ಚೀನಾದಲ್ಲಿ ಹರಡಲು ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ, ಕೋವಿಡ್ ಸಾಂಕ್ರಾಮಿಕ ರೋಗ ಪ್ರಪಂಚದಾದ್ಯಂತ ಹರಡಲು ಪ್ರಾರಂಭಿಸಿತು. ಇಡೀ ಪ್ರಪಂಚವೇ ಗರ ಬಡಿದವರಂತೆ ಸ್ತಬ್ಧಗೊಂಡಿತು. ಜನ ಸಾಮಾಜಿಕವಾಗಿ ಬೆರೆಯುವುದನ್ನು ನಿಲ್ಲಿಸಿಬಿಟ್ಟರು. ಆರು ಅಡಿ ಅಂತರವು ಸಿಗ್ಮಾ ನಿಯಮದಂತೆ ಅತ್ಯಾವಶ್ಯಕವಾಯ್ತು. ಮನೆಗಳಿಗೆ ಒಳಗಿನಿಂದ ಬೀಗ ಹಾಕಿದರೆ, ಕಾರ್ಖಾನೆಗಳು ಕಚೇರಿಗಳು ಹೊರಗಿನಿಂದ ಬೀಗ ಬಡೆದುಕೊಂಡವು. ಮುಂದೆ ಏನು? ಎತ್ತ? ಅಂತ ತಿಳಿಯದೆ ಜನರಷ್ಟೇ ಅಲ್ಲ, ಸರ್ಕಾರಗಳು ಸಹ ಕಂಗೆಟ್ಟಿದ್ದವು.

 ಕೋವಿಡ್-೧೯ ಜಗತ್ತಿನಾದ್ಯಂತ ಸುಮಾರು 1,64,000ಕ್ಕಿಂತ ಹೆಚ್ಚು ಬಳಿ ತಗೆದುಕೊಂಡಿದ್ದು ಅಲ್ಲದೆ, ಎರಡು ಮಿಲಿಯನ್ ಗಿಂತ ಹೆಚ್ಚು ಜನರನ್ನ ಸೋಂಕಿತರನ್ನಾಗಿ ಮಾಡಿತು. ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಂಡು, ಕೆಲಸ ಹೇಗೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಸರ್ಕಾರದಿಂದ ಹಿಡಿದು ಅನೇಕ ಸಂಘ ಸಂಸ್ಥೆಗಳಿಗೆ ಯೋಚನೆ ಮಾಡುವಂತೆ ಪ್ರೇರೇಪಿಸಿತು. ಲಾಕ್‌ಡೌನ್‌ನ ಆರಂಭದ ದಿನಗಳು ಕಷ್ಟವಾಗಿರಲಿಲ್ಲ. ಆದರೆ ಯಾವಾಗ್ ಜನರ ಆಹಾರ ಮತ್ತು ವೈದ್ಯಕೀಯ ಸಾಮಾಗ್ರಿಗಳು ಖಾಲಿಯಾದಾಗ,  ಒಂದೊಂದಾಗಿ ಉದ್ಭವಿಸಲು ಶುರುವಾದವು. ಕ್ವಾರಂಟೈನ್ ನಲ್ಲಿ ಇದ್ದಂತಹ ಜನರ ಬದುಕಂತೂ ಇದಕ್ಕಿಂತ ಅತೀ ದುಸ್ತರವಾಗಿತ್ತು. 

ಇಲ್ಲಿಯ ತನಕ ಸಾಮಾಜಿಕ ಒಡನಾಟಗಳ ಮೇಲೆ ಅವಲಂಬಿತವಾಗಿದ್ದ ಜೀವನಕ್ಕೆ, ಇದೊಂದು ಕಠಿಣ ಸವಾಲಾಯ್ತ. "ಅವಶ್ಯಕತೆಯೇ  ಆವಿಷ್ಕಾರದ ತಾಯಿ" ಎಂದು ಹೇಳುವಂತೆ, ಈ ಎಲ್ಲ ಅವಶ್ಯಕತೆಯನ್ನು ಸರಿದೂಗಳು ಮನುಷ್ಯ ಒಂದು ಸುಗಮ ದಾರಿಯನ್ನು ಕಂಡುಕೊಂಡ. ಅವುಗಳೇ "ಡ್ರೋನ್ ಗಳು(ಡ್ರೋನ್ಸ್) ( Drones) "

drone used for spraying disinfectants
ಸೋಂಕುನಿವಾರಕ ಸಿಂಪಡಿಸುವಲ್ಲಿ ನಿರತವಾದ ಡ್ರೋನ್ 
ಹಕ್ಕಿಗಳಂತೆ ಸ್ವಚ್ಛಂದವಾಗಿ ಆಗಸದಲ್ಲಿ ಹಾರಡುತ್ತಿದ್ದ ಈ ಪುಟ್ಟ ಯಂತ್ರಗಳು, ಮಾನವನ ಆಜ್ಞೆಯನ್ನು ಶಿರಸಾ ಪಾಲಿಸುವ ವೈಶಿಷ್ಟ್ಯತೆಯನ್ನು ಹೊಂದಿದ್ದವು. ಆತ ಈ ಕಡೆ ಹೋಗು ಎಂದರೆ ಈ ಕಡೆಗೆ, ಆ ಕಡೆಗೆ ಎಂದರೆ ಆ ಕಡೆಗೆ ವಾಲುವ ಈ ಯಂತ್ರಗಳು, ಅತ್ಯುತ್ತಮ ಮತ್ತು ಅಗ್ಗದ ವಸ್ತು ಆಗಿವೆ.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ, ವಿಶೇಷವಾಗಿ ನಾಲ್ಕು ಸಂದರ್ಭಗಳಲ್ಲಿ, ಡ್ರೋನ್‌ಗಳು ನಂಬಲಾರದ ಮಟ್ಟಿಗೆ ಉಪಯೋಗಕ್ಕೆ ಬಂದವು. ಅವುಗಳು ನೀಡಿದ ಸಹಾಯಗಳ  ಅನುಗುಣವಾಗಿ,  ಅವುಗಳನ್ನು ಒಟ್ಟಾರೆಯಾಗಿ ನಾಲ್ಕು ಸಂದರ್ಭಗಳನ್ನು ಇಲ್ಲಿ ವಿವರಿಸಿ ಹೇಳುತ್ತೇನೆ. 

ವೈದ್ಯಕೀಯ ಮತ್ತು ಆಹಾರ ಸರಬರಾಜು ವಿತರಣೆ ಕೆಲಸದಲ್ಲಿ ಬಳಕೆ  :

ವುಹಾನ್ ಆಸ್ಪತ್ರೆಗಳಿಗೆ ಔಷಧ ವಿತರಣೆ ಮಾಡುವುದು ಮತ್ತು ಮಾದರಿಗಳನ್ನು ಸಾಗಿಸಲಿಕ್ಕೆ ದ್ರೋಣೇಗಳನ್ನು ಪ್ರಪ್ರಥಮವಾಗಿ ಈ ಹೋರಾಟದಲ್ಲಿ ಬಳಸಲಾಯ್ತು. ಬರಿ ಕೊಂಡೊಯ್ಯುವುದಷ್ಟೇ ಅಲ್ಲಾ, ತ್ವರಿತ ಗತಿಯಲ್ಲಿ ಕೊಂಡೊಯ್ಯುವ ಕೆಲಸವನ್ನ ಈ ಯಂತ್ರಗಳು ಮಾಡಿದವು. ಈ ಮೂಲಕ, ವೈದ್ಯಕೀಯ ಸಿಬ್ಬಂದಿಗಳಲ್ಲಿ ಸೋಂಕು ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡಿತು. ವೈರಸ್ ವಿರುದ್ಧದ ಹೋರಾಟದಲ್ಲಿ, ಡ್ರೋನ್ ಗಳ  ಈ ಕೆಲಸ ಒಂದು ಗಮನಾರ್ಹ ವ್ಯತ್ಯಾಸವನ್ನು  ತಂದಿತು. 

ಭಾರತದ ಈಶಾನ್ಯ ಪ್ರದೇಶಗಳಲ್ಲಿ ಲಸಿಕೆಗಳನ್ನು ಸಾಗಿಸಲು, ಐಸಿಎಂಆರ್‌ (ICMR) ಡ್ರೋನ್‌ಗಳನ್ನು ಬಳಸಿಕೊಂಡಿತು 15 ಕಿಲೋಮೀಟರ್ ಹಾದಿಯನ್ನು ಕೇವಲ 15 ನಿಮಿಷಗಳಲ್ಲಿ ಕ್ರಮಿಸುವ ಮೂಲಕ, ಲಸಿಕೆಗಳನ್ನು ವಿತರಿಸಲು ನೆರವಾಯ್ತು.

ಬರಿ ವೈದ್ಯಕೀಯ ಸಾಮಾಗ್ರಿಗಳನ್ನು ಅಷ್ಟೇ ಅಲ್ಲ, ದಿನಸಿಗಳನ್ನೂ ಮುಟ್ಟಿಸಲು ಸಹ ಡ್ರೋನ್ ಉಪಯೋಗಿಸಲಾಯ್ತು. ಅಮೇರಿಕಾ, ಆಸ್ಟ್ರೇಲಿಯಾ ದಂತಹ ದೇಶಗಳು, ರೋಗ ಪೀಡಿತ ಪ್ರದೇಶಗಳಿಗೆ ಡ್ರೋನ್ ಸಹಾಯದ ಮೂಲಕ ಆಹಾರ ಮತ್ತು ದಿನಸಿಗಳನ್ನು ಸರಬರಾಜು ಮಾಡಿವೆ.

ದೇಹ ತಾಪಮಾನದ ಮೇಲೆ ನಿಗಾವಹಿಸಲು ಬಳಕೆ :

ಚೀನಾದಲ್ಲಿ ರೋಗವು ಶರವೇಗದಿಂದ ಹರಡುತ್ತಿದ್ದ ವೇಳೆ, ಅಲ್ಲಿನ ಸ್ಥಳೀಯ ಅಧಿಕಾರಿಗಳು ಡ್ರೋನ್ ಗಳನ್ನ ತಾಪಮಾನ ಮಾಪಕವನ್ನಾಗಿ ಸಹ ಬಳಸಿದರು. ದೊಡ್ಡ ದೊಡ್ಡ ವಾಸ  ಸಂಕೀರ್ಣಗಳಲ್ಲಿ, ಕ್ವಾರಂಟೈನ್ ಆಗಿದ್ದ ವ್ಯಕ್ತಿಗಳ ಸಮೀಪ ಹೋಗದೆ, ಅವರ ಇದ್ದ ಮಹಡಿಯ ಕಿಟಕಿಯ ಬಳಿ ಡ್ರೋನ್ ಹಾರಿಸಿ, ಅದಕ್ಕೆ ಜೋಡಿಸಲಾಗಿದ್ದ ಇನ್ಫ್ರಾ ರೆಡ್ ಕ್ಯಾಮೆರಾ ಸಹಾಯದಿಂದ ತಾಪಮಾನ ಅಳೆಯುತ್ತಿದ್ದರು. ಈ ರೀತಿಯಿಂದ ಸಂಪರ್ಕವಿಲ್ಲದೆಯೇ, ಜನರ ಶುಶ್ರುಷೆ ಮಾಡುವಲ್ಲಿ ಡ್ರೋನ್ ಮಹತ್ವದ ಕಾರ್ಯ ವಹಿಸಿದೆ. ಇದರಿಂದಾಗಿ, ಸರ್ಕಾರೀ ಸಿಬ್ಬಂದಿ ಸಹ ನಿಶ್ಚಿಂತೆಯಿಂದ ಕೆಲಸ ಮಾಡುವಂತೆ ಆಯ್ತು.

ಸೋಂಕುನಿವಾರಕ ಸಿಂಪಡಿಸುವುದಕ್ಕಾಗಿ ಬಳಕೆ :

ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸಲು ಮತ್ತು ಕೋವಿಡ್-19 ಹರಡುವುದನ್ನು ತಡೆಯಲು, ಆರೋಗ್ಯ ಅಧಿಕಾರಿಗಳು ಸಂಭಾವ್ಯ ಸೋಂಕಿತ ಪ್ರದೇಶಗಳಲ್ಲಿ ಸೋಂಕುನಿವಾರಕವನ್ನು ಸಿಂಪಡಿಸಲು ಸ್ಪ್ರೇ ಡ್ರೋನ್‌ಗಳನ್ನು ಆಯ್ಕೆ ಮಾಡಿಕೊಂಡರು. ಸಧ್ಯಕ್ಕೆ ಇರುವ ವಿಧಾನಗಳಿಗಿಂತ, ಡ್ರೋನ್ ಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದವು. ಹಳೆ ವಿಧಾನಕ್ಕೆ ಹಿಡಿಯುವ ಸಮಯದ, ಅರ್ಧದಷ್ಟು ಸಮಯದಲ್ಲಿ, ಇವು ಅತಿ ಹೆಚ್ಚು ಜಾಗವನ್ನು ಕ್ರಮಿಸಿ, ಹಳೆ ವಿಧಾನಗಳಿಗಿಂತ 50 ಪಟ್ಟು ವೇಗವಾಗಿ ಕೆಲಸ ಸಾಮರ್ಥ್ಯ ಹೊಂದಿದ್ದಾವೆ. 

 ಈ ಡ್ರೋನ್‌ಗಳನ್ನು  ಬಳಸುವುದು ತುಂಬಾ ಸರಳ. ಅಷ್ಟೇ ಅಲ್ಲಾ . ತ್ವರಿತ ನಿಯೋಜನೆಗೊಳ್ಳುವ ಈ ಯಂತ್ರಗಳು, ಕೈಗೆಟುಕುವ ದರದಲ್ಲಿ ದೊರೆಯುತ್ತವೆ. ಸೋಂಕು ನಿವಾರಕವನ್ನು ಸಿಂಪಡಿಸುವಾಗ, ಆರೋಗ್ಯ ಮತ್ತು ಪೌರ ಕಾರ್ಮಿಕರಿಗೆ ಸೋಂಕು ತಗುಲುವ ಸಾಧ್ಯತೆಗಳಿದ್ದು, ಆ ಕೆಲಸವನ್ನು ಡ್ರೋನ್ ಮಾಡಿದರೆ ಆ ಅಪಾಯವನ್ನು ಕಡಿಮೆ ಮಾಡಬಹುದು. ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್, ಕೊಲಂಬಿಯಾ, ಚಿಲಿ ಮತ್ತು ಯುಎಇಯಂತಹ ದೇಶಗಳಲ್ಲಿ ಕರೋನವೈರಸ್ ಹರಡುವಿಕೆಯನ್ನು ನಿರ್ಬಂಧಿಸಲು ಡ್ರೋನ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ.

ಸಾರ್ವಜನಿಕ ಪ್ರದೇಶದ ಮೇಲೆ ಕಣ್ಗಾವಲು ಮತ್ತು ಮಾಹಿತಿ ಪ್ರಸಾರಕಾಗಿ:

ಲಾಕ್‌ಡೌನ್ ತನ್ನದೇ ಆದ ವಿಶೇಷವಾದ ನಿಯಮಗಳನ್ನು ವಿವಿಧ ದೇಶಗಳಲ್ಲಿ ಜಾರಿಗೆ ತಂದಿತು. ಆದಾಗ್ಯೂ, ಕೆಲ ಪ್ರದೇಶಗಳಲ್ಲಿ ಜನರು ತಿಳಿದೋ ಅಥವಾ ತಿಳಿಯದೆಯೋ, ಅಥವಾ ನಿಯಮಗಳ ಅರಿವು ಇಲ್ಲದೆಯೋ, ಮನೆ ಬಿಟ್ಟು ಹೊರಗೆ ಬರಲು ಶುರು ಮಾಡಿದರು. ಇಂತಹ ಪ್ರದೇಶಗಳಲ್ಲಿ, ಸ್ಥಳೀಯ ಪೊಲೀಸರು ಮತ್ತು ಪುರಸಭೆಯ ಅಧಿಕಾರಿಗಳು ಜನರ ಚಲನವಲನಗಳನ್ನು ಪತ್ತೆಹಚ್ಚಲು ಮತ್ತು ಜನರು ಸಾಮಾಜಿಕವಾಗಿ ಬೇರೆಯಂದತೆ ತಡೆಯಲು ಡ್ರೋನ್‌ಗಳನ್ನು ಬಳಸಿದರು.

ಈ ರೀತಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಲ್ಲಿ ಮತ್ತು ಇತರ ಸಿಬ್ಬಂದಿಗಳಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಡ್ರೋನ್‌ಗಳನ್ನು ಪರಿಚಯಿಸಲಾಯಿತು. ಅಧಿಕಾರಿಗಳು ಇಂತಹ ಪ್ರದೇಶಗಳಿಗೆ ಖುದ್ದು ಹೋಗುವ ಬದಲು, ಡ್ರೋನ್ ಗಳನ್ನ ಕಳುಹಿಸಲು ಶುರು ಮಾಡಿದರು. ಕೇವಲ ಒಂದು ಕಂಟ್ರೋಲ್ ರೂಮ್ ಅಲ್ಲಿ ಕೂತು, ದೊಡ್ಡ ಪ್ರದೇಶಗಳ ಮೇಲೆ ನಿಗಾ ವಹಿಸಲು ಡ್ರೋನ್ ತಂತ್ರಜ್ಞಾನ ಸಹಕಾರಿ ಆಯಿತು.

ಧ್ವನಿವರ್ಧಕಗಳನ್ನು ಜೋಡಿಸಿಕೊಂಡಿರುವ ಡ್ರೋನ್‌ಗಳನ್ನು, ಸಾರ್ವಜನಿಕ ಹಿತಾಸಕ್ತಿಯ ಸಂದೇಶಗಳನ್ನು ಪ್ರಸಾರ ಮಾಡಲು ಬಳಸಲಾಯ್ತು. ಜನರು ಮನೆಯೊಳಗೆ ಇದ್ದು, ಸೂಕ್ತ ಕ್ರಮಗಳನ್ನು ತೆಗೆದುಕೊಂಡು, ಸಾಮಾಜಿಕವಾಗಿ ತಮ್ಮನ್ನು ತಾವು ಪ್ರತ್ಯೇಕಿಸಿ  ಮತ್ತು ತಮ್ಮ ಮನೆಯಿಂದ ಹೊರಬರುವಾಗ ಮಾಸ್ಕ ಧರಿಸಿಕೊಂಡು ಹೊರಬರುವಂತಹ ಸಂದೇಶಗಳನ್ನು ಇವುಗಳ ಮೂಲಕ ಹರಿ ಬಿಟ್ಟರು. ಪರಿಣಾಮವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗೂ ಸಹ ಸಾಂಕ್ರಾಮಿಕ ರೋಗದ ಬಗ್ಗೆ ಅರಿವನ್ನು, ಸರಿಯಾದ ಸಮಯದಲ್ಲಿ ನೀಡಲು ಸಾಧ್ಯವಾಯ್ತು.

ಮುಂದೆ ಏನು ?

ಈ ಹಿಂದೆ, ಕೇವಲ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿದ್ದ ಈ ಯಂತ್ರಗಳು, ಈಗ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗಿ ಹೊರಹೊಮ್ಮಿವೆ. ವಾಸ್ತವವಾಗಿ, ಹಲವಾರು ದೇಶಗಳು ವಿವಿಧ ಅಪ್ಲಿಕೇಶನ್‌ಗಳಲ್ಲಿ/ ಕಾರ್ಯತಂತ್ರಗಳಲ್ಲಿ, ಡ್ರೋನ್‌ಗಳನ್ನು ಬಳಸಲು ಪ್ರಾರಂಭಿಸಿವೆ.

ದೇಶಗಳು ಸಾಂಕ್ರಾಮಿಕ ರೋಗದ ವಿವಿಧ ಅಲೆಯನ್ನು  ಎದುರಿಸುವ ಮುನ್ನ, ವೈರಸ್ ಹರಡುವುದನ್ನು ತಡೆಯಲು ಬಿಗಿಯಾದ ನಿರ್ಬಂಧಗಳನ್ನು ಹೊಂದಿರುವುದು ಬಹಳ ಮುಖ್ಯ. ಹಿಂದಿನ ವರ್ಷದಲ್ಲಿ ಕಲಿತ ಪಾಠಗಳು ಸಾಂಕ್ರಾಮಿಕ ರೋಗವನ್ನು ಹೇಗೆ ತಡೆಯಬೇಕು ಎಂಬುದನ್ನ ಹೇಳಿಕೊಟ್ಟಿವೆ. ಸಂಪರ್ಕ ರಹಿತ ಚಲಾವಣೆ, ಆಡಳಿತ ಮತ್ತು ಕೆಲಸಗಳು ಆರಂಭವಾಗಬೇಕು ಎಂದರೆ, ಇದಕ್ಕೆ ಈ ಯಂತ್ರಗಳ ಸಹಾಯ ಅತ್ಯವಶ್ಯಕ.

ಕೈಗೆಟುಕುವ ದರ, ಸರಳ ಕಾರ್ಯ ನಿರ್ವಹಣೆ ಮತ್ತು ಅಪಾಯ ರಹಿತವಾದ ಯಂತ್ರ ಇದಕ್ಕಿಂತ ಬೇರೆ ಯಾವುದೇ ಇಲ್ಲಾ