1980 ದಶಕದ ಸಮಯದಲ್ಲಿ, ಎಚ್‌ಎಂಟಿ ಕೈಗಡಿಯಾರದ ಹವಾ ಎಷ್ಟಿತ್ತು ಎಂದರೆ, ತಿಂಗಳ ಮೊದಲೇ ಬುಕಿಂಗ್ ಮಾಡಬೇಕಾದ ಪರಿಸ್ಥಿತಿ ಇತ್ತು. ಅಥವಾ ಪರಿಚಿತ ಅನಿವಾಸಿ ಭಾರತೀಯ ಸಂಬಂಧಿಕರನ್ನು ನೆಚ್ಚಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕೈಗಡಿಯಾರ ಧರಿಸುವುದು ಪ್ರತಿಷ್ಠೆಯೇ ಆಗಿತ್ತು. ಈ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗೆ ಆಗುವಂತೆ ಮಾಡಿದ ಕಂಪನಿಯ ಹೆಸರೇ ಟೈಟಾನ್. ಭಾರತದಲ್ಲಿ ಕೈಗಡಿಯಾರದ ವಿಷಯದಲ್ಲಿ ಕ್ರಾಂತಿ ತಂದ ಟೈಟಾನ್ ಬಗ್ಗೆ, ಅದರ ಯಶಸ್ಸಿನ ಬಗ್ಗೆ ಈ ಲೇಖನ.
1984ರಲ್ಲಿ ಸ್ಥಾಪಿತವಾದ ಕಂಪನಿ, 1987 ರಲ್ಲಿ ಟಾಟಾ ಇಂಡಸ್ಟ್ರೀಸ್ ಮತ್ತು TIDCO (ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ) ಜಂಟಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಯಿತು. ಟೈಟಾನ್ ವಿವಿಧ ಕ್ವಾರ್ಟ್ಜ್ ವಾಚ್‌ಗಳನ್ನು ನೀಡುವ ಮೂಲಕ, ಗಡಿಯಾರಕ್ಕಾಗಿ ಕಾಯುವ ಅಭ್ಯಾಸವನ್ನು ಕಿತ್ತುಹಾಕಿತು. ಗಡಿಯಾರವನ್ನು ಕೇವಲ ಯಾಂತ್ರಿಕ ವಸ್ತು ಎಂದು ಬಿಂಬಿಸದೇ, ಮೌಲ್ಯಯುತ ಬ್ರ್ಯಾಂಡ್ ಕೈಗಡಿಯಾರಗಳು ಎಂದು ಲೇಬಲ್ ಮಾಡಲಾಯಿತು. ಒಂದೇ ವ್ಯತ್ಯಾಸವೆಂದರೆ, ಈಗ ಅವುಗಳು ಸುಲಭವಾಗಿ ಸಿಗುವಂತೆ ಮತ್ತು ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಸಿಗಲಾರಂಭಿಸಿತು.
23 ಡಿಸೆಂಬರ್ 1987 ರಂದು, ಟೈಟಾನ್ ತನ್ನ ಮೊದಲ ಶೋರೂಮ್ ಅನ್ನು ಬೆಂಗಳೂರಿನ ಸಫಿನಾ ಪ್ಲಾಜಾದಲ್ಲಿ ತೆರೆಯಿತು. ದಿನಪತ್ರಿಕೆಯಲ್ಲಿ ಬಂದ ಟೈಟಾನ್ ಕ್ಯಾಟಲಾಗ್‌ನ ಕಟಿಂಗ್‌ಗಳೊಂದಿಗೆ ನೂರಾರು ಜನರು ಅಂಗಡಿ ಜಮಾಯಿಸಿದರು. 2018 ರ ಹೊತ್ತಿಗೆ, ಈ ಗಡಿಯಾರ ತಯಾರಕ ಕಂಪನಿ ಭಾರತದಾದ್ಯಂತ 1,000 ಮಳಿಗೆಗಳನ್ನು ಹೊಂದಿತ್ತು. ಟೈಟಾನ್ ಭಾರತದ ಅತ್ಯಂತ ಪ್ರೀತಿಯ ಬ್ರ್ಯಾಂಡ್ ಆಗಿದ್ದು, ಬಾಯಿಂದ ಬಾಯಿಗೆ ಅದರ ಕುರಿತು ಹರಡಿದ ಮಾತುಗಳಿಂದ. ಸಮಾನ ಗುಣಮಟ್ಟವನ್ನು ಕಾಯ್ದುಕೊಂಡು, ಎಲ್ಲ ರೀತಿಯ ಜನ ಸಮುದಾಯಕ್ಕೆ ಪೂರೈಸುತ್ತಾ, ತನ್ನ ಉತ್ಪನ್ನಗಳಲ್ಲಿ ಸದಾ ತುಂಬುತ್ತಾ ಗ್ರಾಹಕರ ನೆಚ್ಚಿನ ಬ್ರಾಂಡ್ ಆಗಿ ನಮ್ಮ ಮುಂದೆ ನಿಂತಿದೆ.
ಕ್ಸೆರ್ಕ್ಸೆಸ್ ದೇಸಾಯಿ(Xerxes Desai), ಈ ಕಂಪನಿಯ ಮೊದಲ ಸಿಇಓ. ಖುದ್ದು ಫ್ಯಾಷನ್ ಮನೋಭಾವನೆಯುಳ್ಳ ವ್ಯಕ್ತಿಯಾಗಿದ್ದ ಇವರು, ಅವರೇ ಕೆಲವೊಂದು ಕೈಗಡಿಯಾರಗಳನ್ನು ವಿನ್ಯಾಸಗೊಳಿಸಿ, ಭಾರತ ಹಿಂದೆಂದೂ ಕಂಡಿರದ ಹೊಸ ಶೈಲಿಗಳನ್ನ ಪರಿಚಯಿಸಿದರು. ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿದರೂ ಕೂಡ, ಸಾಮಾನ್ಯ ಜನತೆಗೆ ಕೈಗೆಟಕುವ ದರದಲ್ಲಿ ಮಾರುವುದು ಅವರ ಪ್ರಮುಖ ಉದ್ದೇಶವಾಗಿತ್ತು.
ಇದಕ್ಕೂ ಮೊದಲು ದೇಸಾಯಿ ಅವರು ಎರಡು ದಶಕಗಳ ಕಾಲ ಟಾಟಾ(TATA) ಗುಂಪಿನೊಂದಿಗೆ ಕೆಲಸ ಮಾಡಿದ್ದರು. ಅವರಿಗೆ ಕೈಗಡಿಯಾರದ ಬ್ರಾಂಡ್ ಅನ್ನು ಸ್ಥಾಪಿಸುವ ಕಾರ್ಯವನ್ನು ನಿಯೋಜಿಸಲಾಯಿತು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ ಆಗಿದ್ದ ದೇಸಾಯಿ ಅವರು, ಜಮ್‌ಸೆಟ್‌ಜಿ ಟಾಟಾ ಅವರ ಸಮುದಾಯದ ಬೆಳವಣಿಗೆಯ ತತ್ವವನ್ನು ಗಂಭೀರವಾಗಿ ತೆಗೆದುಕೊಂಡರು. ಅವರು ಹೇಗೆ ಜಮ್‌ಶೆಡ್‌ಪುರದಂತಹ ಕಡಿಮೆ-ಪ್ರಸಿದ್ಧ ಪ್ರದೇಶದಲ್ಲಿ ಮೊದಲ ಕಾರ್ಖಾನೆಯನ್ನು ಸ್ಥಾಪಿಸಿದರೋ, ಅದೇ ರೀತಿಯಲ್ಲಿ, ಬೆಂಗಳೂರಿನಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿರುವ ಇರುವ ಹೊಸುರ ಅನ್ನು ಆಯ್ಕೆ ಮಾಡಲಾಯ್ತು. ಇನ್ನೊಂದು ಆಶ್ಚರ್ಯದ ಸಂಗತಿ ಎಂದರೆ, ಬೆಂಗಳೂರಿನಲ್ಲಿ ಎಚ್‌ಎಂಟಿ ಕಂಪನಿ ಸಹ ಇತ್ತು.
ಟೈಟಾನ್ 1984 ರಲ್ಲಿ ತಮಿಳುನಾಡು ಸರ್ಕಾರಕ್ಕೆ ಉದ್ಯೋಗವನ್ನು ಸೃಷ್ಟಿಸುವ ಭರವಸೆಯನ್ನು ಕೊಟ್ಟಿತು. ಮೂರು ವರ್ಷಗಳ ಸಂಶೋಧನೆ, ಪರಿಕಲ್ಪನೆ, ವಿನ್ಯಾಸ ಮತ್ತು ಕಠಿಣ ತರಬೇತಿಯ ನಂತರ, ಕಂಪನಿಯ ಮೊದಲ ಬ್ಯಾಚ್‌ಮೇಕರ್‌ಗಳು ಕೆಲಸಕ್ಕಾಗಿ ಸಿದ್ಧರಾಗಿದ್ದರು. ಇಂದು, ಐದು ಕಾರ್ಖಾನೆಗಳಲ್ಲಿನ ಉತ್ಪಾದನಾ ವಿಭಾಗದಲ್ಲಿ 1,600 ಜನರು ಕೆಲಸ ಮಾಡುತ್ತಿದ್ದಾರೆ.
ಟಾಟಾಗಳ ಬಗ್ಗೆ ಕೇಳಿರದ ಅಥವಾ ಬ್ಯಾಟರಿ ಚಾಲಿತ ವಾಚ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂದು ದೂರದಿಂದಲೂ ತಿಳಿದಿರದ ಹಳ್ಳಿಯು, ಈಗ ಸಾಮಾನ್ಯ ಡಯಲ್ ಕೈಗಡಿಯಾರದಿಂದ ಹಿಡಿದು, ಚಿನ್ನ ಲೇಪಿತ ಡಯಲ್‌ಗಳಂತಹ ವೈವಿಧ್ಯಮಯ ವೈಶಿಷ್ಟ್ಯಗಳೊಂದಿಗೆ ಬೆರಗುಗೊಳಿಸುವ ಗಡಿಯಾರಗಳನ್ನು ತಯಾರಿಸುತ್ತಿದೆ.
ಆದರೆ ತಯಾರಕರು ಕೇವಲ ಜಾಹೀರಾತುಗಳೊಂದಿಗೆ, ಅವರ ಅತ್ಯಾಧುನಿಕ ವಾಚ್‌ಗಳನ್ನು ಬಿಡುಗಡೆ ಮಾಡುವುದು ಸಾಕಾಗುವುದಿಲ್ಲ ಎಂದು ಭಾವಿಸಿದರು. ಕೈಗಡಿಯಾರ ಎಂಬುದು ಏಕ-ಹೂಡಿಕೆಯ ವಸ್ತು. ಜನ ಒಂದೇ ಸಲ ಖರೀದಿ ಮಾಡುತ್ತಾರೆ. ಆದ್ದರಿಂದ ಅವರು ಕಣ್ಣು ಕುಕ್ಕುವ ಮತ್ತು ಆಕರ್ಷಕ ವೈಶಿಷ್ಟ್ಯವುಳ್ಳ ಕೈಗಡಿಯಾರಗಳನ್ನು ವರ್ಷದಿಂದ ವರ್ಷಕ್ಕೆ ಹೊಸದಾಗಿ ಅಭಿವೃದ್ಧಿಪಡಿಸಲು, ತಮ್ಮ ಸಮಯ ಮತ್ತು ಸಂಪನ್ಮೂಲಗಳಲ್ಲಿ ಹೆಚ್ಚು ಹೂಡಿಕೆ ಮಾಡಿದರು. ಇದನ್ನು ಬಹು-ಬ್ರಾಂಡ್ ಚಿಲ್ಲರೆ ವ್ಯಾಪಾರ ಮಾಡುವುದರ ಮೂಲಕ, ಔಟ್‌ಲೆಟ್‌ಗಳೊಂದಿಗೆ ಸಹಯೋಗ ಹೊಂದುತ್ತ ಮತ್ತು ಫಾಸ್ಟ್ರ್ಯಾಕ್, ಸೊನಾಟಾ, ತನಿಷ್ಕ್, ಟೈಟಾನ್ ಐ ಪ್ಲಸ್ ಮತ್ತು ತನೇರಾ ಎಂಬ ಮುಂತಾದ ಹೊಸ ಉಪ-ಬ್ರಾಂಡ್‌ಗಳನ್ನು ತರುವ ಮೂಲಕ ತಮ್ಮ ಮಾರಾಟ ಪರಿಧಿಯನ್ನು ಗಟ್ಟಿ ಮಾಡಿಕೊಂಡಿದ್ದಾರೆ.
ಟೈಟಾನ್ ಇತ್ತೀಚಿನ ಟ್ರೆಂಡ್ ಮತ್ತು ನಾವೀನ್ಯತೆಗಳಿಂದ ಹೆಸರುವಾಸಿಯಾಗಿದೆ. ಕೇವಲ ದೇಶೀಯ ವಲಯದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಜನಜನಿತವಾಗಿದೆ. ಫ್ರೆಂಚ್, ಜಪಾನೀಸ್ ಮತ್ತು ಸ್ವಿಸ್ ಸೇರಿದಂತೆ ವಿವಿಧ ಜಾಗತಿಕ ಕೈಗಡಿಯಾರ ತಯಾರಕರ ಮಾದರಿಯನ್ನು ತಗೆದುಕೊಂಡು, ದೇಶೀಯ ಗ್ರಾಹಕರಿಗೆ ಸರಿಹೊಂದುವಂತೆ, ಹಿಂದೆಂದೂ ಕಂಡಿರದ ವಿನ್ಯಾಸಗಳನ್ನು, ಕಸ್ಟಮೈಸ್ ಮಾಡುವ ಮೂಲಕ ಈ ಬ್ರ್ಯಾಂಡ್, ಗ್ರಾಹಕರ ನೆಚ್ಚಿನ ಬ್ರಾಂಡ್ ಆಗಿ ಹೊಮ್ಮಿತು/ಹೊಮ್ಮಿದೆ. ಜಗತ್ತಿನ ಹಲವೆಡೆ ಉದಾರೀಕರಣದ ನಂತರ, ಇಂತಹ ತಂತ್ರವನ್ನು ಹೆಚ್ಚಾಗಿ ಅನುಸರಿಸಲಾಯಿತು. ಇದೆ ಸಮಯದಲ್ಲಿ FCUK, ಫಾಸಿಲ್ ಮತ್ತು ಟಾಮಿ ಹಿಲ್ಫಿಗರ್‌ನಂತಹ ಜಾಗತಿಕ ಆಟಗಾರರು ಸಹ ಈ ಕ್ಷೇತ್ರಕ್ಕೆ ಕಾಲಿಟ್ಟರು.
ಟೈಟಾನ್ ಇಟ್ಟ ಮತ್ತೊಂದು ಅತ್ಯುತ್ತಮ ಹೆಜ್ಜೆ ಎಂದರೆ. ತಮ್ಮ ಬ್ರಾಂಡ್ ಅನ್ನು ವೈಶಾಲಿಕರಿಸಿದ್ದು ಮತ್ತು ವೈವಿಧ್ಯತೆಯನ್ನು ತಂದಿದ್ದು.
ಟೈಟಾನ್ ಎಡ್ಜ್ ಅನ್ನು 2002 ರಲ್ಲಿ ಪರಿಚಯಿಸಲಾಯಿತು. ಈ ಕೈಗಡಿಯಾರದ ಡಯಲ್‌ಗಳು, ಅದರ ಪಟ್ಟಿಗಳಿಗಿಂತ ತೆಳ್ಳಗಿರುತ್ತವೆ. ಅನಲಾಗ್ ವಾಚ್‌ಗಳು ಹಗುರವಾಗಿರುತ್ತವೆ. ಆಯತಾಕಾರ, ದುಂಡಾಕಾರ ಮತ್ತು ಡ್ಯುಯಲ್ ಡಯಲ್‌ಗಳಂತಹ ವಿವಿಧ ಆಕಾರಗಳಲ್ಲಿ ಇವುಗಳನ್ನು ಮುಂದಿಡಲಾಯಿತು. ಈ ಅಗಾಧ ಯಶಸ್ಸಿನ ನಂತರ, ಕಂಪನಿಯು 'ಎಡ್ಜ್ ಮೆಕ್ಯಾನಿಕಲ್'- ಅಂದರೆ ತೆಳ್ಳಗಿನ ಯಾಂತ್ರಿಕ ಗಡಿಯಾರವನ್ನು ಪರಿಚಯಿಸಿತು.
ಎಡ್ಜ್‌ನಂತೆ, ಫಾಸ್ಟ್ಟ್ರ್ಯಾಕ್ ಎಂಬ ಮತ್ತೊಂದು ಉಪ-ಬ್ರಾಂಡ್ ಅನ್ನು ಹೊರತರಲಾಯಿತು. ಮೊದಲ ಬಾರಿಗೆ 1998 ರಲ್ಲಿ ಸ್ಥಾಪಿಸಲಾಯಿತು, 2005 ರಲ್ಲಿ Gen Zs ಗಾಗಿ ಫಾಸ್ಟ್ರ್ಯಾಕ್ ಅನ್ನು ಉಬರ್ ಕೂಲ್ ವಾಚ್ ಆಗಿ ಪರಿವರ್ತಿಸಲಾಯಿತು. ಅದರ ಪ್ರಚೋದನಕಾರಿ ಜಾಹೀರಾತುಗಳು ಮತ್ತು ಕೈಗೆಟುಕುವ ಬೆಲೆಯು, ಯುವಕರ ಗಮನವನ್ನು ಸೆಳೆಯಿತು. 2013 ರಲ್ಲಿ ಅದರ 'ಕಮ್ ಔಟ್ ಆಫ್ ದಿ ಕ್ಲೋಸೆಟ್' ಎಂಬ ಜಾಹೀರಾತು/ಸರಣಿ ನಿಮಗೆ ನೆನಪಿರಬಹುದು.
ಟೈಟಾನ್ ರಾಗವು ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾದ ಮತ್ತೊಂದು ಗಮನ ಸೆಳೆಯುವ ಉಪ-ಬ್ರಾಂಡ್ ಆಗಿದೆ. ಈ ಬ್ರ್ಯಾಂಡ್ ಎಲ್ಲೆಡೆಯಲ್ಲೂ ಮನೆಮಾಡಿರುವ ಲಿಂಗ ಪಕ್ಷಪಾತದ ಕಲ್ಪನೆಯನ್ನು ನಿರ್ಮೂಲನೆ ಮಾಡಲು ಅನೇಕ ಜಾಹೀರಾತುಗಳನ್ನು ಬಳಸಿದೆ. ಅವರ ಅಭಿಯಾನಗಳಾದ #HerLifeHerChoices ಮತ್ತು #Breakthebias, ವೀಕ್ಷಕರು ಮತ್ತು ವಿಮರ್ಶಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿವೆ. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ, ಈ ಉಪ-ಬ್ರಾಂಡ್ ಮೂಲಕ, ಟೈಟಾನ್ ಪುರುಷರ ಕೈಗಡಿಯಾರಗಳ ವಿನ್ಯಾಸಕ್ಕಿಂತ ಹೆಚ್ಚು ಮಹಿಳೆಯರ ಕೈಗಡಿಯಾರದ ವಿನ್ಯಾಸಗಳ ಮೇಲೆ ಹೆಚ್ಚು ಗಮನಹರಿಸಿದೆ.
ಇತರ ಉಪ-ಬ್ರಾಂಡ್‌ಗಳಲ್ಲಿ ಮಕ್ಕಳಿಗಾಗಿ ಪ್ರಕಾಶಮಾನವಾದ-ಬಣ್ಣದ ಝೂಪ್ ವಾಚ್‌ಗಳು, ನೀರು-ನಿರೋಧಕ ಟೈಟಾನ್ ಆಕ್ಟೇನ್ ಕೈಗಡಿಯಾರಗಳು ಮತ್ತು ಟೈಟಾನ್ ಖರೀದಿಸಿದ ಸ್ವಿಸ್-ತಯಾರಿಸಿದ ಬ್ರ್ಯಾಂಡ್ ಕ್ಸೈಲಿಸ್ ಸೇರಿವೆ. ಅಷ್ಟೇ ಅಲ್ಲ ಕೆಲವೊಂದು ವಿನ್ಯಾಸಗಳು ಖಗೋಳಶಾಸ್ತ್ರ, ಕಾರ್ಟೂನ್‌ಗಳು, ಆಹಾರಗಳಂತಹ ವಿಷಯಗಳ ಮೇಲೆ ಸಹ ಪ್ರೇರಿತವಾಗಿವೆ. ಸೋನಾಟಾ ಸ್ಟ್ರೈಡ್ ಸ್ಮಾರ್ಟ್ ವಾಚ್‌ಗಳೊಂದಿಗೆ (ಫಿಟ್‌ನೆಸ್ ಕಾ ನಯಾ ಸ್ಟೈಲ್), ಬ್ರ್ಯಾಂಡ್ ಡಿಜಿಟಲ್ ಯುಗವನ್ನು ತೆರೆದ ಮನಸ್ಸಿನಿಂದ ಬರಮಾಡಿಕೊಂಡಿದೆ.
ಕಳೆದ 34 ವರ್ಷಗಳಲ್ಲಿ, ಟೈಟಾನ್ ತೀವ್ರ ಪೈಪೋಟಿಯ ಹೊರತಾಗಿಯೂ ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿದೆ. ಹಾದುಹೋದ ಪ್ರತಿಯೊಂದು ದಶಕದಲ್ಲಿ ಏಳಿಗೆ ಕಂಡಿದೆ. ಮ್ಯಾಗಜೀನ್ ಕ್ಯಾಟಲಾಗ್‌ಗಳಿಂದ ಹಿಡಿದು ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳವರೆಗೆ, ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು, ಮಾಧ್ಯಮಗಳನ್ನು ಟೈಟಾನ್ ಅತ್ಯುತ್ತಮವಾಗಿ ಬಳಸಿಕೊಂಡಿದೆ.
0ಕಾಮೆಂಟ್‌ಗಳು