ್(OS) ವೇಗದ ಚಾರ್ಜಿಂಗ್ ಸೌಲಭ್ಯ ಸಹ ನೀಡುತ್ತದೆ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಬೆಂಬಲಿಸುತ್ತದೆ.  ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆಯಲು, ಬೇರೆ OSಗಳ ರೀತಿ  ಅಡಾಪ್ಟರ್ ಅನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗಿಲ್ಲ. ಅದನ್ನು  ಫೋನ್‌ನೊಂದಿಗೆ  ಒದಗಿಸಲಾಗುತ್ತದೆ.

ಭಾರತದಲ್ಲಿ ಏಕೆ ಆಂಡ್ರಾಯ್ಡ್ (Android) ಐಒಸ್ (IOS) ಅನ್ನು ಮೀರಿ ನಿಂತಿದೆ?


ಸಧ್ಯದ ಮಾರುಕಟ್ಟೆಯಲ್ಲಿ, ಐಒಸ್(IOS)ನ ಪ್ರಾಬಲ್ಯ ಆಂಡ್ರಾಯ್ಡ್ ಗೆ ಹೋಲಿಸಿದರೆ ಬಹಳ ಕಡಿಮೆ. ಇದಕ್ಕೆ ಪ್ರಮುಖ ಕಾರಣ ದುಡ್ಡು. ಓರ್ವ ಭಾರತೀಯನ ಸರಾಸರಿ ಸಂಬಳಕ್ಕೆ ಹೋಲಿಸಿದರೆ, ಐಒಸ್(IOS) ಫೋನ್‌ಗಳು ಗಗನ ಕುಸುಮ. ಇದರಿಂದಾಗಿ, ಜನ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯ ಲಭ್ಯವಿರುವ ಫೋನ್ ಹುಡುಕಾಟದಲ್ಲಿ ಇರುತ್ತಾರೆ. ಆಂಡ್ರಾಯ್ಡ್ ಗೆ ಇದೆ ಬಂಗಾರದ ಕಣಜ. ತಮಗೆ ಬೇಕಾದ ರೀತಿಯ, ಅವಶ್ಯಕತೆಗೆ ತಕ್ಕ ಹಾಗೆ ಕೈಗೆಟಕುವ ರೀತಿಯಲ್ಲಿ ಆಂಡ್ರಾಯ್ಡ್ ಮಾರಾಟ ಆಗುತ್ತಿರಬೇಕಾದರೆ, ಜನ ಐಒಸ್ ಕಡೆಗೆ ತಲೆ ಹಾಕುವುದು ಕಡಿಮೆ.

ಇಲ್ಲಿಯವರೆಗೆ ಹೇಳಿದಂತಹ ಸೌಲಭ್ಯಗಳು ಐಓಸ್ ನಲ್ಲಿ ಸಿಗುವುದು, ಕೈಗೆಟಕುವ ದರದಲ್ಲಿ ಸಿಗುವುದು ತುಂಬಾ ಕಡಿಮೆ. ಇದಲ್ಲದೆ, IOS ಗಿಂತ ಆಂಡ್ರಾಯ್ಡ್‌ನಲ್ಲಿ ಕ್ಲೌಡ್ ವೈಶಿಷ್ಟ್ಯವನ್ನು ಬಳಸುವುದು ಸುಲಭವಾಗಿದೆ.

ಇಷ್ಟು ಬಲವಾದ ವೈಶಿಷ್ಟ್ಯಗಳನ್ನು ಹೊಂದಿರುವ ಆಂಡ್ರಾಯ್ಡ್, ಬಳಕೆದಾರರಿಗೆ ಯಾವುದೇ ಇತರ OS ಗಿಂತ ಆಂಡ್ರಾಯ್ಡ್ ಅನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಡುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು