ಜಾಹಿರಾತು

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕ, ಆಟೋ ಡ್ರೈವರ್ ಆದ ಕಥೆ

ಬೆಂಗಳೂರಿನಲ್ಲಿ ಆಟೋ ಡ್ರೈವರ್‌ನೊಂದಿಗಿನ ಹೃದಯಸ್ಪರ್ಶಿ ಅನುಭವದ ನಂತರ, ಓರ್ವ ಮಹಿಳೆಗೆ ಆ ದಿನ ಜೀವನದ ಬಗ್ಗೆ ಕೆಲವು ಅಮೂಲ್ಯವಾದ ಪಾಠಗಳನ್ನು ಕಲಿಯುವಂತೆ ಆಯ್ತು.

ಬೆಂಗಳೂರು ಮೂಲದ ಸಂಶೋಧಕಿ ನಿಕಿತಾ ಅಯ್ಯರ್ ಅವರು ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ತಮ್ಮ ಅಪರೂಪದ ಅನುಭವವನ್ನು ಬರೆದುಕೊಂಡಿದ್ದಾರೆ. ಸಧ್ಯಕ್ಕೆಇದು ಇದು ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. ಆಟೋ ಡ್ರೈವರ್ ಅವರು ಮಾಜಿ ಇಂಗ್ಲಿಷ್ ಉಪನ್ಯಾಸಕರಾಗಿ ಅವರು ಕಳೆದ ಜೀವನ ಮತ್ತು ಅವರು ತಮ್ಮ ಪ್ರಸ್ತುತ ಮಾರ್ಗವನ್ನು ಹೇಗೆ ಆರಿಸಿಕೊಂಡರು ಎಂಬುದರ ಕುರಿತು ಇದರಲ್ಲಿ ಹೇಳಲಾಗಿದೆ. ಈ ಕಥೆಯು ಆನ್‌ಲೈನ್‌ ಮೂಲಕ ಅನೇಕ ಹೃದಯಗಳನ್ನು ಗೆಲ್ಲುತ್ತಿದೆ.

Pattabhi Raman,once English Lecturer, now Auto Driver
ಇಂಗ್ಲಿಷ್ ಉಪನ್ಯಾಸಕ, ಈಗ ಆಟೋ ಡ್ರೈವರ್

ನಿಕಿತಾ ಅವರು, 74 ವರ್ಷದ ಪಟ್ಟಾಭಿ ರಾಮನ್ ಅವರನ್ನು ಹೇಗೆ ಭೇಟಿಯಾದರು ಎಂಬುದರೊಂದಿಗೆ ತಮ್ಮ ಬರವಣಿಗೆ ಶುರು ಮಾಡಿದ್ದಾರೆ. ವಾಸ್ತವವಾಗಿ, ನಿಕಿತಾ ಕೆಲಸಕ್ಕೆ ಹೋಗುವಾಗ ಹೆದ್ದಾರಿಯ ಬಳಿ ಸಿಕ್ಕಿಹಾಕಿಕೊಂಡಿದ್ದರು. ಅವಳನ್ನು ನೋಡುತ್ತಾ, ವಯಸ್ಸಾದ ವ್ಯಕ್ತಿಯೋರ್ವ ಅವಳ ಬಳಿ ಆಟೋ ನಿಲ್ಲಿಸಿ ನಿರರ್ಗಳವಾಗಿ ಇಂಗ್ಲಿಷ್ನಲ್ಲಿ ಅವಳಿಗೆ ಆಟೋ ಹತ್ತುವಂತೆ ಹೇಳಿದರು. "ದಯವಿಟ್ಟು ಒಳಗೆ ಬನ್ನಿ, ಮೇಡಂ, ನಿಮಗೆ ತೋಚಿದಷ್ಟು ಹಣ ಕೊಡುವಿರಂತೆ (Please come in, ma’am, you can pay what you want) " ಎಂದು ಕೇಳಿದರಂತೆ. ಅವರ ದಯೆಯಿಂದ ಆಶ್ಚರ್ಯಚಕಿತಳಾದ ನಿಕಿತಾ ಅವರು ಆಟೋ ಹತ್ತಿದರು. ತನ್ನ ಕುತೂಹಲವನ್ನು ತಣಿಸಲು ಪಟ್ಟಾಭಿ ರಾಮನ್ ಅವರೊಂದಿಗೆ ಮಾತಿಗೆ ಇಳಿದರು.

ಮುಂಬೈನ ಪೊವಾಯ್‌ನಲ್ಲಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿ, ಅಲ್ಲಿ 20 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ ಎಂದು ಪಟ್ಟಾಭಿಯವರು ಹೇಳುತ್ತಾರೆ. ಹಾಗೆ ಕರ್ನಾಟಕದಲ್ಲಿ ಅಧ್ಯಾಪಕ ಕೆಲಸ ಸಿಗಲಿಲ್ಲ ಎಂದು ಕೂಡ ಹೇಳುತ್ತಾರೆ. ಕಾರಣ ಅವರಿಗೆ ಕೇಳಿದ ಒಂದೇ ಒಂದು ಪ್ರಶ್ನೆ ಎಂದರೆ- ಅವರ ಜಾತಿಯ ಬಗ್ಗೆ. "ಅವರಿಗೆ ಕೇಳಿದ ಒಂದೇ ಒಂದು ಪ್ರಶ್ನೆ, 'ನಿಮ್ಮ ಜಾತಿ ಯಾವುದು?' ಎಂದು. ಯಾವಾಗ ಅವರು ತಮ್ಮ ಹೆಸರು ಶ್ರೀ ಪಟ್ಟಾಭಿ ರಾಮನ್ ಎಂದು ಹೇಳಿದರೋ, ಆಗ 'ನಾವು ನಿಮಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ' ಎಂದು ಹೇಳಿದರು " ಎಂದು ನಿಕಿತಾ ಅವರು, ಪಟ್ಟಾಭಿ ರಾಮನ್ ಅವರ ಮಾತುಗಳನ್ನು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ನಂತರ ಅವರು 60 ನೇ ವಯಸ್ಸಿನಲ್ಲಿ ಕರ್ನಾಟಕಕ್ಕೆ ಬಂದು ಮತ್ತು ಇಲ್ಲಿ ಶಿಕ್ಷಕರಿಗೆ ಸರಿಯಾಗಿ ಸಂಬಳ ಸಿಗದಿರುವ ಕಾರಣ ಆಟೋ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ''ಶಿಕ್ಷಕರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ನೀವು ಗಳಿಸಬಹುದಾದ ಗರಿಷ್ಠ ಸಂಬಳ ಎಂದರೆ 10-15,000 ರೂ. ಅಲ್ಲದೇ ಅದು ಖಾಸಗಿ ಸಂಸ್ಥೆಯಾಗಿದ್ದರಿಂದ ನನಗೆ ಪಿಂಚಣಿ ಕೂಡ ಸಿಗುತ್ತಿರಲಿಲ್ಲ. ರಿಕ್ಷಾ ಓಡಿಸುವ ಮೂಲಕ ನನಗೆ ದಿನಕ್ಕೆ ಕನಿಷ್ಠ 700-1500 ರೂಪಾಯಿ ಸಿಗುತ್ತದೆ, ಅದು ನನಗೆ ಮತ್ತು ನನ್ನ ಗೆಳತಿಗೆ ಸಾಕು, ”ಎಂದು ಪಟ್ಟಾಭಿ ರಾಮನ್ ನಗುತ್ತಾ ಹೇಳಿದರು.

ನಿಕಿತಾ ಅವರು ಬರೆದುಕೊಂಡಿರುವ ಪೋಸ್ಟ್ ಅನ್ನು ಇಲ್ಲಿ ಓದಿ.


ಪಟ್ಟಾಭಿ ರಾಮನ್ ಅವರು "ಗೆಳತಿ" ಎಂದು ಹೇಳಿ ಏಕೆ ನಕ್ಕೆ ಎಂಬುದರ ಬಗ್ಗೆ ಸಹ ವಿವರಿಸಿದರು. ವಾಸ್ತವವಾಗಿ, ಅವರು ತಮ್ಮ  ಹೆಂಡತಿಯನ್ನು ಗೆಳತಿ ಎಂದು ಕರೆಯುತ್ತಾರೆ. ಏಕೆಂದರೆ, ಅವರು ಯಾವಾಗಲೂ ಅವಳನ್ನು ಸಮಾನವಾಗಿ ಪರಿಗಣಿಸಲು ಬಯಸುತ್ತಾರೆ. "ಅವಳು ನನ್ನ ಹೆಂಡತಿ, ಆದರೆ ನಾನು ಅವಳನ್ನು ನಾನು ಗೆಳತಿ ಎಂದು ಕರೆಯುತ್ತೇನೆ. ಏಕೆಂದರೆ, ನೀವು ಯಾವಾಗಲೂ ಅವರನ್ನು ನಿಮ್ಮ ಸಮಾನರಾಗಿ ಕಾಣಬೇಕು. ನೀವು ಒಮ್ಮೆ ಹೆಂಡತಿ ಅಂತ ಕರೆದ ಮೇಲೆ, ಗಂಡಂದಿರು ಅವಳನ್ನು ತಮ್ಮ ಸೇವೆ ಮಾಡುವ ಗುಲಾಮ ಎಂದು ಭಾವಿಸುತ್ತಾರೆ. ಆದರೆ ಅವಳು ನನಗಿಂತ ಏನೂ ಕಡಿಮೆಯಿಲ್ಲ. ವಾಸ್ತವವಾಗಿ, ಅವಳು ಕೆಲವೊಂದು ವಿಷಯದಲ್ಲಿ ನನಗಿಂತ ಶ್ರೇಷ್ಠಳು. ಆಕೆಗೆ 72 ವರ್ಷ ಮತ್ತು ನಾನು ದಿನಕ್ಕೆ 9-10 ಗಂಟೆಗಳ ಕಾಲ ಕೆಲಸ ಮಾಡುವಾಗ, ಅವಳು ಮನೆಯನ್ನು ನೋಡಿಕೊಳ್ಳುತ್ತಾಳೆ, ” ಎಂದು ಪಟ್ಟಾಭಿ ರಾಮನ್ ಹೇಳುತ್ತಾರೆ.

ಪಟ್ಟಾಭಿ ಅವರಿಗೆ ಓರ್ವ ಮಗ ಸಹ ಇದ್ದಾರೆ. “ನಾವು ಕಾಡುಗೋಡಿಯಲ್ಲಿ 1 BHK ನಲ್ಲಿ ವಾಸಿಸುತ್ತಿದ್ದೇವೆ. ನನ್ನ ಮಗ ನಮ್ಮ ಮನೆಯ ಬಾಡಿಗೆಗೆ 12,000 ರೂ ಬಾಡಿಗೆಯನ್ನು ಪಾವತಿಸಲು ಸಹಾಯ ಮಾಡುತ್ತಾನೆ, ಆದರೆ ಅದನ್ನು ಮೀರಿ, ನಾವು ನಮ್ಮ ಮಕ್ಕಳನ್ನು ಅವಲಂಬಿಸಿಲ್ಲ.  ಅವರು ತಮ್ಮ ಜೀವನವನ್ನು ನಡೆಸುತ್ತಾರೆ ಮತ್ತು ನಾವು ನಮ್ಮ ಜೀವನವನ್ನು ಸಂತೋಷದಿಂದ ಬದುಕುತ್ತೇವೆ, ”ಎಂದು ಅವರು ಹೇಳಿದರು.

"ಜೀವನದ ಬಗ್ಗೆ ಒಂದೇ ಒಂದು ದೂರು ಇಲ್ಲ. ಯಾವುದೇ ವಿಷಾದವಿಲ್ಲ. ಈ ಎಲೆಮರೆಯ ವೀರರಿಂದ ಕಲಿಯಲು ತುಂಬಾ ಇದೆ. ನನ್ನ ಗುರುವಾರ ಬೆಳಿಗ್ಗೆ ಒಂದು ಜೀವನ ಪಾಠವಾಗಿತ್ತು" ಎಂದು ಬರೆದು ನಿಕಿತಾ ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದರು.

"ದೇವರು ನಿನ್ನನ್ನು ಆಶೀರ್ವದಿಸಲಿ ನಿಕಿತಾ. ಅದ್ಭುತ ಕಥೆ ಮತ್ತು ಅಂತಹ ಎಲೆಮರೆಯ ವೀರರ ಬಗ್ಗೆ ಕೇಳಲು ತುಂಬಾ ಸಂತೋಷವಾಗಿದೆ" ಎಂದು ಬಳಕೆದಾರರು ಬರೆದಿದ್ದಾರೆ.

ಇನ್ನೊಬ್ಬ ಬಳಕೆದಾರರು, "ಸ್ಫೂರ್ತಿದಾಯಕ. ಉತ್ತಮ ಆರೋಗ್ಯದೊಂದಿಗೆ, ಅವರು ಈ ವಯಸ್ಸಿನಲ್ಲಿ ತಮ್ಮ ಕುಟುಂಬದ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುತ್ತಿರುವುದಕ್ಕೆ ಸಂತೋಷವಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಇದೆಲ್ಲಾ ಓದಿದ ಮೇಲೆ, ನಿಮ್ಮ ಅನಿಸಿಕೆ ಏನು ಎಂದು ಕಾಮೆಂಟ್ ಅಲ್ಲಿ ತಿಳಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು